twitter
    For Quick Alerts
    ALLOW NOTIFICATIONS  
    For Daily Alerts

    ಮಿಸ್ ಬಿಕಿನಿ ಇಂಡಿಯಾ ಅರ್ಚನಾ ಗೌತಮ್‌ಗೆ ಕಾಂಗ್ರೆಸ್ ಟಿಕೆಟ್!

    |

    ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ವಿಧಾನಸಭೆ ಚುನಾವಣೆಯಲ್ಲಿ 125 ಸ್ಥಾನಗಳಿಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಗುರುವಾರ ಪ್ರಕಟಿಸಿದೆ. ಇದರ ಭಾಗವಾಗಿ, ಅಖಿಲ ಭಾರತ ಕಾಂಗ್ರೆಸ್ ಸಮಿತಿಯು ಮೀರತ್‌ನ ಏಳು ವಿಧಾನಸಭಾ ಸ್ಥಾನಗಳ ಪೈಕಿ ಎರಡಕ್ಕೆ ಅಭ್ಯರ್ಥಿಗಳನ್ನು ಘೋಷಿಸಿತು. ರೂಪದರ್ಶಿ ಮತ್ತು ತೆಲುಗು ನಟಿ ಅರ್ಚನಾ ಗೌತಮ್ ಅವರನ್ನು ಹಸ್ತಿನಾಪುರ ವಿಧಾನಸಭಾ ಕ್ಷೇತ್ರಕ್ಕೆ ಮತ್ತು ಕಾಂಗ್ರೆಸ್ ನಾಯಕಿ ಡಾ.ಬಬಿತಾ ಸಿಂಗ್ ಗುರ್ಜರ್ ಕಿಥೋರ್ ಅವರನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಆಯ್ಕೆ ಮಾಡಿದ್ದಾರೆ.

    ಬಬಿತಾ ಸಿಂಗ್ ಗುರ್ಜರ್ ದೀರ್ಘಕಾಲದಿಂದ ಪಕ್ಷದಲ್ಲಿ ಸಕ್ರಿಯರಾಗಿದ್ದರೆ, ಅರ್ಚನಾ ಗೌತಮ್ ಹೊಸ ಮುಖ. ಉತ್ತರಪ್ರದೇಶದ ಮೀರತ್‌ನಲ್ಲಿ ಜನಿಸಿದ ಅರ್ಚನಾ ಗೌತಮ್ ಅವರಿಗೆ ಕೇವಲ 26 ವರ್ಷ. ಪ್ರಸ್ತುತ ಅವರು ಒಂದೆಡೆ ಮಾಡಲಾಗಿ ಮತ್ತೊಂದು ಕಡೆ ಸಿನಿಮಾ ರಂಗದಲ್ಲಿ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಮಾಡೆಲ್ ಮತ್ತು ನಟಿ ಅರ್ಚನಾ ಗೌತಮ್ ವೃತ್ತಿಪರ ಬಿಕಿನಿ ಹುಡುಗಿಯಾಗಿಯೂ ಫೇಮಸ್ ಆಗಿದ್ದಾರೆ. ಮಿಸ್ ಬಿಕಿನಿ ಇಂಡಿಯಾ 2018 ರ ಸೌಂದರ್ಯ ಸ್ಪರ್ಧೆಯನ್ನು ಅರ್ಚನಾ ಗೆದ್ದಿದ್ದಾರೆ. ಅರ್ಚನಾ ಗೌತಮ್ ಐಐಎಂಟಿಯಿಂದ ಬಿಜೆಎಂಸಿ ಪೂರ್ಣಗೊಳಿಸಿದ್ದಾರೆ. ಮಿಸ್ ಉತ್ತರ ಪ್ರದೇಶ 2014, ಮಿಸ್ ಕಾಸ್ಮೊ ಇಂಡಿಯಾ 2018 ಸೇರಿದಂತೆ ಹಲವು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅವರು 'ದಿ ಗ್ರೇಟ್ ಗ್ರ್ಯಾಂಡ್ ಮಸ್ತಿ' 'ಹಸೀನಾ ಪಾರ್ಕರ್' ಸೇರಿದಂತೆ ಹಲವಾರು ಹಿಂದಿ, ತಮಿಳು ಮತ್ತು ದಕ್ಷಿಣ ಚಿತ್ರಗಳಲ್ಲಿ ನಟಿಸಿದ್ದಾರೆ. 'ಜಂಕ್ಷನ್ ವಾರಣಾಸಿ'ಯಂತಹ ಚಿತ್ರದಲ್ಲಿ ಅವರು ಗಟ್ಟಿಯಾದ ಪಾತ್ರವೊಂದರಲ್ಲಿ ಅಭಿನಯಿಸಿದ್ದರು.

