For Quick Alerts
  ALLOW NOTIFICATIONS  
  For Daily Alerts

  ಹೊಸ ಉದ್ಯಮ ಆರಂಭಿಸಿದ 'ಪೈಲ್ವಾನ್' ಬೆಡಗಿ ಆಕಾಂಕ್ಷಾ

  |

  ಸುದೀಪ್ ಜೊತೆ 'ಪೈಲ್ವಾನ್' ಸಿನಿಮಾದಲ್ಲಿ ನಟಿಸಿದ್ದ ಬೆಡಗಿ ಆಕಾಂಕ್ಷಾ ಹೊಸ ಉದ್ಯಮವೊಂದನ್ನು ಆರಂಭಿಸಿದ್ದಾರೆ. ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಹೊತ್ತಿನಲ್ಲಿಯೇ ಉದ್ಯಮದತ್ತಲೂ ಹೊರಳಿದ್ದಾರೆ ಈ ಚೆಲುವೆ.

  ಆಕಾಂಕ್ಷಾ ಸಿಂಗ್ ರಾಜಸ್ಥಾನದ ಜೈಪರದಲ್ಲಿ ಹೊಸ ಕೆಫೆಯೊಂದನ್ನು ಪ್ರಾರಂಭಿಸಿದ್ದಾರೆ. ಕೆಫೆಯ ಉದ್ಘಾಟನೆಗೆ ಎನ್‌ಜಿಓ ಸಹಾಯದೊಂದಿಗೆ ವಿಶೇಷ ಮಕ್ಕಳನ್ನು ಆಹ್ವಾನಿಸಿದ್ದರು.

  ಜುಲೈ 15 ಕ್ಕೆ ಕೆಫೆ ಉದ್ಘಾಟನೆಗೊಂಡಿದ್ದು ಕೆಫೆಗೆ 'ಅಟಾರಿಯಾ' ಎಂದು ಹೆಸರಿಡಲಾಗಿದೆ. ಈ ಕೆಫೆಯನ್ನು ತಮ್ಮ ಸಹೋದರ ಸಂಬಂಧಿಯೊಬ್ಬರ ಜೊತೆ ಸೇರಿಕೊಂಡು ಪ್ರಾರಂಭಿಸಿದ್ದಾರೆ ಆಕಾಂಕ್ಷಾ ಸಿಂಗ್. ತಮ್ಮ ಹುಟ್ಟೂರಲ್ಲಿ ಕೆಫೆಯೊಂದನ್ನು ತೆರೆಯಬೇಕು ಎಂಬುದು ಅವರ ಬಹು ವರ್ಷಗಳ ಕನಸಂತೆ.

  ''ಬಹು ವರ್ಷಗಳಿಂದಲೂ ಕೆಫೆಯೊಂದನ್ನು ಪ್ರಾರಂಭಿಸಬೇಕು ಎಂದು ಕನಸು ಕಂಡಿದ್ದೆ. ನನ್ನ ಸಹೋದರ ಸಂಬಂಧಿ ಅಭಿಷೇಕ್ 'ನಾನೂ ಜೊತೆಯಾಗುತ್ತೇನೆ' ಎಂದಾಗ ಇಬ್ಬರೂ ಸೇರಿ ಕೆಫೆ ಪ್ರಾರಂಭಿಸಿದೆವು. ನಾವು ಕೆಫೆಯನ್ನು ಬಹಳ ಸುಂದರವಾಗಿ ವಿನ್ಯಾಸ ಮಾಡಿದ್ದೇವೆ. ಈ ಕೆಫೆಯು ಬೆಳಗಿನ ಸಮಯದಲ್ಲಿ ಹಾಗೂ ರಾತ್ರಿ ಸಮಯದಲ್ಲಿ ಭಿನ್ನವಾಗಿ ಹಾಗೂ ಸುಂದರವಾಗಿ ಕಾಣುವಂತೆ ವಿನ್ಯಾಸಗೊಳಿಸಿದ್ದೇವೆ'' ಎಂದಿದ್ದಾರೆ ಆಕಾಂಕ್ಷಾ.

  ''ಸಿನಿಮಾ ಚಿತ್ರೀಕರಣಗಳಿಗಾಗಿ ನಾನು ದೇಶ, ವಿದೇಶ ಸುತ್ತುತ್ತಿರುತ್ತೇನೆ. ಆ ಸಮಯದಲ್ಲಿ ನನ್ನ ಕುಟುಂಬ ಸದಸ್ಯರು ಕೆಫೆಯನ್ನು ನೋಡಿಕೊಳ್ಳುತ್ತಾರೆ. ಇದೇ ಕಾರಣದಿಂದಲೇ ನಾನು ಜೈಪುರದಲ್ಲಿ ಕೆಫೆ ಪ್ರಾರಂಭಿಸಿದ್ದೇನೆ'' ಎಂದಿದ್ದಾರೆ ಆಕಾಂಕ್ಷಾ.

  ಅಶ್ಲೀಲ ಚಿತ್ರ ಶೂಟಿಂಗ್ & ಮಾರಾಟ: ಶಿಲ್ಪಾಶೆಟ್ಟಿ ಪತಿ ರಾಜ್ ಕುಂದ್ರಾ ಅರೆಸ್ಟ್ | Filmibeat Kannada

  ಆಕಾಂಕ್ಷಾ ಈವರೆಗೆ ಆರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಿಂದಿಯ 'ಬದ್ರಿನಾಥ್‌ ಕಿ ದುಲ್ಹನಿಯಾ' ಸಿನಿಮಾದ ಮೂಲಕ ಸಿನಿಮಾ ರಂಗದ ಪ್ರವೇಶ ಮಾಡಿದ ಈ ನಟಿ, ನಂತರ ತೆಲುಗಿನ 'ಮಲ್ಲಿ ರಾವಾ', ನಾಗಾರ್ಜುನ, ನಾನಿ ಜೊತೆಗೆ 'ದೇವದಾಸು' ಸಿನಿಮಾಗಳಲ್ಲಿ ನಟಿಸಿದರು. ನಂತರ ಸುದೀಪ್ ಜೊತೆಗೆ 'ಪೈಲ್ವಾನ್' ಸಿನಿಮಾದಲ್ಲಿ ನಟಿಸಿದರು. ಇದೀಗ ಹಿಂದಿಯ 'ಮೇ ಡೇ' ಸಿನಿಮಾದಲ್ಲಿ ಅಜಯ್ ದೇವಗನ್, ಅಮಿತಾಬ್ ಬಚ್ಚನ್ ಜೊತೆ ನಟಿಸುತ್ತಿದ್ದಾರೆ. ತಮಿಳಿನ 'ಕ್ಲ್ಯಾಪ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

  English summary
  Actress Akanksha Singh opens a cafe in her hometown Jaipura. Akanksha Singh acted in Kannada movie Pailwan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X