ಕಂಗನಾ ರನೌತ್ ಧೈರ್ಯವನ್ನು ಮೆಚ್ಚುತ್ತೇನೆ ಎಂದ ನಟ ಸಿದ್ಧಾರ್ಥ್ ಗರ್ಲ್‌ಫ್ರೆಂಡ್ ಅದಿತಿ ರಾವ್ ಹೈದರಿ
ಬಹುಭಾಷಾ ನಟಿ ಅದಿತಿ ರಾವ್ ಹೈದರಿ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 37 ನೇ ವರ್ಷಕ್ಕೆ ಕಾಲಿಟ್ಟಿರುವ ಅವರ ಈ ಹಿಂದಿನ ಸಂದರ್ಶನಗಳು ವೈರಲ್ ಆಗುತ್ತಿವೆ. ಅವುಗಳಲ್ಲಿ ಒಂದು ನಟಿ ಕಂಗನಾ ರನೌತ್ ಅವರನ್ನು ಹೊಗಳಿರುವುದು. ಆದಿತಿ, ನನಗೆ ಕಂಗನಾ ಅವರ ಧೈರ್ಯ ತುಂಬಾ ಇಷ್ಟ ಎಂದಿದ್ದರು.
ಅದಿತಿ ರಾವ್ ಹೈದರಿ ನಿಜವಾಗಿಯೂ ತಾವು ಕಂಗನಾ ರನೌತ್ ಅವರನ್ನು ಮೆಚ್ಚುವುದಾಗಿ, ತೊಂದರೆಯಾಗುತ್ತದೆ ಎಂದು ಗೊತ್ತಿದರೂ ಅವರು ತೋರುವ ಧೈರ್ಯವನ್ನು ಮೆಚ್ಚುವುದಾಗಿಯೂ ಹೇಳಿದ್ದಾರೆ. 2017 ರಲ್ಲಿ ಮ್ಯಾನ್ಸ್ ವರ್ಲ್ಡ್‌ಗೆ ನೀಡಿದ್ದ ಹಳೆಯ ಸಂದರ್ಶನದಲ್ಲಿ, ಕಂಗನಾ ರನೌತ್ ಹೊರತುಪಡಿಸಿ ವಿದ್ಯಾ ಬಾಲನ್ ಮತ್ತು ದೀಪಿಕಾ ಪಡುಕೋಣೆಯನ್ನು ಇಷ್ಟಪಡುತ್ತಾರೆ ಎಂದು ಬಹಿರಂಗಪಡಿಸಿದ್ದರು.

ಅದಿತಿ ರಾವ್ ಹೈದರಿಗೆ 37 ನೇ ಹುಟ್ಟುಹಬ್ಬ
37 ನೇ ಹುಟ್ಟುಹಬ್ಬದಂದು, ಅವರು ತಮ್ಮ ಸಮಕಾಲೀನರ ಬಗ್ಗೆ ಮಾತನಾಡುವಾಗ ರಣಬೀರ್ ಕಪೂರ್ ಅವರನ್ನು ತನ್ನ ನೆಚ್ಚಿನ ನಟ ಎಂದು ಹೇಳಿದ್ದರು. "ನನಗೆ ಕಂಗನಾ ರನೌತ್ ತುಂಬಾ ಇಷ್ಟ. ಅವರು ಬಯಸಿದ್ದನ್ನು ಮಾಡುತ್ತಾಳೆ ಎಂದು ನಾನು ಅಂದುಕೊಳ್ಳುತ್ತೇನೆ. ತೊಂದರೆ ಆಗುತ್ತದೆ ಎಂದು ಗೊತ್ತಿದ್ದರು ಅವರು ತೋರಿಸುವ ಧೈರ್ಯವನ್ನು ನಾನು ತುಂಬಾ ಮೆಚ್ಚುತ್ತೇನೆ" ಎಂದಿದ್ದಾರೆ.
ಮುಂದುವರಿದು ಮಾತನಾಡಿದ್ದ ಅವರು, "ನನಗೆ ದೀಪಿಕಾ ಪಡುಕೋಣೆ ಕೂಡ ಅಚ್ಚುಮೆಚ್ಚು. ಯಾರ ಬೆಂಬಲವಿಲ್ಲದೇಯೂ ಅವರು ತಮ್ಮ ಕೆಲಸ ಶುರು ಮಾಡಿ, ಇಷ್ಟು ಬೆಳೆದಿದ್ದಾರೆ. ಅವರು ತಮ್ಮ ವೃತ್ತಿಜೀವನದವನ್ನು ಬ್ಯಾಲೆನ್ಸ್ ಮಾಡುತ್ತಿದ್ದಾರೆ" ಎಂದು ಉಲ್ಲೇಖಿಸಿದ್ದಾರೆ. ಇದರ ಜೊತೆಗೆ ನನ್ನ ಸಮಕಾಲೀನರಲ್ಲದಿದ್ದರೂ ನಾನು ವಿದ್ಯಾ ಬಾಲನ್ ಅವರ ಹೆಸರು ತೆಗೆದುಕೊಳ್ಳುತ್ತೇನೆ. ಏಕೆಂದರೆ ಅವರೆಂದರೂ ನನಗೆ ತುಂಬಾ ಇಷ್ಟ. ವಿದ್ಯಾ ಯಾವಾಗಲೂ ತಾನು ಯಾವುದನ್ನು ನಂಬಿದ್ದೇನೋ ಅದನ್ನು ಮಾಡುತ್ತಾರೆ ಮತ್ತು ಅವರೊಬ್ಬ ಉತ್ತಮ ನಟಿ " ಎಂದು ಅದಿತಿ ಸಂದರ್ಶನದಲ್ಲಿ ಹೇಳಿದ್ದಾರೆ.

