For Quick Alerts
  ALLOW NOTIFICATIONS  
  For Daily Alerts

  'ದಿ ಫ್ಯಾಮಿಲಿ ಮ್ಯಾನ್-2': ಕಿಸ್ಸಿಂಗ್ ದೃಶ್ಯದ ಬಗ್ಗೆ ನಟಿ ಆಶ್ಲೇಷಾ ಹೇಳಿದ್ದೇನು?

  |

  'ದಿ ಫ್ಯಾಮಿಲಿ ಮ್ಯಾನ್-2' ವೆಬ್ ಸೀರಿಸ್ ಬಿಡುಗಡೆಯಾಗಿ ತಿಂಗಳಾದರು ಈ ಬಗ್ಗೆ ಇನ್ನು ಚರ್ಚೆ ನಡೆಯುತ್ತಿದೆ. ಭಾರತದಲ್ಲಿ ಸೂಪರ್ ಸಕ್ಸಸ್ ವೆಬ್ ಸಿರೀಸ್ ಗಳಲ್ಲಿ ದಿ ಫ್ಯಾಮಿಲಿ ಮ್ಯಾನ್ ಕೂಡ ಒಂದು. ಮೊದಲ ಭಾಗದಂತೆ ಎರಡನೇ ಭಾಗ ಕೂಡ ಸೂಪರ್ ಹಿಟ್ ಆಗಿದೆ.

  ಮನೋಜ್ ಬಾಜಪೇಯಿ, ಸಮಂತಾ, ಪ್ರಿಯಾಮಣಿ ಹೀಗೆ ಪ್ರತಿಯೊಬ್ಬರ ಪಾತ್ರವೂ ಅಭಿಮಾನಿಗಳ ಮನಗೆದ್ದಿದೆ. ವೆಬ್ ಸೀರಿಸ್ ನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ನಟಿ ಆಶ್ಲೇಷಾ ಠಾಕೂರ್ ಎಲ್ಲರ ಆಕರ್ಷಣೆ ಆಗಿದ್ದಾರೆ. ಮನೋಜ್ ಬಾಜಪೇಯಿ ಮತ್ತು ಪ್ರಿಯಾಮಣಿ ಮಗಳ ಪಾತ್ರದಲ್ಲಿ ನಟಿಸಿರುವ ಆಶ್ಲೇಷಾ ಎರಡನೇ ಭಾಗದಲ್ಲಿ ಕೆಲವು ಹಾಟ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.

  ದೃತಿ ಪಾತ್ರದ ಮೂಲಕ ಅಭಿಮಾನಿಗಳ ಗಮನ ಸಳೆದಿರುವ ಅಶ್ಲೇಷಾ, ನಟ ಅಭಯ್ ವರ್ಮಾ ಪ್ರೇಯಸಿಯ ಪಾತ್ರದಲ್ಲಿ ನಟಿಸಿದ್ದಾರೆ. ಇಬ್ಬರ ಕಿಸ್ಸಿಂಗ್ ದೃಶ್ಯದ ಬಗ್ಗೆ ನಟಿ ಆಶ್ಲೇಷಾ ಬಹಿರಂಗ ಪಡಿಸಿದ್ದಾರೆ. ರೊಮ್ಯಾಂಟಿಕ್ ಪಾತ್ರದ ಬಗ್ಗೆ ನಿರ್ದೇಶಕರು ಮೊದಲು ಹೇಳಿದಾಗ ತುಂಬಾ ನರ್ವಸ್ ಆಗಿದ್ದೆ ಎಂದು ಹೇಳಿದ್ದಾರೆ.

