ಚಿತ್ರರಂಗದಲ್ಲಿ ಏಳು ವರ್ಷ ಪೂರೈಸಿದ ಆಲಿಯಾ ಭಟ್
ನಟಿ ಆಲಿಯಾ ಭಟ್ ಚಿತ್ರರಂಗಕ್ಕೆ ಬಂದು ಇಂದಿಗೆ ಏಳು ವರ್ಷ ತುಂಬಿದೆ. 'ಸ್ಟೂಡೆಂಟ್ ಆಫ್ ದಿ ಇಯರ್' ಚಿತ್ರದ ಮೂಲಕ ಆಲಿಯಾ ಹೀರೋಯಿನ್ ಆಗಿದ್ದು, ಆ ಸಿನಿಮಾ 19 ಅಕ್ಟೋಬರ್ 2012 ರಲ್ಲಿ ಬಿಡುಗಡೆ ಆಗಿತ್ತು. ಅದಕ್ಕೂ ಮುಂಚೆ 1999ರಲ್ಲಿ ಬಂದ 'ಸಂಗರ್ಘ್' ಸಿನಿಮಾದಲ್ಲಿ ಆಲಿಯಾ ಸಣ್ಣ ಪಾತ್ರ ಮಾಡಿದ್ದರು.
ಆಲಿಯಾ ಭಟ್ ತನ್ನ ಕೆರಿಯರ್ ನಲ್ಲಿ ತುಂಬ ಒಳ್ಳೆ ಒಳ್ಳೆಯ ಸಿನಿಮಾಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಅದರಲ್ಲಿಯೂ 'ಗಲ್ಲಿ ಬಾಯ್', 'ರಾಜಿ', 'ಉಡ್ತಾ ಪಂಜಾಬ್', 'ಹೈವೇ' ಸಿನಿಮಾಗಳು ಆಲಿಯಾ ಪ್ರಬುದ್ಧ ನಟನೆಗೆ ಸಾಕ್ಷಿಯಾಗಿವೆ. ಹೀರೋಯಿನ್ ಆಗಿ ಒಂದೇ ರೀತಿ ಪಾತ್ರಗಳಿಗೆ ಅಂಟಿಕೊಳ್ಳದ ಆಲಿಯಾ ಸಾಲುಗಳನ್ನು ಸ್ವೀಕರಿಸಿದ್ದಾರೆ. ಎಲ್ಲ ಸವಾಲುಗಳಲ್ಲಿಯೂ ಗೆದ್ದಿದ್ದಾರೆ.

'ಸ್ಟೂಡೆಂಟ್ ಆಫ್ ದಿ ಇಯರ್', 'ಟು ಸ್ಟೇಟ್ಸ್', 'ಡಿಯರ್ ಜಿಂದಗಿ' ಸಿನಿಮಾಗಳು ಆಲಿಯಾಗೆ ಒಳ್ಳೆಯ ಹೆಸರು ತಂದುಕೊಟ್ಟಿವೆ. ಡಿಫರೆಂಟ್ ಸಿನಿಮಾಗಳು, ಡಿಫರೆಂಟ್ ಪಾತ್ರಗಳು ಆಲಿಯಾ ಚಿತ್ರ ಜೀವನದಲ್ಲಿ ನೋಡಬಹುದಾಗಿದೆ. ಹಿಟ್ ಸಿನಿಮಾಗಳು, ಫ್ಲಾಪ್ ಸಿನಿಮಾಗಳು ಆಲಿಯಾ ಕೆರಿಯರ್ ನಲ್ಲಿ ಇದ್ದರೂ, ಹೊಸ ಹೊಸ ರೀತಿಯ ಪಾತ್ರಗಳನ್ನು ನಿರ್ವಹಿಸಿದ ಹೆಗ್ಗಾಳಿಕೆ ಅವರಿಗೆ ಇದೆ.

ಸದ್ಯ, ರಾಜಮೌಳಿ ನಿರ್ದೇಶಕ 'ಆರ್ ಆರ್ ಆರ್' ಸಿನಿಮಾದಲ್ಲಿ ಆಲಿಯಾ ಭಟ್ ನಟಿಸುತ್ತಿದ್ದಾರೆ. ಈ ಸಿನಿಮಾದ ಮೂಲಕ ಆಲಿಯಾ ತೆಲುಗು ಇಂಡಸ್ಟ್ರಿಗೆ ಕಾಲಿಟ್ಟಿದ್ದಾರೆ. ಇದರ ಜೊತೆಗೆ ಎರಡು ಹಿಂದಿ ಸಿನಿಮಾಗಳು ಅವರ ಕೈನಲ್ಲಿ ಇವೆ.


Click it and Unblock the Notifications











