For Quick Alerts
  ALLOW NOTIFICATIONS  
  For Daily Alerts

  'ದಿ ವಿಲನ್' ನಟಿಯ ಹಾಟ್ ಫೋಟೋ ವೈರಲ್: ಬಿಕಿನಿ ಧರಿಸಿ ಪೋಸ್ ನೀಡಿದ ಆಮಿ ಜಾಕ್ಸನ್

  |

  ಕನ್ನಡದ 'ದಿ ವಿಲನ್', 'ಮದ್ರಾಸಪಟ್ಟಿನಂ', '2.0', ಹಿಂದಿಯ 'ಸಿಂಗ್ ಈಸ್ ಬ್ಲಿಂಗ್' ಸೇರಿದ್ದೆತ ಹಲವು ಭಾರತೀಯ ಸಿನಿಮಾಗಳಲ್ಲಿ ಅಭಿನಯಿಸಿರುವ ಇಂಗ್ಲೆಂಡ್ ನಟಿ ಆಮಿ ಜಾಕ್ಸನ್ ಮತ್ತೆ ಸುದ್ದಿಯಲ್ಲಿದ್ದಾರೆ. ಕಳೆದ ವರ್ಷ ಗಂಡು ಮಗುವಿಗೆ ಜನ್ಮ ನೀಡಿರುವ ನಟಿ ಆಮಿ ಜಾಕ್ಸನ್, ಮಗುವಿನ ಜೊತೆ ಲಾಕ್ ಡೌನ್ ಸಮಯವನ್ನು ಕಳೆಯುತ್ತಿದ್ದಾರೆ.

  ದರ್ಶನ್ ಅಭಿಮಾನಿಗಳು ಫುಲ್ ಹ್ಯಾಪಿ | Roberrt Poster | Filmibeat Kannada

  ಆದರೆ ಇತ್ತೀಚಿಗೆ ಆಮಿ ಅಪ್ಪನ ಹುಟ್ಟುಹಬ್ಬದ ನಿಮಿತ್ತ ಲಂಡನ್ ನಿಂದ ಇಟಲಿಗೆ ಪಯಣ ಬೆಳೆಸಿದ್ದಾರೆ. ಇಟಲಿಯಲ್ಲಿ ಪುತ್ರ ಮತ್ತು ಭಾವಿ ಪತಿ ಜೊತೆ ಕ್ವಾಲಿಟಿ ಸಮಯ ಕಳೆಯುತ್ತಿದ್ದಾರೆ. ಸದಾ ಟ್ರಾವೆಲ್ ಮಾಡುತ್ತಾ ಎಂಜಾಯ್ ಮಾಡುತ್ತಿದ್ದ ನಟಿ ಆಮಿ ಕೊರೊನಾ ವೈರಸ್ ಹಾವಳಿಯ ಪರಿಣಾಮ ಮನೆಯಲ್ಲಿಯೆ ಲಾಕ್ ಆಗಿದ್ದರು. ಆದರೀಗ ಇಟಲಿಗೆ ತೆರಳಿರುವ ಆಮಿ ಮಸ್ತ್ ಮಜಾ ಮಾಡುತ್ತಿದ್ದಾರೆ. ಮುಂದೆ ಓದಿ...

  ನಟಿ ಆಮಿ ಜಾಕ್ಸನ್ ಮುದ್ದು ಮಗನನ್ನು ನೋಡಿದ್ದೀರಾ.?ನಟಿ ಆಮಿ ಜಾಕ್ಸನ್ ಮುದ್ದು ಮಗನನ್ನು ನೋಡಿದ್ದೀರಾ.?

  ಆಮಿ ಜಾಕ್ಸನ್ ಹಾಟ್ ಬಿಕಿನಿ ಫೋಟೋ

  ಆಮಿ ಜಾಕ್ಸನ್ ಹಾಟ್ ಬಿಕಿನಿ ಫೋಟೋ

  ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರೀಯರಾಗಿರುವ ಆಮಿ ಜಾಕ್ಸನ್ ಹಾಟ್ ಹಾಟ್ ಫೋಟೋಗಳನ್ನು ಶೇರ್ ಮಾಡುತ್ತ ಪಡ್ಡೆಗಳ ನಿದ್ದೆಗೆಡಿಸುತ್ತಿದ್ದಾರೆ. ಇತ್ತೀಚಿಗೆ ಇಟಲಿಗೆ ತೆರಳಿರುವ ಆಮಿ ಬಿಕಿನಿ ಧರಿಸಿ ಹಾಟ್ ಲುಕ್ ನಲ್ಲಿ ಬೋಟ್ ಏರಿ ಸುಂದರ ಸ್ಥಳದಲ್ಲಿ ವಿಹರಿಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ದಿ ವಿಲನ್ ನಟಿಯ ಮಾದಕ ನೋಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