  "ನಾನು ತುಂಬಾ ನರ್ವಸ್ ಆಗಿದ್ದೆ. ಇದು ನನಗೆ ಹೊಸ ವಿಷಯವಾಗಿತ್ತು. ಪಾತ್ರಕ್ಕೆ ಪ್ರಬುದ್ಧತೆಯನ್ನು ತರಬೇಕಿತ್ತು. ಕಿಸ್ಸಿಂಗ್ ದೃಶ್ಯ ತಮಾಷೆಯಲ್ಲ. ಮಕ್ಕಳ ಹಾಗೆ ನಟಿಸುವುದು ಆಗಿರಲಿಲ್ಲ. ನಾನು ತುಂಬಾ ನ್ಯಾಚುರಲ್ ಆಗಿ ಕಾಣುವಂತೆ ಬಯಸುತ್ತೇನೆ. ತುಂಬಾ ವೆಬ್ ಸರಣಿಗಳನ್ನು ನೋಡಿದ್ದೇನೆ. ನಾನು ನಿರ್ದೇಶಕರನ್ನು ನಂಬುತ್ತೇನೆ. ಅದು ತೆರೆಮೇಲೆ ಹೇಗಿರುತ್ತದೆ ಎಂಬುದರ ಬಗ್ಗೆ ಚಿಂತಿಸಲಿಲ್ಲ ಏಕೆಂದರೆ ಅವರ ಬರವಣಿಗೆಯೊಂದಿಗೆ ಅವರು ಎಷ್ಟು ನಿಖರವಾಗಿರುತ್ತಾರೆಂದು ನನಗೆ ತಿಳಿದಿದೆ" ಎಂದು ಆಶ್ಲೇಷಾ ಚುಂಬನ ದೃಶ್ಯದ ಬಗ್ಗೆ ಬಹಿರಂಗ ಪಡಿಸಿದ್ದಾರೆ.

  ಅಂದಹಾಗೆ ಈ ಜೋಡಿ 'ದಿ ಫ್ಯಾಮಿಲಿ ಮ್ಯಾನ್' ವೆಬ್ ಸೀರಿಸ್ ಗು ಮೊದಲು ಟಿವಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಹಾಗಾಗಿ ಇಬ್ಬರ ನಡುವೆ ಉತ್ತಮ ಬಾಂಧವ್ಯವಿತ್ತು. ಕಿಸ್ಸಿಂಗ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲು ಸುಲಭವಾಯಿತು. ಇನ್ನು ಅಪಹರಣ ದೃಶ್ಯದ ಬಗ್ಗೆ ಮಾತನಾಡಿದ ಆಶ್ಲೇಷಾ, "ಆ ದೃಶ್ಯ ನನಗೆ ಮಾನಸಿಕವಾಗಿ, ಭಾವನಾತ್ಮಕವಾಗಿ ದೊಡ್ಡ ಸವಾಲಾಗಿತ್ತು" ಎಂದಿದ್ದಾರೆ.

  ಶಿವಣ್ಣನ ಅಭಿಮಾನಿಗಳಿಗೆ ಭರ್ಜರಿ ಸುದ್ದಿ

  ಇತ್ತೀಚಿಗೆ ನಟ ಮನೋಜ್ ಬಾಜಪೇಯಿ ಕೂಡ ಆಶ್ಲೇಷಾ ಪಾತ್ರವನ್ನು ಮೆಚ್ಚಿಕೊಂಡಿದ್ದರು. ವೆಬ್ ಸೀರಿಸ್‌ನ ನೆಚ್ಚಿನ ನಟಿ ಎಂದಿದ್ದರು. ಸದ್ಯ ದಿ ಫ್ಯಾಮಿಲಿ ಮ್ಯಾನ್-3ಗೆ ಸಿದ್ಧತೆ ನಡೆಯುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ. ಎಲ್ಲವು ಅಂದುಕೊಂಡಂತೆ ಆಗಿದ್ದರೆ ದಿ ಫ್ಯಾಮಿಲಿ ಮ್ಯಾನ್-3 ಮುಂದಿನ ವರ್ಷ ಬಿಡುಗಡೆಯಾಗುವ ಸಾಧ್ಯತೆ ಇದೆ.

  English summary
  Actress Ashlesha Thakur reveals her kissing scene, she calls kissing scene no fun.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X