Alia Bhatt: ಮದುವೆ ಸೀರೆಯಲ್ಲಿ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿದ ಆಲಿಯಾ ಭಟ್, ಪ್ರೀತಿ ಸುರಿಸಿದ ಅಭಿಮಾನಿಗಳು!

69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಮಂಗಳವಾರ ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದಿದೆ. ಅತ್ಯುತ್ತಮ ನಟಿ ವಿಭಾಗದಲ್ಲಿ ಪ್ರತಿಷ್ಠಿತ ಪುರಸ್ಕಾರ ಪಡೆದ ಆಲಿಯಾ ಭಟ್ ತಮ್ಮ ಪತಿ ರಣಬೀರ್ ಕಪೂರ್ ಅವರೊಂದಿಗೆ ಕಾರ್ಯಕ್ರಮಕ್ಕೆ ಬಂದಿದ್ದರು. ಇದರಲ್ಲಿ ವಿಶೇಷವೆಂದರೇ ನಟಿ ಆಲಿಯಾ ಭಟ್ ತಮ್ಮ ಮದುವೆಯ ಸೀರೆ ಧರಿಸಿ ಬಂದಿದ್ದು.

ಹೌದು, ಗಂಗೂಬಾಯಿ ಕಥಿಯಾವಾಡಿ ಚಿತ್ರದಲ್ಲಿನ ಅದ್ಭುತ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ನಟಿ ತಮ್ಮ ಮದುವೆಯ ಸಿರೆ ಧರಿಸಿದ್ದರು. ಈ ವೀಡಿಯೊ ವೈರಲ್ ಆಗಿದ್ದು, ಆಲಿಯಾ ಭಟ್ ಲುಕ್‌ಗೆ ಜನ ಫಿದಾ ಆಗಿದ್ದಾರೆ. ಮದುವೆ ಸೀರೆಯನ್ನು ಮತ್ತೆ ದೊಡ್ಡ ಕಾರ್ಯಕ್ರಮದಲ್ಲಿ ಪುನರಾವರ್ತಿಸಿರುವುದಕ್ಕೆ ಜನ ಮೆಚ್ಚುಗೆ ಸೂಚಿಸಿದ್ದಾರೆ.

Actress Alia Bhatt accepts National Film Award in her wedding saree, fans reaction

ಮದುವೆ ಸೀರೆ ಪುನರಾವರ್ತಿಸಿದ ಆಲಿಯಾ ಭಟ್!

ನಟ, ಪತಿ ರಣಬೀರ್ ಕಪೂರ್ ಜೊತೆಗೆ ಕಾಣಿಸಿಕೊಂಡ ನಟಿ ಆಲಿಯಾ ಭಟ್, ಸೂಕ್ಷ್ಮವಾದ ಗೋಲ್ಡನ್ ಕಸೂತಿ ಹೊಂದಿರುವ ತನ್ನ ಮದುವೆಯ ಸೀರೆಯಲ್ಲಿ ಅದ್ಭುತವಾಗಿ ಕಾಣುತ್ತಿದ್ದರು. ಕೂದಲನ್ನು ತುರುಬು ಕಟ್ಟಿದ ಆಕೆ, ಸುಂದರ ಚೋಕರ್ ನೆಕ್ಲೇಸ್ ಮತ್ತು ಕಿವಿಯೋಲೆ ಧರಿಸಿದ್ದರು. ಸಬ್ಯಸಾಚಿ ವಿನ್ಯಾಸಗೊಳಿಸಿದ ಸೀರೆಗೆ ಹಾಫ್ ಸ್ಲೀವ್ ಬ್ಲೌಸ್ ಮ್ಯಾಚಿಂಗ್ ಮಾಡಿದ್ದರು.

ಆಲಿಯಾ ಭಟ್ ಅವರ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಾಣಿಸಿಕೊಂಡ ಫೋಟೋಗಳು ಮತ್ತು ವಿಡಿಯೋಗಳು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಪ್ರತಿಷ್ಠಿತ ಕಾರ್ಯಕ್ರಮದ ಫೋಟೋಗಳು ವೈರಲ್ ಆಗುತ್ತಿದ್ದಂತೆ ಆಲಿಯಾ ಭಟ್ ಲುಕ್‌ಗೆ ಅಭಿಮಾನಿಗಳು ಪ್ರೀತಿ ಸುರಿಸಿದ್ದಾರೆ.

