ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮಗಳಿಗೆ ನಾಮಕರಣ, ಹೆಸರೇನು?
ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ದಂಪತಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಜನವರಿ 11 ರಂದು ಚೊಚ್ಚಲ ಮಗುವನ್ನು ಬರಮಾಡಿಕೊಂಡಿದ್ದ ದಂಪತಿ ಸೋಶಿಯಲ್ ಮೀಡಿಯಾದಲ್ಲಿ ಸಂತಸ ಹಂಚಿಕೊಂಡಿದ್ದರು. ಇದೀಗ, ನಾಮಕರಣ ಕಾರ್ಯಕ್ರಮ ನಡೆದಿದ್ದು, ಮಗಳ ಹೆಸರು ಬಹಿರಂಗವಾಗಿದೆ.
ಅನುಷ್ಕಾ ಮತ್ತು ಕೊಹ್ಲಿ ದಂಪತಿಗೆ ಹೆಣ್ಣು ಮಗು ಆಯ್ತು ಎಂಬ ವಿಚಾರ ಹೊರಬೀಳುತ್ತಿದ್ದಂತೆ ಏನೆಂದು ಹೆಸರಿಡಬಹುದು ಎಂಬ ಚರ್ಚೆ ಶುರುವಾಯಿತು. ಅನುಷ್ಕಾ ಮತ್ತು ಕೊಹ್ಲಿ ಜೋಡಿಯನ್ನು 'ವಿರುಷ್ಕಾ' ಎಂದು ಕರೆಯಲಾಗುತ್ತಿತ್ತು. ಹೆಣ್ಣು ಮಗು ಆದ ಕಾರಣ ಇದೇ ಹೆಸರು ಇಟ್ಟುಬಿಡಿ ಎಂದು ಅಭಿಮಾನಿಗಳು ಮನವಿ ಮಾಡಿದ್ದರು. ಅಭಿಮಾನಿಗಳು ನಿರಾಸೆಯಾಗದಂತಹ ಹೆಸರನ್ನು ಈಗ ವಿರುಷ್ಕಾ ದಂಪತಿ ಇಟ್ಟಿದ್ದಾರೆ. ಮುಂದೆ ಓದಿ....

ಅನುಷ್ಕಾ-ಕೊಹ್ಲಿ ಮಗಳ ಹೆಸರೇನು?
ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮಗಳಿಗೆ 'ವಮಿಕಾ' ಎಂದು ನಾಮಕರಣ ಮಾಡಲಾಗಿದೆ. ಚೊಚ್ಚಲ ಬಾರಿಗೆ ಮಗುವಿನ ಜೊತೆ ದಂಪತಿ ಇಬ್ಬರು ಫೋಟೋ ಹಂಚಿಕೊಂಡಿದ್ದು, ''ನಮ್ಮ ಹೊಸ ಜಗತ್ತು'' ಎಂದು ಖುಷಿ ವ್ಯಕ್ತಪಡಿಸಿದ್ದಾರೆ.

'ವಮಿಕಾ' ಹೆಸರಿಲ್ಲಿದೆ ವಿರುಷ್ಕಾ ನೆನಪು
ವಿರಾಟ್ ಕೊಹ್ಲಿಯ ಮೊದಲ ಅಕ್ಷರ 'ವ' (ಇಂಗ್ಲಿಷ್‌ನಲ್ಲಿ V ಎಂದು ಆರಂಭವಾಗುತ್ತದೆ) ಹಾಗೂ ಅನುಷ್ಕಾ ಕೊನೆಯ ಅಕ್ಷರ 'ಕ' (ಇಂಗ್ಲಿಷ್‌ನಲ್ಲಿ KA ಎಂದು ಕೊನೆಯಾಗುತ್ತದೆ). ವಿರಾಟ್ ಹಾಗೂ ಅನುಷ್ಕಾ ಹೆಸರು ಹೋಲುವಂತೆ ಹಾಗೂ ಇಬ್ಬರು ಹೆಸರು ನೆನಪು ಮಾಡುವಂತಿದೆ 'ವಮಿಕಾ' (Vamika).

ಜನವರಿ 11 ರಂದು ವಮಿಕಾ ಜನನ
ಜನವರಿ 11 ರಂದು ಅನುಷ್ಕಾ ಶರ್ಮಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ಸುದ್ದಿಯನ್ನು ಸ್ವತಃ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ''ನಾವು ಹೆಣ್ಣು ಮಗುವನ್ನು ಸ್ವಾಗತಿಸಿದ್ದೇವೆ ಎಂದು ಹೇಳಲು ಬಹಳ ಖುಷಿಯಾಗುತ್ತಿದೆ. ಅನುಷ್ಕಾ ಮತ್ತು ಮಗುವಿನ ಬಗ್ಗೆ ಪ್ರಾರ್ಥಿಸಿದ ನಿಮ್ಮೆಲ್ಲರಿಗೂ ಧನ್ಯವಾದಗಳು, ಅನುಷ್ಕಾ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ. ಇಂತಹ ಸಮಯದಲ್ಲಿ ನಮ್ಮ ಖಾಸಗಿತನವನ್ನು ನೀವು ಗೌರವಿಸುತ್ತೀರಾ ಎಂದು ಬಯಸಿದ್ದೇನೆ'' ಎಂದು ಕೊಹ್ಲಿ ಪೋಸ್ಟ್ ಹಾಕಿದ್ದರು.

2017ರಲ್ಲಿ ವಿವಾಹ
2020 ಆಗಸ್ಟ್ ತಿಂಗಳಲ್ಲಿ ಅನುಷ್ಕಾ ಶರ್ಮಾ ಗರ್ಭಿಣಿ ಎಂದು ಕೊಹ್ಲಿ ದಂಪತಿ ಅನೌನ್ಸ್ ಮಾಡಿದ್ದರು. 2017ರ ಡಿಸೆಂಬರ್ ತಿಂಗಳಲ್ಲಿ ಕೊಹ್ಲಿ ಮತ್ತು ಅನುಷ್ಕಾ ಮದುವೆ ನಡೆದಿತ್ತು. ಇಟಲಿಯಲ್ಲಿ ವಿರುಷ್ಕಾ ಜೋಡಿಯ ವಿವಾಹ ಜರುಗಿತ್ತು.


Click it and Unblock the Notifications











