ದರ್ಶನ್ ಸಿನಿಮಾದ ಶೀರ್ಷಿಕೆಯನ್ನೇ ಇಟ್ಟ ಅನುಷ್ಕಾ: ಹೇಗಿದೆ ನೋಡಿ ಫಸ್ಟ್ ಲುಕ್

ನಟಿ ಅನುಷ್ಕಾ ಶರ್ಮಾ ವರ್ಷಗಳ ಬಳಿಕ ಪಾತಾಳ್ ಲೋಕ್ ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಲಾಕ್ ಡೌನ್ ನಲ್ಲಿ ಅನುಷ್ಕಾ ಪಾತಾಳ್ ಲೋಕ್ ಮೂಲಕ ಚಿತ್ರಪ್ರೇಕ್ಷಕರನ್ನು ರಂಜಿಸಿದ್ದಾರೆ. ಅಮೇಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿರುವ ಪಾತಾಳ್ ಲೋಕ್ ವೆಬ್ ಸರಣಿ ಚಿತ್ರಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Recommended Video

ದರ್ಶನ್ ಸಿನಿಮಾ ಶೀರ್ಷಿಕೆಯನ್ನು ತನ್ನ ಸಿನಿಮಾಗೆ ಇಟ್ಟ ಅನುಷ್ಕಾ ಶರ್ಮಾ | Anushka Sharma | Bul Bul

ಇದೆ ಖುಷಿಯಲ್ಲಿ ಅನುಷ್ಕಾ ಮತ್ತೊಂದು ಸಿನಿಮಾ ಅನೌನ್ಸ್ ಮಾಡಿದ್ದಾರೆ. ವಿಶೇಷ ಅಂದರೆ ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸೂಪರ್ ಹಿಟ್ ಸಿನಿಮಾದ ಹೆಸರನ್ನೆ ಇಟ್ಟಿದ್ದಾರೆ. ಹೌದು, ದರ್ಶನ್ ಮತ್ತು ರಚಿತಾ ಅಭಿನಯದ ಬುಲ್ ಬುಲ್ ಸಿನಿಮಾದ ಹೆಸರನ್ನೆ ಅನುಷ್ಕಾ ಶರ್ಮಾ ಮುಂದಿನ ಸಿನಿಮಾಗೆ ನಾಮಕರಣ ಮಾಡಿದ್ದಾರೆ.

ಕನ್ನಡದ ಬುಲ್ ಬುಲ್ ರೊಮ್ಯಾಂಟಿಕ್ ಫ್ಯಾಮಿಲಿ ಚಿತ್ರವಾಗಿತ್ತು. ಆದರೆ ಅನುಷ್ಕಾ ಶರ್ಮಾ ಅವರ ಬುಲ್ ಬುಲ್ ಹಾರರ್ ಸಿನಿಮಾವಾಗಿದೆ. ಅನುಷ್ಕಾ ಅವರಿಗೆ ಹಾರರ್ ಸಿನಿಮಾ ಅಂದರೆ ತುಂಬಾ ಇಷ್ಟ. ಸಾಕಷ್ಟು ಹಾರರ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

Actress Anushka Sharma Unveils First Look Of Her New Movie Bulbul

ಪರಿ, ಎನ್ ಹೆಚ್ 10 ಪಾತಾಳ್ ಲೋಕ್ ಸಿನಿಮಾಗಳ ನಂತರ ಮತ್ತೆ ಹಾರರ್ ಸಿನಿಮಾ ಮೂಲಕವೆ ಬರ್ತಿದ್ದಾರೆ. ಈಗಾಗಲೆ ಚಿತ್ರದ ಪುಟ್ಟ ಟೀಸರ್ ರಿಲೀಸ್ ಮಾಡಿದ್ದಾರೆ. ಹುಣ್ಣಿಮೆ ಚಂದ್ರ ಇರುವ ಈ ಟೀಸರ್ ಕುತೂಹಲ ಮತ್ತಷ್ಟು ಹೆಚ್ಚಿಸಿದೆ. ಅಂದ್ಹಾಗೆ ಈ ಸಿನಿಮಾ ಚಿತ್ರಮಂದಿರಗಳಲ್ಲಿ ತೆರೆಗೆ ಬರುತ್ತಿಲ್ಲ. ನೇರವಾಗಿ ನೆಟ್ ಫ್ಲಿಕ್ಸ್ ನಲ್ಲಿ ನೇರವಾಗಿ ರಿಲೀಸ್ ಆಗಲಿದೆ.

More from Filmibeat

English summary
Bollywood Actress Anushka Sharma unveils first look of her new movie Bulbul.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X