ನಟಿ ಅನುಷ್ಕಾ ಶರ್ಮಾ ಧರಿಸಿದ್ದ ಡ್ರೆಸ್ ನೋಡಿ ಮಗಳಾದ್ದ ಎಂದ ನೆಟ್ಟಿಗರು: ಈ ಟಾಪ್ ಬೆಲೆ ಎಷ್ಟು ಗೊತ್ತಾ?

ಸೆಲೆಬ್ರಿಗಳು ಜೀವನಶೈಲಿ ಯಾವಾಗಲೂ ದುಬಾರಿಯಾಗಿರುತ್ತದೆ. ಅವರು ಧರಿಸಿರುವ ಬಟ್ಟೆಯಿಂದ ಹಿಡಿದು ಓಡಾಡುವ ಕಾರಿನ ವರೆಗೆ ಎಲ್ಲದಕ್ಕೂ ದುಬಾರಿ ಟ್ಯಾಗ್ ಇದ್ದೆ ಇರುತ್ತದೆ. ಅದರಲ್ಲೂ ನಟಿಮಣಿಯರು ತಾವು ಧರಿಸುವ ಬಟ್ಟೆ, ಮೇಕಪ್ ಗಾಗಿಯೇ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುತ್ತಾರೆ. ಅದರಲ್ಲೂ ತಾವು ಭಾಗವಹಿಸುವ ಪ್ರತಿಯೊಂದು ಕಾರ್ಯಕ್ರಮಕ್ಕೂ ದುಬಾರಿಯ ಬೆಲೆಯ ಉಡುಗೆ ಧರಿಸುವ ಮೂಲಕ ಗಮನ ಸೆಳೆಯುತ್ತಾರೆ.

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮಗಳು ವಾಮಿಕಾ ಆಗಮನದ ನಂತರ ನಟನೆಯಿಂದ ಬ್ರೇಕ್ ಪಡೆದುಕೊಂಡು ಆಕೆಯ ಪಾಲನೆ ಮತ್ತು ಪೋಷಣೆಯಲ್ಲಿ ಬ್ಯುಸಿಯಾಗಿದ್ದರು. ಇದೀಗ ಚಕ್ಡಾ ಎಕ್ಸ್ಪ್ರೆಸ್ ಸಿನಿಮಾ ಮೂಲಕ ಕಂಬ್ಯಾಕ್ ಮಾಡುತ್ತಿದ್ದಾರೆ. ಅನುಷ್ಕಾ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಬ್ಲೂ ಕಲರ್ ಡೆನಿಮ್ ಹಾಗೂ ಹಳದಿ ಬಣ್ಣದ ಬಲೂನ್ ಹ್ಯಾಂಡ್ ನ ಸ್ಟೈಲಿಶ್ ಟಾಪ್ ಧರಿಸಿದ್ದರು. ಸದ್ಯ ಅನುಷ್ಕಾ ಧರಿಸಿದ್ದ ಟಾಪ್ ಬೆಲೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಜೊತೆಗೆ ಈ ಡ್ರೆಸ್ ಧರಿಸಿದ್ದಕ್ಕಾಗಿ ನಟಿ ಅನುಷ್ಕಾ ಶರ್ಮಾ ಟ್ರೊಲ್ ಗೆ ಕೂಡ ಒಳಾಗಾಗಿದ್ದಾರೆ.

actress anushka sharma yellow off shoulder top woth rs 20,000

ಅನುಷ್ಕಾ ಧರಿಸಿದ್ದ ಟಾಪ್ ಬೆಲೆ 20 ಸಾವಿರ

ಅನುಷ್ಕಾ ಶರ್ಮಾ ಕಾರ್ಯಕ್ರಮದಲ್ಲಿ ಧರಿಸಿದ್ದ ಹಳದಿ ಬಣ್ಣದ ಟಾಪ್ ಸ್ಟ್ರಾಪ್ ಲೆಸ್ ಆಗಿದ್ದು, ಡೀಪ್ ಹಾರ್ಟ್ ನೆಕ್ ಹೊಂದಿತ್ತು. ನೆಕ್ಲೈನ್ ಈ ಟಾಪ್ ಹೈಲೈಟ್ ಆಗಿದ್ದು, ಅನುಷ್ಕಾ ಕುತ್ತಿಗೆಗೆ ಚೈನ್ ಧರಿಸಿರಲಿಲ್ಲ. ಕಿವಿಯೋಲೆ ಮಾತ್ರ ಧರಿಸಿದ್ದು, ಸಿಂಪಲ್ ಮೇಕಪ್ ಮಾಡಿದ್ದರು. ಹೇರ್ ಸ್ಟೈಲ್ ಕೂಡ ಸರಳವಾಗಿತ್ತು. ನಟಿ ಅನುಷ್ಕಾ ಧರಿಸಿದ್ದ ಟಾಪ್ ಹೆಸರು ವಿಕಾ ಟಾಪ್. ಇದರ ಬೆಲೆ ೨೦ ಸಾವಿರ ರೂಪಾಯಿಯಾಗಿದ್ದು ಇದನ್ನು ಮಲಿ ವೆಬ್ ಸೈಟ್ ನಲ್ಲಿ ಖರೀದಿಸಬಹುದಾಗಿದೆ.

