‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾಗೆ ಎದ್ದು ನಿಂತು ಚಪ್ಪಾಳೆ ತಟ್ಟಿದ ವಿದೇಶಿಗರು !

ಬಾಲಿವುಡ್‌ನಲ್ಲಿ ರಿಲೀಸ್ ಆಗಿರುವ 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾ ಸಾಕಷ್ಟು ಜನ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದೆ. ರಿಲೀಸ್‌ಗು ಮುಂಚೆ ಆಲಿಯಾ ಭಟ್ ಅಭಿನಯದ ಈ ಸಿನಿಮಾ ಬಹಳ ಚರ್ಚೆಗೆ ಗ್ರಾಸ ವಾಗಿತ್ತು. ಸಾಕಷ್ಟು ಅಡೆತಡೆಗಳು ವ್ಯಕ್ತವಾದವೂ. ಹೀಗಿದ್ದರು ಫೆಬ್ರವರಿ25 ರಂದು ಈ ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಿದೆ. ಸಿನಿಮಾ ನೋಡಿದ ಮಂದಿ ಆಲಿಯಾ ಭಟ್ ನಟನೆಗೆ ಫಿದಾ ಆಗಿರೋದು ಅಲ್ಲದೇ ಚಿತ್ರದ ಬಗ್ಗೆ ಮೆಚ್ಚುಗೆ ಕೂಡ ವ್ಯಕ್ತಪಡಿಸುತ್ತಿದ್ದಾರೆ.

ಆಲಿಯಾ ಭಟ್ ಮತ್ತು ಅಜಯ್ ದೇವಗನ್ ಮುಖ್ಯಭೂಮಿಕೆಯಲ್ಲಿ ತೆರೆಕಂಡಿರುವ ಈ ಸಿನಿಮಾ ದೇಶ ವಿದೇಶಗಳಲ್ಲೂ ರಿಲೀಸ್‌ ಆಗಿದೆ. ವಿದೇಶಿಗರೂ ಕೂಡ ಈ ಸಿನಿಮಾವನ್ನು ನೋಡಿ ಇಷ್ಟಪಟ್ಟಿದ್ದು, ಚಿತ್ರದ ಬಗ್ಗೆ ಹಾಗೂ ಆಲಿಯಾ ಭಟ್ ನಟನೆಗೆ ಭೇಷ್ ಎಂದಿದ್ದಾರೆ. 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾ ವಿದೇಶದಲ್ಲೂ ಸಖತ್​ ಸೌಂಡ್​ ಮಾಡುತ್ತಿದೆ. ಜರ್ಮನ್​ ದೇಶದಲ್ಲಿ ಆಲಿಯಾ ಭಟ್ ನಟನೆ ಕಂಡು ಫುಲ್​ ಫಿದಾ ಆಗಿದ್ದಾರೆ.

ಬಾಲಿವುಡ್ ನಟಿ ಆಲಿಯಾ ಭಟ್​ ಅಭಿನಯಕ್ಕೆ ಮನಸೋತ್ತಿದ್ದಾರೆ. ಹೊರ ದೇಶದ ಸಿನಿಮಾ ಪ್ರೇಕ್ಷಕರು ಚಿತ್ರ ನೋಡಿದ ನಂತರ ಚಿತ್ರಮಂದಿರದಲ್ಲೇ ಸರಿ ಸುಮಾರು ಎಂಟು ನಿಮಿಷಗಳ ಕಾಲ ನಿರಂತರವಾಗಿ ಚಪ್ಪಾಳೆ ತಟ್ಟುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜರ್ಮನ್​ ದೇಶದ ಬೆರ್ಲಿನ್​ ನಗರದ ಚಿತ್ರಮಂದಿರದಲ್ಲಿ ಯಾವ ಸ್ಟಾರ್​ ನಟನಿಗೂ ಸಿಗದ ಮೆಚ್ಚುಗೆ ಆಲಿಯಾ ಭಟ್​ಗೆ ವ್ಯಕ್ತವಾಗಿದೆ. ಈ ಮೂಲಕ ಸಿನಿಮಾ ನೋಡಿದವರೆಲ್ಲ ಚಿತ್ರದ ಬಗ್ಗೆ ಉತ್ತಮ ವಿಮರ್ಶೆ ನೀಡಿದ್ದಾರೆ. ಇದು ಚಿತ್ರತಂಡಕ್ಕೆ ಸಂತಸ ತಂದಿದೆ. ಆಲಿಯಾ ಭಟ್ ಅಭಿಮಾನಿಗಳು ಸುದ್ದಿ ತಿಳಿದು ಸಂತಸ ಗೊಂಡಿದ್ದಾರೆ.

Actress Aliya Bhat Acted Gangubai Kathiawadi Movie Update

ಸಂಜಯ್​ ಲೀಲಾ ಬನ್ಸಾಲಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರವನ್ನು ಬಾಲಿವುಡ್ ಸೆಲೆಬ್ರೆಟಿಗಳು ಕೂಡ ನೋಡಿ ಮೆಚ್ಚಿಕೊಂಡಿದ್ದಾರೆ. ಟ್ರೇಲರ್​ ಮತ್ತು ಹಾಡುಗಳ ಮೂಲಕ ಸದ್ದು ಮಾಡಿದ್ದ 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾಗೆ ಚಿತ್ರಮಂದಿರದಲ್ಲಿ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಈ ಸಿನಿಮಾ ಬಿಡುಗಡೆ ಆಗುವುದಕ್ಕೂ ಮುನ್ನವೇ ಸೆಲೆಬ್ರಿಟಿಗಳಿಗಾಗಿ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಸಿನಿಮಾ ಕಣ್ತುಂಬಿಕೊಂಡ ಬಾಲಿವುಡ್​ ಸೆಲೆಬ್ರಿಟಿಗಳು ಮನಸಾರೆ ಹೊಗಳಿದ್ದಾರೆ.

