ನಟಿ ಅನುಷ್ಕಾಗೆ ಟ್ವಿಟ್ಟರ್ ನಲ್ಲಿ ಲೈಂಗಿಕ ಕಿರುಕುಳ
ಬಾಲಿವುಡ್ ಹಾಟ್ ಬೆಡಗಿ ಅನುಷ್ಕಾ ಶರ್ಮಾ ಅವರ ಮನಸ್ಸಿಗೆ ತುಂಬಾ ನೋವುಂಟಾಗುವಂತೆ ಟ್ವೀಟ್ ಮಾಡಲಾಗಿದೆ. ಮಹಿಳೆಯರ ಭದ್ರತೆ ಎಂಬ ವಿಷಯದ ಬಗ್ಗೆ ನಿರ್ದೇಶಕ ಅನುರಾಗ್ ಕಶ್ಯಪ್ ರೂಪಿಸಿರುವ "ದಟ್ ಡೇ ಆಫ್ಟರ್ ಎವ್ರಿಡೇ" ಎಂಬ ಕಿರುಚಿತ್ರ ಅದ್ಭುತವಾಗಿದೆ ಎಂಬ ಪ್ರಶಂಸೆ ಮಾತುಗಳು ಎಲ್ಲೆಡೆಯಿಂದಲೂ ಕೇಳಿಬಂದವು.
ಈ ರೀತಿಯ ಪ್ರಶಂಸೆ ಮಾತುಗಳು ಕೇಳಿಬಂದ ಹಿನ್ನೆಲೆಯಲ್ಲೇ ಅನುಷ್ಕಾರನ್ನು ಟಾರ್ಗೆಟ್ ಮಾಡಲಾಗಿದೆ. ಬಾಲಿವುಡ್ ನಟ, ನಿರ್ಮಾಪಕರಾದ ಕಮಲ್ ಆರ್ ಖಾನ್ ಹೆಸರಿನಲ್ಲಿ ನಕಲಿ ಟ್ವಿಟ್ಟರ್ ಖಾತೆ ತೆರೆದು ಅನುಷ್ಕಾಗೆ ಟ್ವೀಟ್ ಮಾಡಿ ಆಕೆಗೆ ಭಾರಿ ಕಿರುಕುಳ ನೀಡಲಾಗಿದೆ.
"ಅನುರಾಗ್ ಕಶ್ಯಪ್ ಜೊತೆ ಎಷ್ಟು ಸಲ ಮಲಗುತ್ತೀಯಾ. ಆತನ ಪಕ್ಕದಲ್ಲಿದ್ದರೆ ನಿನಗೆ ಮಜಾ ಸಿಗುತ್ತದೆ ಅಲ್ಲವೇ. ನಿನಗೆ ಸಿನಿಮಾ ಚಾನ್ಸ್ ಯಾರೂ ಕೊಡಲ್ಲ" ಎಂದು ಟ್ವೀಟ್ ಮಾಡಿದ್ದಾರೆ. ಇದರಿಂದ ಕಂಗಾಲಾದ ಅನುಷ್ಕಾ ಕೂಡಲೆ ನಿರ್ಮಾಪಕ ಕಮಲ್ ಆರ್ ಖಾನ್ ಅವರಿಗೆ ಟ್ವಿಟ್ಟರ್ ನಲ್ಲೇ ಜಾಡಿಸಿದ್ದಾರೆ.ಅನುಷ್ಕಾ ಅಭಿಮಾನಿಗಳೂ ಕಮಲ್ ವಿರುದ್ಧ ಸಿಡಿದೆದ್ದು ಇನ್ನೇನು ಪರಿಸ್ಥಿತಿ ಕೈ ಮೀರುವ ಹಂತಕ್ಕೆ ತಲುಪಿತ್ತು. ಅಷ್ಟರಲ್ಲಾಗಲೆ ಇದು ಫೇಕ್ ಅಕೌಂಟ್ ಎಂದು ಗೊತ್ತಾಗಿದೆ. ಕೂಡಲೆ ಕಮಲ್ ಆರ್ ಖಾನ್ ಅವರಲ್ಲಿ ಅನುಷ್ಕಾ ಕ್ಷಮೆಯಾಚಿಸಿದ್ದಾರೆ. ಇದು ನಕಲಿ ಅಕೌಂಟ್ ಎಂದು ಗೊತ್ತಾಗಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆದರೆ ಫೇಕ್ ಅಕೌಂಟ್ ಮೂಲಕ ಅನುಷ್ಕಾಗೆ ಕಿರುಕುಳ ಕೊಟ್ಟವ ಯಾರು ಎಂಬ ಬಗ್ಗೆ ಮಾತ್ರ ಇನ್ನೂ ಗೊತ್ತಾಗಿಲ್ಲ. ಈ ಬಗ್ಗೆ ಇನ್ನಷ್ಟೇ ತನಿಖೆ ನಡೆಸಬೇಕಾಗಿದೆ. ಅನುಷ್ಕಾಗೆ ಆದಂತೆ ಕೆಟ್ಟ ಅನುಭವ ಬೇರಾರಿಗೂ ಆಗದಿರಲಿ ಎಂದು ಬಾಲಿವುಡ್ ನಿಟ್ಟುಸಿರುಬಿಟ್ಟಿದೆ.


Click it and Unblock the Notifications











