For Quick Alerts
  ALLOW NOTIFICATIONS  
  For Daily Alerts

  ಜನಾಂಗೀಯ ನಿಂದನೆ: ಅಮೆರಿಕದ ರೆಸ್ಟೋರೆಂಟ್ ನಿಂದ ಹೊರದಬ್ಬಿದ ಬಗ್ಗೆ ಅನನ್ಯಾ ಬಿರ್ಲಾ ಕಿಡಿ

  |

  ಅಮೆರಿಕದ ಕ್ಯಾಲಿಪೋರ್ನಿಯಾದಲ್ಲಿರುವ ಸ್ಕೂಪಾ ರೆಸ್ಟೋರೆಂಟ್ ನ ಜನಾಂಗೀಯ ನಿಂದನೆ ನಡವಳಿಕೆ ವಿರುದ್ಧ ನಟಿ ಮತ್ತು ಗಾಯಕಿ ಅನನ್ಯಾ ಬಿರ್ಲಾ ವಾಗ್ದಾಳಿ ನಡೆಸಿದ್ದಾರೆ.

  ಅನನ್ಯಾ ಬಿರ್ಲಾ, ಆದಿತ್ಯಾ ಗ್ರೂಪ್ ನ ಬಿಲಿಯನೇರ್ ಅಧ್ಯಕ್ಷ ಕುಮಾರ್ ಮಂಗಲಂ ಬಿರ್ಲಾ ಅವರ ಪುತ್ರಿ. ಅನ್ಯನ್ಯಾ ಬಿರ್ಲಾ ಮತ್ತು ಕುಬಂದವರನ್ನು ರೆಸ್ಟೋರೆಂಟ್ ಅಕ್ಷರಶಃ ಹೊರದಬ್ಬಿದ್ದಾರೆ ಎಂದು ಅನನ್ಯಾ ಬಿರ್ಲಾ ಆರೋಪಿಸಿದ್ದಾರೆ. ಈ ಬಗ್ಗೆ ಅನನ್ಯಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

  ಸೋನು ಸೂದ್ ಸಹಾಯ ಮಾಡುತ್ತಿರುವುದೆಲ್ಲ ಪ್ರಚಾರಕ್ಕಾಗಿಯೇ? ಅನುಮಾನದ ಪ್ರಶ್ನೆಗೆ ತಿರುಗೇಟು ಕೊಟ್ಟ ನಟಸೋನು ಸೂದ್ ಸಹಾಯ ಮಾಡುತ್ತಿರುವುದೆಲ್ಲ ಪ್ರಚಾರಕ್ಕಾಗಿಯೇ? ಅನುಮಾನದ ಪ್ರಶ್ನೆಗೆ ತಿರುಗೇಟು ಕೊಟ್ಟ ನಟ

  "ಈ ರೆಸ್ಟೋರೆಂಟ್ ಸ್ಕೂಪಾ ನನ್ನ ಮತ್ತು ನನ್ನ ಕುಟುಂಬದವರನ್ನು ಅಕ್ಷರಶಃ ಹೊರ ದಬ್ಬಿದ್ದಾರೆ. ಇದು ಕ್ರೂರ ನಡವಳಿಕೆ. ಇದರಿಂದ ತುಂಬಾ ದುಃಖವಾಗಿದೆ. ನೀವು ನಿಜವಾಗಿಯೂ ನಿಮ್ಮ ಗ್ರಾಹಕರನ್ನು ಸರಿಯಾಗಿ ನೋಡಿಕೊಳ್ಳಬೇಕು. ಜನಾಂಗೀಯ ದ್ವೇಷದ ಈ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ" ಎಂದು ಟ್ವೀಟ್ ಮಾಡಿದ್ದಾರೆ.

  "ನಿಮ್ಮ ರೆಸ್ಟೋರೆಂಟ್ ನಲ್ಲಿ ಊಟ ಮಾಡಲು ಮೂರು ಗಂಟೆಗಳ ಕಾಲ ಕಾದೆವು. ನಿಮ್ಮ ರೆಸ್ಟೋರೆಂಟ್ ನ ವೇಟರ್ ಜೊಶುವಾ ಸಿಲ್ವರ್ ಮನ್, ನನ್ನ ತಾಯಿ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ. ಇದು ಸರಿಯಲ್ಲ" ಎಂದು ಅನನ್ಯಾ ಮತ್ತೊಂದು ಟ್ವೀಟ್ ನಲ್ಲಿ ಹೇಳಿದ್ದಾರೆ. ಈ ಟ್ವೀಟ್ ಅನ್ನು ಸ್ಕೂಪಾ ರೆಸ್ಟೋರೆಂಟ್ ನ ಒಡತಿ ಆಂಟೊನಿಯೊ ಲೊಫಾಸೊ ಅವರಿಗೂ ಟ್ಯಾಗ್ ಮಾಡಿದ್ದಾರೆ.

  Shashi Kumar ಮಗನಿಗೆ ಸಾಥ್ ಕೊಟ್ಟ ಉಪೇಂದ್ರ | Filmibeat Kannada

  ರೆಸ್ಟೋರೆಂಟ್ ವರ್ತನೆ ಬಗ್ಗೆ ಅನನ್ಯಾ ಬಿರ್ಲಾ ತಾಯಿ ನೀರಜಾ ಬಿರ್ಲಾ ಟ್ವೀಟ್ ಮಾಡಿ ಕಿಡಿ ಕಾರಿದ್ದಾರೆ. "ರೆಸ್ಟೋರೆಂಟ್ ಸಿಬ್ಬಂದಿಯ ವರ್ತನೆ ಕಂಡು ತುಂಬಾ ಆಘಾತವಾಗಿದೆ. ಯಾವೊಬ್ಬ ಗ್ರಾಹಕರನ್ನೂ ಇಷ್ಟು ಕೆಟ್ಟದಾಗಿ ನಡೆಸಿಕೊಳ್ಳುವ ಹಕ್ಕು ನಿಮಗಿಲ್ಲ" ಎಂದು ಹೇಳಿದ್ದಾರೆ. ಅನನ್ಯಾ ಸಹೋದರ ಆರ್ಯಮನ್ ಬಿರ್ಲಾ ಸಹ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  English summary
  Literally threw my family, Ananya Birla slams US Restaurant for being racist.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X