ರಣಬೀರ್ ಕಪೂರ್ ಅದಿತಿಯ ನೆಚ್ಚಿನ ನಟ
ರಣಬೀರ್ ಕಪೂರ್ ನನ್ನ ಅಚ್ಚುಮೆಚ್ಚಿನ ನಟ. ಅವರೊಂದು ಅದ್ಭುತ ಪ್ರತಿಭೆ. ಅವರೊಂದಿಗೆ ಮತ್ತೆ ಕೆಲಸ ಮಾಡಲು ಬಯಸುವುದಾಗಿಯೂ ಹೇಳಿದ್ದರು. ಇದರ ಜೊತೆಗೆ ನಟ ರಣವೀರ್ ಸಿಂಗ್ ಅವರ ಕ್ರೇಜಿ ಎನರ್ಜಿ ತನಗೆ ಇಷ್ಟವಾಗಿದೆ ಎಂದು ಅದಿತಿ ರಾವ್ ಹೈದರಿ ತಿಳಿಸಿದ್ದರು.
ಅದಿತಿ ರಾವ್ ಹೈದರಿ ವೃತ್ತಿ
2006 ರಲ್ಲಿ ಮಲಯಾಳಂ ಚಿತ್ರ ಪ್ರಜಾಪತಿಯೊಂದಿಗೆ ತನ್ನ ನಟನಾ ಜೀವನವನ್ನು ಪ್ರಾರಂಭಿಸಿದ ಅದಿತಿ, ಸುಧೀರ್ ಮಿಶ್ರಾ ಅವರ 2011 ರ ಚಲನಚಿತ್ರ ಯೇ ಸಾಲಿ ಜಿಂದಗಿಯೊಂದಿಗೆ ದೊಡ್ಡ ಯಶಸ್ಸು ಪಡೆದರು. ತೀರಾ ಇತ್ತೀಚೆಗೆ, ಅವರು ತೆಲುಗು ಚಿತ್ರ ಮಹಾ ಸಮುದ್ರಂ ಮಹಾಲಕ್ಷ್ಮಿ ಮತ್ತು ತಮಿಳು ಚಿತ್ರ ಹೇ ಸಿನಾಮಿಕಾದಲ್ಲಿ ಕಾಣಿಸಿಕೊಂಡರು.
ಅದಿತಿ ಪ್ರಸ್ತುತ ಲಯನೆಸ್ ಎಂಬ ಬ್ರಿಟಿಷ್-ಭಾರತೀಯ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಜಕುಮಾರಿ ಸೋಫಿಯಾ ದುಲೀಪ್ ಅವರ ಕಥೆಯನ್ನು ಬರೆದ ಇತಿಹಾಸಕಾರ ಪೀಟರ್ ಬ್ಯಾನ್ಸ್ ಅವರ ಸಂಶೋಧನೆಯಿಂದ ಪ್ರೇರಿತವಾದ ಚಲನಚಿತ್ರ ಇದಾಗಿದೆ. ಯುಕೆಯಲ್ಲಿ ವಾಸಿಸುವ ಇಬ್ಬರು ಬ್ರಿಟಿಷ್ ಪಂಜಾಬಿ ಮಹಿಳೆಯರ ಕಥೆಯಾಗಿದೆ. ಚಿತ್ರದ ಕಾರ್ಯಕಾರಿ ನಿರ್ಮಾಪಕರಲ್ಲಿ ಪೀಟರ್ ಕೂಡ ಒಬ್ಬರು. ಇದರ ಜೊತೆಗೆ ಸಂಜಯ್ ಲೀಲಾ ಬನ್ಸಾಲಿಯವರ ನೆಟ್‌ಫ್ಲಿಕ್ಸ್ ಒರಿಜಿನಲ್ ಹೀರಾಮಂಡಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.


Click it and Unblock the Notifications