    ಗ್ಲಾಮರ್ ಜಗತ್ತಿನಲ್ಲಿ ಗುರುತಿಸಿಕೊಂಡಿರುವ ಅರ್ಚನಾ

    ಗ್ಲಾಮರ್ ಜಗತ್ತಿನಲ್ಲಿ ಗುರುತಿಸಿಕೊಂಡಿರುವ ಅರ್ಚನಾ

    ಮಿಸ್ ಯುಪಿ ಅರ್ಚನಾ ಗೌತಮ್ ಓದಿದ್ದು ಪತ್ರಿಕೋದ್ಯಮ. ವಿದ್ಯಾಭ್ಯಾಸ ಮುಗಿದ ನಂತರ ಮಾಡೆಲಿಂಗ್ ಮತ್ತು ನಟನೆಯನ್ನು ಆರಂಭಿಸಿದರು. ಅರ್ಚನಾ 2014 ರಲ್ಲಿ ಮಿಸ್ ಯುಪಿ ಆಗಿ ಆಯ್ಕೆಯಾದರು. ಗ್ಲಾಮರ್ ಜಗತ್ತಿನಲ್ಲಿ ಇದು ಅವರ ಮೊದಲ ಯಶಸ್ಸು. ಅವರು ಈ ವರ್ಷದ ನವೆಂಬರ್‌ನಲ್ಲಿ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರಿದರು. ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರ 'ಲಡ್ಕಿ ಮೋ ಹೂನ್, ಲಾಡ್ ಶಕ್ತಿ ಹೂನ್' ಅಭಿಯಾನದಿಂದ ನಾನು ಪ್ರಭಾವಿತನಾಗಿದ್ದೆ ಎಂದು ಅರ್ಚನಾ ಗೌತಮ್ ಹೇಳಿದ್ದಾರೆ.

    ಮಹಿಳಾ ಅಭ್ಯರ್ಥಿ ಕಣಕ್ಕೆ

    ಮಹಿಳಾ ಅಭ್ಯರ್ಥಿ ಕಣಕ್ಕೆ

    2012ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೋಪಾಲ್ ಕಾಳಿ ಅವರು ಹಸ್ತಿನಾಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆಗ ಕಾಂಗ್ರೆಸ್ ಆರ್ ಎಲ್ ಡಿ ಜೊತೆ ಮೈತ್ರಿ ಮಾಡಿಕೊಂಡಿತ್ತು. 2017ರಲ್ಲಿ ಮೈತ್ರಿಯಿಂದಾಗಿ ಈ ಸ್ಥಾನ ಎಸ್‌ಪಿ ಖಾತೆಗೆ ಸೇರಿತ್ತು. ಈಗ ಹತ್ತು ವರ್ಷಗಳ ನಂತರ ಕಾಂಗ್ರೆಸ್ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಏತನ್ಮಧ್ಯೆ, ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ವಾಹಿದ್ 2007 ರಲ್ಲಿ ಕಿಥೋರ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. 2012ರಲ್ಲಿ ಮೈತ್ರಿಯಿಂದಾಗಿ ಆ ಸ್ಥಾನ ಆರ್‌ಎಲ್‌ಡಿಗೆ ಮತ್ತು 2017ರಲ್ಲಿ ಎಸ್‌ಪಿಗೆ ಹೋಯಿತು. ಹದಿನೈದು ವರ್ಷಗಳ ನಂತರ, ಕಾಂಗ್ರೆಸ್ ತನ್ನ ಮಹಿಳಾ ಅಭ್ಯರ್ಥಿಯಾಗಿ ಅರ್ಚನಾ ಗೌತಮ್ ಅವರನ್ನು ಕಣಕ್ಕಿಳಿಸಿತು.

    ಅವರಿಗೆ ಗೆಲ್ಲುವ ಅವಕಾಶಗಳು ಎಷ್ಟಿದೆ?

    ಅವರಿಗೆ ಗೆಲ್ಲುವ ಅವಕಾಶಗಳು ಎಷ್ಟಿದೆ?