Actress Aliya Bhat Acted Gangubai Kathiawadi Movie Update

ಇನ್ನು ಈ ಸಿನಿಮಾದಲ್ಲಿ ಗಂಗೂಬಾಯಿ ಕಾಠಿಯಾವಾಡಿ ಅಲಿಯಾಸ್ ಗಂಗಾ ಹರ್ಜೀವನದಾಸ್ ಕಾಠಿಯಾವಾಡಿ ಗುಜರಾತ್ ಮೂಲದವರಾಗಿದ್ದು, ಅವರು 50 ಮತ್ತು 60ರ ದಶಕಗಳಲ್ಲಿ ಮುಂಬೈನ ಪ್ರಸಿದ್ಧ ಮತ್ತು ಪ್ರಭಾವಿ ವೇಶ್ಯಾಗೃಹ ಮಾಲೀಕರಲ್ಲಿ ಒಬ್ಬರಾಗಿ ಹೆಸರು ಗಳಿಸಿದ್ದರು. ಆಕೆಯನ್ನು ಆಕೆಯ ಪತಿ ಕಾಮಾಟಿಪುರದ ವೇಶ್ಯಾಗೃಹದ ಮಾಲೀಕರಿಗೆ ಮಾರಾಟ ಮಾಡಿದ್ದರು ಎನ್ನಲಾಗಿದೆ. ಕಾಮಾಟಿಪುರ ಮುಂಬೈನ ಅತ್ಯಂತ ಹಳೆಯ ಮತ್ತು ಕುಖ್ಯಾತ ಕೆಂಪು ದೀಪ ಜಿಲ್ಲೆಗಳಲ್ಲಿ ಒಂದಾಗಿದೆ. ಆಕೆ ಕ್ರಮೇಣ ತನ್ನ ಸ್ವಂತ ವೇಶ್ಯಾಗೃಹ ನಿರ್ವಹಿಸುವುದನ್ನು ಕೊನೆಗೊಳಿಸಿದಳು ಮತ್ತು ವಾಣಿಜ್ಯ ಲೈಂಗಿಕ ಕಾರ್ಯಕರ್ತರ ಹಕ್ಕುಗಳಿಗಾಗಿ ಲಾಬಿ ಮಾಡಿದಳು ಎಂದು ತಿಳಿದುಬಂದಿತ್ತು. ಈ ಎಲ್ಲಾ ಅಂಶಗಳನ್ನು ಇಟ್ಟುಕೊಂಡು ಗಂಗೂಬಾಯಿ ಕಾಠಿಯಾವಾಡಿ ಸಿನಿಮಾವನ್ನು ಹೊರತರಲಾಗಿದೆ. ಹೀಗಾಗಿ ಕುಟುಂಬಸ್ಥರು ಕೂಡ ಈ ಸಿನಿಮಾಗೆ ವಿರೋಧ ಮಾಡಿದ್ದುಂಟು.

Actress Aliya Bhat Acted Gangubai Kathiawadi Movie Update

ಗಂಗೂಬಾಯಿ ಕಾಠಿಯಾವಾಡಿ ಜನಾಂಗೀಯ ನಿಂದನೆ ಸೇರಿ ಸಾಕಷ್ಟು ಆರೋಪಗಳು ಈ ಸಿನಿಮಾದ ಮೇಲಿದೆ. ಇನ್ನೂ ಗಂಗೂಬಾಯಿ ಅವರ ದತ್ತು ಪುತ್ರ ಕೂಡ ಕೋರ್ಟ್​ ಮೆಟ್ಟಿಲೇರಿದ್ದರು. ಸಿನಿಮಾ ರಿಲೀಸ್ ಮಾಡದಂತೆ ತಡೆ ಕೋರಿ ಮನವಿ ಸಲ್ಲಿಸಿದ್ದರು. ಅಲ್ಲದೇ ಕಾಮಾಟಿಪುರದ ಜನತೆ ಹಾಗೂ ಸ್ಥಳೀಯ ಶಾಸಕರು 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿ ಸಿನಿಮಾ ಬಿಡುಗಡೆ ಮಾಡಬಾರದು ಎಂದು ದಾವೆ ಹೂಡಿದ್ದರು. ಇಷ್ಟೆಲ್ಲ ಅಡೆತಡೆಗಳ ನಡುವೆ ಬಂದ ಈ ಸಿನಿಮಾಗೆ ಇದೀಗ ಎಲ್ಲರು ಪ್ರಸಂಶೆ ವ್ಯಕ್ತಪಡಿಸುತ್ತಿದ್ದಾರೆ. ವಿದೇಶಿಗರಿಗೂ ಚಿತ್ರ ಹಿಡಿಸಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

More from Filmibeat

English summary
Actress Aliya Bhat Acted Gangubai Kathiawadi movie received 8 min standing ovation from 800 people at berlin film festival
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X