For Quick Alerts
  ALLOW NOTIFICATIONS  
  For Daily Alerts

  14 ವರ್ಷ ಹಿಂದಿನ ಗಾಳಿ ಸುದ್ದಿ ಬಗ್ಗೆ ಸ್ಪಷ್ಟನೆ ಕೊಟ್ಟ ನಟಿ!

  |

  ಬಾಲಿವುಡ್‌ ನಲ್ಲಿ ಗಾಳಿ ಸುದ್ದಿಗಳಿಗೆ ಕಡಿಮೆ ಇಲ್ಲ. ಗಾಳಿ ಸುದ್ದಿಗಳನ್ನು ಹಬ್ಬಿಸಲೆಂದೇ ದೊಡ್ಡ ತಂಡವೊಂದಿದೆ ಅಲ್ಲಿ.

  ನಟಿ ಅಮೃತಾ ರಾವ್ ಬಾಲಿವುಡ್‌ನಲ್ಲಿ ಕೆಲ ಕಾಲ ಮೆರೆದ ನಟಿ, ಅಮೃತಾ ರಾವ್ ತಮ್ಮ ವೃತ್ತಿ ಜೀವನದ ಉತ್ತುಂಗದಲ್ಲಿದ್ದಾಗ ನಟ ಶಾಹಿದ್ ಕಪೂರ್ ಜೊತೆಗೆ ಅವರ ಹೆಸರು ಜೋರಾಗಿಯೇ ಕೇಳಿಬಂದಿತ್ತು.

  ಶಾಹಿದ್ ಕಪೂರ್ ಹೊಸ ಸಿನಿಮಾ: ಸಂಭಾವನೆಯಲ್ಲಿ 8 ಕೋಟಿ ಕಟ್!ಶಾಹಿದ್ ಕಪೂರ್ ಹೊಸ ಸಿನಿಮಾ: ಸಂಭಾವನೆಯಲ್ಲಿ 8 ಕೋಟಿ ಕಟ್!

  ಆದರೆ ಆ ಬಗ್ಗೆ ಈಗ ಅಂದರೆ 14 ವರ್ಷದ ನಂತರ ಸ್ಪಷ್ಟನೆ ಕೊಟ್ಟಿರುವ ನಟಿ ಅಮೃತಾ ರಾವ್, ನಾನು ಶಾಹಿದ್ ಪ್ರೇಮಿಗಳಾಗಿರಲಿಲ್ಲ. ಅಷ್ಟೇ ಅಲ್ಲ ಕನಿಷ್ಟ ಗೆಳೆಯರೂ ಸಹ ಆಗಿರಲಿಲ್ಲ ಎಂದಿದ್ದಾರೆ.

  ನಟಿ ಅಮೃತಾ ರಾವ್ ಕೆಲವು ವರ್ಷಗಳ ಹಿಂದಷ್ಟೆ ಆರ್‌ಜೆ ಅನ್ಮೋಲ್ ಅನ್ನು ವಿವಾಹವಾಗಿದ್ದಾರೆ, ಅವರು ಈಗ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸಮಯ ವಾಹಿನಿಯೊಂದಕ್ಕೆ ಕೊಟ್ಟ ಸಂದರ್ಶನದಲ್ಲಿ ಶಾಹಿದ್ ಕಪೂರ್ ಬಗ್ಗೆ ಮಾತನಾಡಿ 14 ವರ್ಷದ ಹಿಂದಿನ ಗಾಳಿ ಸುದ್ದಿ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.

  ACT 1978 : 60 ಲಕ್ಷದ ಸೆಟ್ ಹಾಕಿದ್ದು ನೋಡಿ ಪುನೀತ್ ರಾಜ್ ಕುಮಾರ್ ಖುಷಿ ಪಟ್ಟಿದ್ರು | Sanchari Vijay | Puneeth

  ನಟ ಶಾಹಿದ್ ಕಪೂರ್ ಹಾಗೂ ಅಮೃತಾ ರಾವ್ ಕೆಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು. ಇಷ್ಕ್‌-ವಿಷ್ಕ್, ವಿವಾಹ್, ವಾಹ್ ಲೈಫ್ ಹೋ ತೊ ಐಸಿ ಸಿನಿಮಾಗಳಲ್ಲಿ ಈ ನಟ-ನಟಿ ಅಭಿನಯಿಸಿದ್ದರು. ಆಗ ಇವರಿಬ್ಬರ ಬಗ್ಗೆ ಹಾಳಿ ಸುದ್ದಿ ಹರಿದಾಡಿತ್ತು.

  English summary
  Actress Amrutha Rao clarifies about 14 year old rumor about herself and actor Shahid Kapoor.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X