ಗಂಗೂಬಾಯಿ ಕಥಿಯಾವಾಡಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ನಟಿ ಆಲಿಯಾ ಭಟ್ ಲುಕ್ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಾಣಿಸಿಕೊಂಡ ಲುಕ್‌ ಒಂಥರಾ ಹೊಂದಿಕೆಯಾಗುವಂತಿತ್ತು. ಅದೇ ಸಿನಿಮಾದಿಂದ ಸ್ಪೂರ್ತಿ ಪಡೆದಂತೆ ಕಾಣುತ್ತಿತ್ತು. ಕೆಂಪು ಬಿಂದಿಮತ್ತು ತುರುಬಿಗೆ ಬಿಳಿ ಗುಲಾಬಿಗಳನ್ನು ಧರಿಸಿದ್ದರು.

Actress Alia Bhatt accepts National Film Award in her wedding saree, fans reaction

ಆಲಿಯಾ ಭಟ್ ಲುಕ್‌ಗೆ ಅಭಿಮಾನಿಗಳ ಪ್ರತಿಕ್ರಿಯೆ

ಆಲಿಯಾ ಭಟ್ ಫೋಟೋ, ವಿಡಿಯೋಗಳಿಗೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬರು "ಅವರು ಪೂರ್ತಿ ಅದ್ಭುತವಾಗಿ ಕಾಣುತ್ತಿದ್ದಾರೆ" ಎಂದು ಬರೆದಿದ್ದಾರೆ. ಮತ್ತೊಬ್ಬ ಅಭಿಮಾನಿ, "ಅವರು ತನ್ನ ಸೀರೆಯನ್ನು ಬೇರೆ ಬಟ್ಟೆಗಳನ್ನು ಹೊಲಿಸಲು ಬಳಸದೇ, ಅದನ್ನು ಹಾಗೆಯೇ ಇಟ್ಟುಕೊಂಡಿರುವುದು ನನಗೆ ಇಷ್ಟವಾಗಿದೆ" ಎಂದು ಹೇಳಿದ್ದಾರೆ.

ಮತ್ತೊಬ್ಬರು, "ಅಂದು ಇದು ಒಂದು ಪ್ರಮುಖ ವೈಯಕ್ತಿಕ ದಿನವಾಗಿತ್ತು ಮತ್ತು ಇಂದು ವೃತ್ತಿಪರವಾಗಿ ಬಹಳ ಮುಖ್ಯವಾದ ದಿನವಾಗಿದೆ! ತುಂಬಾ ಉತ್ತಮವಾಗಿದೆ!" ಎಂದಿದ್ದಾರೆ. ಮತ್ತೊಬ್ಬರು "ಆಕೆ ಹಲವು ವಿಧಗಳಲ್ಲಿ ಎಲ್ಲರಿಗೂ ಸ್ಫೂರ್ತಿ ನೀಡುತ್ತಾರೆ" ಎಂದು ಕಾಮೆಂಟ್ ಮಾಡಿದ್ದಾರೆ.

ಬಾಲಿವುಡ್ ಕಪಲ್ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಕಳೆದ ವರ್ಷ ಏಪ್ರಿಲ್ 14 ರಂದು ಮುಂಬೈನ ತಮ್ಮ ಮನೆಯಲ್ಲಿಯೇ ಸರಳ ಸಮಾರಂಭದಲ್ಲಿ ವಿವಾಹವಾದರು. ತನ್ನ ಮದುವೆಯ ದಿನದಂದು ಇದೇ ಸೀರೆಯಲ್ಲಿ ಅದ್ಭುತವಾಗಿ ಕಾಣಿಸಿಕೊಂಡಿದ್ದರು. ಅಂದು ಚಂದದ ಆಭರಣಗಳೊಂದಿಗೆ ಮ್ಯಾಚ್ ಮಾಡಿ, ಸಿಂಪಲ್ ಮೇಕಪ್ ಮಾಡಿದ್ದರು.

ಇನ್ನು, ಸಂದರ್ಶನವೊಂದರಲ್ಲಿ ತಮಗೆ ಸೀರೆ ಬಗ್ಗೆ ಇರುವ ಪ್ರೀತಿಯನ್ನು ವ್ಯಕ್ತಪಡಿಸಿದ್ದರು. "ನಾನು ಸೀರೆಯನ್ನು ಪ್ರೀತಿಸುತ್ತೇನೆ. ಇದು ವಿಶ್ವದ ಅತ್ಯಂತ ಆರಾಮದಾಯಕವಾದ ಉಡುಪು. ಅದಕ್ಕಾಗಿಯೇ ನಾನು ನನ್ನ ಮದುವೆಗೂ ಲೆಹೆಂಗಾ ಬದಲು ಸೀರೆಯನ್ನು ಆಯ್ಕೆ ಮಾಡಿದ್ದೆ ಎಂದು ಹೇಳಿದ್ದರು.

More from Filmibeat

English summary
Actress Alia Bhatt accepts National Film Award in her wedding saree, fans reaction
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X