    ಉತ್ತರ ಪ್ರದೇಶದಲ್ಲಿ ಫೆಬ್ರವರಿ 10 ರಿಂದ ಚುನಾವಣೆ ನಡೆಯಲಿದೆ. ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಇದಕ್ಕಾಗಿ ರಾಜಕೀಯ ಪಕ್ಷಗಳು ಈಗ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತಿವೆ. ಕಾಂಗ್ರೆಸ್ ಕೂಡ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸುತ್ತಿದೆ. ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ 50 ಮಹಿಳೆಯರಿಗೆ ಟಿಕೆಟ್ ನೀಡಿದೆ. ಟಿಕೆಟ್ ಹಂಚಿಕೆಯಲ್ಲಿ ಮಹಿಳೆಯರಿಗೆ ಆದ್ಯತೆ ನೀಡುವುದಾಗಿ ಕಾಂಗ್ರೆಸ್ ಈಗಾಗಲೇ ಘೋಷಿಸಿದೆ. ಈ ಕ್ರಮದಲ್ಲಿ ಬಾಲಿವುಡ್ ನಟಿ ಅರ್ಚನಾ ಗೌತಮ್ ಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಆದರೆ, ಈ ಸ್ಥಾನಕ್ಕೆ ಅರ್ಚನಾ ಗೌತಮ್ ಗೆ ಟಿಕೆಟ್ ನೀಡಿರುವುದು ಕಾಂಗ್ರೆಸ್ ನಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಸಂದರ್ಭದಲ್ಲಿ ಪ್ರಿಯಾಂಕ ಗಾಂಧಿಗೆ ಅರ್ಚನಾ ಗೌತಮ್ ಧನ್ಯವಾದ ಅರ್ಪಿಸಿದರು. ಆದರೆ ಅರ್ಚನಾ ಗೌತಮ್ ಅವರಿಗೆ ಗೆಲ್ಲುವ ಅವಕಾಶಗಳ ಬಗ್ಗೆ ನಕಾರಾತ್ಮಕತೆ ಹೆಚ್ಚಾಗಿ ಕೇಳಿಬರುತ್ತದೆ. ಇಲ್ಲಿ ಸ್ಪರ್ಧೆ ನೇರವಾಗಿ ಬಿಜೆಪಿ ಮತ್ತು ಸಮಾಜವಾದಿ ಮೈತ್ರಿಕೂಟದ ಮಧ್ಯೆ ಇರಲಿದೆ.

    ಫೆಬ್ರವರಿ 10ರಿಂದ ಏಳು ಹಂತದ ಮತದಾನ

    ಫೆಬ್ರವರಿ 10ರಿಂದ ಏಳು ಹಂತದ ಮತದಾನ

    ಉತ್ತರ ಪ್ರದೇಶ ಚುನಾವಣೆ ಕೆಲವು ಹಿಂದಷ್ಟೆ ಘೋಷಣೆ ಆಗಿದ್ದು, ಚುನಾವಣೆ ದೇಶದ ಗಮನ ಸೆಳೆದಿದೆ. ಬಿಜೆಪಿ, ಕಾಂಗ್ರೆಸ್, ಎಸ್‌ಪಿ, ಬಿಎಸ್‌ಪಿ ನಡುವೆ ಕಠಿಣ ಸ್ಪರ್ಧೆ ಏರ್ಪಟ್ಟಿದೆ. ಉತ್ತರ ಪ್ರದೇಶದ ಚುನಾವಣೆಯ ಮತದಾನ 7 ಹಂತಗಳಲ್ಲಿ ನಡೆಯಲಿದೆ. ಫೆಬ್ರವರಿ 10 ಕ್ಕೆ ಮೊದಲ ಹಂತದ ಮತದಾನ ನಡೆಯಲಿದ್ದು, ಮತದಾನದ ಕೊನೆಯ ಹಂತ 7 ಮಾರ್ಚ್‌ ಗೆ ಮುಗಿಯಲಿದೆ. ಫಲಿತಾಂಶ ಮಾರ್ಚ್‌ 10ಕ್ಕೆ ಬರಲಿದೆ.

    English summary
    Actress and miss Bikini India 2018 Archana Gautam gets Congress ticket, to contest from Hastinapur in UP assembly elections. Archana made her Bollywood with debut with the movie Great grand masti. She also appeared in a few Hindi, Tamil and Telugu movies.
    Friday, January 14, 2022, 19:10
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X