ಅನುಷ್ಕಾ ಶರ್ಮಾಗೆ ಟ್ರೋಲ್ ಕಾಟ
ಸೆಲೆಬ್ರಿಟಿಗಳು ತಾವು ಧರಿಸುವ ಉಡುಪಿನಿಂದಾಗಿ ಕೆಲವೊಮ್ಮೆ ಬಹುಬೇಗ ಟ್ರೋಲ್ ಗಳಿಗೆ ಆಹಾರವಾಗುತ್ತಾರೆ. ಸದ್ಯ ನಟಿ ಅನುಷ್ಕಾ ಕೂಡ ಇದೇ ವಿಚಾರಕ್ಕೆ ಟ್ರೋಲ್ ಆಗಿದ್ದಾರೆ. ಅನುಷ್ಕಾ ತಮ್ಮ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ನೆಟ್ಟಿಗರು ತರೇಹವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಅನುಷ್ಕಾ ಶರ್ಮಾ ಅರ್ಜೆಂಟ್ ನಲ್ಲಿ ಮಗಳ ಬಟ್ಟೆಯನ್ನು ಧರಿಸಿಕೊಂಡು ಬಂದಿದ್ದಾರೆ ಎಂದು ಕೆಲವ್ರು ಹೇಳಿದ್ದಾರೆ. ಇನ್ನು ಕೆಲವರು ಇದು ನಿಮ್ಮ ಡ್ರೆಸ್ಸಾ ಅಥವಾ ಮಗಳ ಡ್ರೆಸ್ಸಾ? ಅಂತ ಪ್ರಶ್ನೆ ಮಾಡುತ್ತಿದ್ದಾರೆ. ನಟಿಯ ಅಭಿಮಾನಿಗಳು 'ಬಟ್ಟೆ ಎಂಬುದು ಅವರ ಆಯ್ಕೆ' ಎಂದು ಅನುಷ್ಕಾ ಪರ ಬ್ಯಾಟ್ ಬೀಸಿದ್ದಾರೆ.

actress anushka sharma yellow off shoulder top woth rs 20,000

ನಾಲ್ಕು ವರ್ಷಗಳ ಬಳಿಕ ಅನುಷ್ಕಾ ಕಂಬ್ಯಾಕ್
ವಿರಾಟ್ ಕೊಹ್ಲಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಅನುಷ್ಕಾ ಅಷ್ಟಾಗಿ ಯಾವುದೇ ಸಿನಿಮಾಗಳನ್ನು ಒಪ್ಪಿಕೊಂಡಿರಲಿಲ್ಲ. 2018ರಲ್ಲಿ ಅನುಷ್ಕಾ ಮತ್ತು ಶಾರುಖ್ ಖಾನ್ ನಟನೆಯ 'ಜೀರೋ' ಚಿತ್ರ ತೆರೆಗೆ ಬಂದಿತ್ತು. ಇದಾದ ಬಳಿಕ ಅನುಷ್ಕಾ ಯಾವುದೇ ಸಿನಿಮಾದಲ್ಲಿ ನಟಿಸಿರಲಿಲ್ಲ. ತಮ್ಮ ಸಂಪೂರ್ಣ ಸಮಯವನ್ನು ಕುಟುಂಬಕ್ಕೆ ಮೀಸಲಿಟ್ಟಿದ್ದರು. ಆದರೆ, ನಿರ್ಮಾಪಕಿಯಾಗಿ ಹಲವು ಸಿನಿಮಾಗಳಿಗೆ ಹಣ ಹೂಡಿಕೆ ಮಾಡಿದ್ದರು. ಸದ್ಯ ಅನುಷ್ಕಾ ಶರ್ಮಾ ಹಲವು ಸಿನಿಮಾಗಳನ್ನು ಒಪ್ಪಿಕೊಂಡಿದ್ದು, ಮತ್ತೆ ಕಂಬ್ಯಾಕ್ ಮಾಡಿದ್ದಾರೆ. ಅನುಷ್ಕಾ ನಟನೆಯ ಚಕ್ಡಾ ಎಕ್ಸ್ಪ್ರೆಸ್ ಈ ವರ್ಷ ತೆರೆಗೆ ಬರುವ ಸಾಧ್ಯತೆಯಿದೆ. ಇದು ಅವರ ಅಭಿಮಾನಿಗಳಿಗೆ ಸಂತಸದ ವಿಷಯ.

More from Filmibeat

English summary
actress anushka sharma yellow off shoulder top woth rs 20,000,Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X