ಆಸಿನ್ ದಾಂಪತ್ಯದಲ್ಲಿ ಬಿರುಕು? ಡಿವೋರ್ಸ್ ಬಗ್ಗೆ ಬಹಿರಂಗವಾಗಿ ಪೋಸ್ಟ್ ಹಂಚಿಕೊಂಡ ನಟಿ!
ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಬಹುಭಾಷಾ ತಾರೆ ನಟಿ ಆಸಿನ್ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ. ