ನೀವು ಹಿಂಗೆ ಕನ್ನಡಿ ಮುಂದೆ ಸೆಲ್ಫಿಗೆ ಫೋಸ್ ಕೊಡ್ತಿರಾ?: ನ್ಯೂ ಇಯರ್‌ಗೆ ಆಲಿಯಾ ಭಟ್ ನ್ಯೂ ಲುಕ್!

ಬಾಲಿವುಡ್ ನಟಿ ಆಲಿಯಾ ಭಟ್ ನ್ಯಾಷನಲ್ ಅವಾರ್ಡ್ ಪಡೆದ ಖುಷಿಯಲ್ಲಿದ್ದಾರೆ. ಕಳೆದ ವರ್ಷ ಅವರ ಜೀವನದಲ್ಲಿ ಸಕತ್ ಖುಷಿ ತಂದಿದೆ. ಇದೇ ಸಂಭ್ರಮದಲ್ಲಿ ಹೊಸ ವರ್ಷವನ್ನು ಸ್ವಾಗತಿಸಲು ಪ್ರವಾಸದಲ್ಲಿದ್ದಾರೆ. ಇದೇ ವೇಳೆ ಸಕತ್ ಮಿರರ್ ಸೆಲ್ಫಿಗಳನ್ನು ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ. ಆದರೆ, ಈ ಫೋಟೋಗಳಲ್ಲಿ ಒಂದು ಟ್ವಿಸ್ಟ್ ಇದೆ.

ಎಸ್...ನಟಿ ಆಲಿಯಾ ಭಟ್ ಹೊಸ ವರ್ಷಕ್ಕೆ ವೆಕೆಷನ್ ಹೋಗಿದ್ದು, ಸಾಲು ಸಾಲು ಮಿರರ್ ಸೆಲ್ಫಿಗಳನ್ನು ತೆಗೆದುಕೊಂಡಿದ್ದಾರೆ. ನಟಿಯಾಗಿರಲಿ, ಸಾಮಾನ್ಯ ಯುವತಿಯಾಗಿರಲಿ..... ಫಳ್ ಎನ್ನುವ ಕನ್ನಡಿ ನೋಡುತ್ತಿದ್ದಂತೆ ಮೊಬೈಲ್ ತಾನೇಗೆ ಫೋಟೋ ಕ್ಲಿಕಿಸುತ್ತೆ ಬಿಡಿ.

Actress Alia Bhatt shares sizzling mirror selfies from her New Year vacation

ಇಂತಹ ಹಲವು ಮಿರರ್ ಸೆಲ್ಫಿ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಈ ಫೋಟೋಗಳಲ್ಲಿ ರ ಪತಿ, ನಟ ರಣಬೀರ್ ಕಪೂರ್ ಮತ್ತು ಅವರ ಒಂದು ವರ್ಷದ ಮಗಳು ರಾಹಾ ಕಪೂರ್ ಕಾಣಿಸಿಲ್ಲ.

ಸ್ವಿಮ್ ಸೂಟ್‌ನಲ್ಲಿ ಆಲಿಯಾ ಭಟ್ ಸಕತ್ ಹಾಟ್!

ನಟಿ ಆಲಿಯಾ ಭಟ್ ತನ್ನ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಹೊಸ ವರ್ಷದ ಪ್ರವಾಸದ ಚಿತ್ರಗಳು ಮತ್ತು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ. ಈ ಚಂದನೇ ಫೋಟೋ ಗುಚ್ಛಕ್ಕೆ "ಹಲವು ಮೂಡ್‌ಗಳು ಮತ್ತು ಮಿಲಿಯನ್ ಮಿರರ್ ಸೆಲ್ಫಿ" ಎಂಬ ಶೀರ್ಷಿಕೆ ನೀಡಿದ್ದು, ಶೂಟಿಂಗ್ ಸ್ಟಾರ್‌ಗಳ ಎಮೋಜಿಯನ್ನು ಹಾಕಿದ್ದಾರೆ.

Actress Alia Bhatt shares sizzling mirror selfies from her New Year vacation

ಈ ಫೋಟೋ ಗುಚ್ಛದಲ್ಲಿ ಆರು ಮಿರರ್ ಸೆಲ್ಫಿಗಳಿವೆ. ಇವುಗಳಲ್ಲಿ ಒಂದರಲ್ಲಿ ಪಿಂಕ್ ಬಣ್ಣದ ಸ್ವಿಮ್ ಸೂಟ್ ಮೇಲೆ ಬಿಳಿ ಶ್ರಗ್, ಮತ್ತೊಂದರಲ್ಲಿ ಕಿತ್ತಳೆ ಬಣ್ಣದ ಟಾಪ್ ಮತ್ತು ಗುಲಾಬಿ ಬಣ್ಣ ಸ್ಕರ್ಟ್‌, ಇನ್ನೊಂದರಲ್ಲಿ ನೀಲಿ ಬೋ ಟಾಪ್ ಮತ್ತು ಜಿಮ್‌ನಲ್ಲಿ ಶಾರ್ಟ್ಸ್‌ನಲ್ಲಿ, ಮತ್ತೊಂದು ಚಿತ್ರದಲ್ಲಿ ಕಂದು ಕಫ್ತಾನ್ ಧರಿಸಿರುವ ಬ್ಲರ್ ಫೋಟೋ ಕೂಡ ಇದೆ.

ಎರಡು ವಿಡಿಯೋ ಹಂಚಿಕೊಂಡ ಆಲಿಯಾ

ಫೋಟೋಗಳ ಜೊತೆಗೆ ಎರಡು ವಿಡಿಯೋಗಳನ್ನು ನಟಿ ಹಂಚಿಕೊಂಡಿದ್ದಾರೆ. ಮೊದಲನೆಯದರಲ್ಲಿ ಸಮುದ್ರದ ಉದ್ದಕ್ಕೂ ನೀಲಿ ಗೌನ್‌ನಲ್ಲಿ ಸುತ್ತುತ್ತಿರುವುದು, ಮತ್ತೊಂದರಲ್ಲಿ ಬಿಳಿ ಮರಳಿನ ಕಡಲತೀರದ ಮೇಲೆ ""ರಾಹಾ ಇಲ್ಲಿದ್ದಾರೆ" ಎಂದು ಬರೆಯಲಾಗಿದೆ. ಆ ವಿಡಿಯೋವನ್ನು ರಣಬೀರ್ ಕಪೂರ್ ಸೆರೆ ಹಿಡಿದಿದ್ದಾರೆ.

ಹೊಸ ವರ್ಷದ ಪ್ರವಾಸ ಮುಗಿಸಿದ ಆಲಿಯಾ, ರಣಬೀರ್ ದಂಪತಿ

ಹೊಸ ವರ್ಷದ ಸಂಭ್ರಮಾಚರಣೆಗಾಗಿ ಸೆಲಬ್ರಿಟಿಗಳು ವಿದೇಶಗಳಿಗೆ ಹಾರುವುದನ್ನು ನಾವು ನೋಡಿದ್ದೇವೆ. ಅದೇ ರೀತಿ ಅನಿಮಲ್ ಸಿನಿಮಾ ಸಕ್ಸಸ್ ಆಚರಿಸುತ್ತಿರುವ ರಣಬೀರ್ ಕಪೂರ್ ಕೂಡ ಆಲಿಯಾ ಭಟ್ ಮತ್ತು ಮಗಳು ರಾಹಾ ಕಪೂರ್ ಜೊತೆಗೆ ಪ್ರವಾಸಕ್ಕೆ ತೆರಳಿದ್ರು. ಶುಕ್ರವಾರ ಮುಂಬೈಗೆ ಮರಳಿದ್ದಾರೆ.

ಇನ್ನು, ನಟಿ ಆಲಿಯಾ ಭಟ್ ನಿರ್ದೇಶಕ ವಾಸನ್ ಬಾಲ ಅವರ 'ಜಿಗ್ರಾ' ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ, ಜೀ ಲೇ ಜರಾ ಸಿನಿಮಾದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಜೀ ಲೇ ಜರಾಗೆ ಫರ್ಹಾನ್ ಅಖ್ತರ್ ಆಕ್ಷನ್ ಕಟ್ ಹೇಳಲಿದ್ದು, ಈ ಚಿತ್ರದಲ್ಲಿ ಕತ್ರಿನಾ ಕೈಫ್ ಮತ್ತು ಪ್ರಿಯಾಂಕಾ ಚೋಪ್ರಾ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ.

ರಣಬೀರ್ ಕಪೂರ್ ಸದ್ಯ ಪ್ರಸ್ತುತ ಅನಿಮಲ್ ಚಿತ್ರದ ಯಶಸ್ಸಿನಲ್ಲಿ ತೇಲುತ್ತಿದ್ದಾರೆ. ಅನಿಮಲ್ ಡಿಸೆಂಬರ್ 1 ರಂದು ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟಿತ್ತು. ಸಂದೀಪ್ ರೆಡ್ಡಿ ವಂಗ ನಿರ್ದೇಶನದ ಅನಿಮಲ್ ಸಿನಿಮಾದಲ್ಲಿ ಅನಿಲ್ ಕಪೂರ್, ಬಾಬಿ ಡಿಯೋಲ್, ರಶ್ಮಿಕಾ ಮಂದಣ್ಣ ಮತ್ತು ತ್ರಿಪ್ತಿ ದಿಮ್ರಿ ಕೂಡ ನಟಿಸಿದ್ದಾರೆ. ಚಿತ್ರಕ್ಕೆ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಬಂದಿತ್ತು. ಆದರೆ, ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಯಶಸ್ಸು ಪಡೆದಿದೆ.

More from Filmibeat

English summary
Alia Bhatt shares 'a million mirror selfies' on New Year vacation.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X