  ಆಮಿ ಜಾಕ್ಸನ್ ಫೋಟೋಗೆ ಅಭಿಮಾನಿಗಳ ಮೆಚ್ಚುಗೆ

  ಆಮಿ ಜಾಕ್ಸನ್ ಫೋಟೋಗೆ ಅಭಿಮಾನಿಗಳ ಮೆಚ್ಚುಗೆ

  ಆಮಿ ಜಾಕ್ಸನ್ ಶೇರ್ ಮಾಡಿರುವ ಫೋಟೋ ಕೆಳಗೆ ಅಭಿಮಾನಿಗಳು ಕಾಮೆಂಟ್ ಮಾಡಿ ಹಾರ್ಟ್ ಇಮೋಜಿ ಹಾಕುತ್ತಿದ್ದಾರೆ. ಈ ಸ್ಥಲ ಸುಂದರವಾಗಿದೆ ಮತ್ತು ಆಮಿ ನೀವು ಅದ್ಭುತವಾಗಿ ಕಾಣುತ್ತಿದ್ದೀರಿ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸಾಕಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕೊರೊನಾ ಆತಂಕದ ನಡುವೆಯೂ ಆಮಿ ಪ್ರವಾಸವನ್ನು ಎಂಜಾಯ್ ಮಾಡುತ್ತಿದ್ದಾರೆ.

  ಈ ಸೆಲೆಬ್ರಿಟಿ ಮಗುವನ್ನು ಗುರುತಿಸಿ? ಈ ಮಗುವಿನ ತಾಯಿ ಖ್ಯಾತ ನಟಿಈ ಸೆಲೆಬ್ರಿಟಿ ಮಗುವನ್ನು ಗುರುತಿಸಿ? ಈ ಮಗುವಿನ ತಾಯಿ ಖ್ಯಾತ ನಟಿ

  2019 ಸೆಪ್ಟಂಬರ್ ನಲ್ಲಿ ಮಗುವಿಗೆ ಜನನ

  2019 ಸೆಪ್ಟಂಬರ್ ನಲ್ಲಿ ಮಗುವಿಗೆ ಜನನ

  ಕಳೆದ ವರ್ಷ ಜನವರಿಲ್ಲಿ ಗೆಳೆಯ ಜಾರ್ಜ್ ಪನಯೌಟು ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಂತರ ಸೆಪ್ಟಂಬರ್ ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗನಿಗೆ ಆಂಡ್ರಿಯಾಸ್ ಎಂದು ನಾಮಕರಣ ಮಾಡಿದ್ದಾರೆ. ಆಗಾಗ ಮಗನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

  2.0 ಸಿನಿಮಾ ಬಳಿಕ ಮತ್ತೆ ಬಣ್ಣಹಚ್ಚಿಲ್ಲ

  2.0 ಸಿನಿಮಾ ಬಳಿಕ ಮತ್ತೆ ಬಣ್ಣಹಚ್ಚಿಲ್ಲ

  ಮಗುವಿಗೆ ಜನ್ಮ ನೀಡಿದ ಬಳಿಕ ಆಮಿ ಜಾಕ್ಸನ್ ನಟನೆಯಿಂದ ದೂರ ಉಳಿದಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಜೊತೆ 2.0 ಸಿನಿಮಾದಲ್ಲಿ ಕಾಣಿಸಿಕೊಂಡ ಬಳಿಕ ಮತ್ತೆ ಬಣ್ಣ ಹಚ್ಚಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿರುವ ಆಮಿ ಹಾಟ್ ಫೋಟೋಗಳ ಮೂಲಕ ಆಗಾಗ ಸುದ್ದಿಯಲ್ಲಿದ್ದಾರೆ.

  English summary
  Actress Amy Jackson shares bikini photos of her recent Italian Vacation.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X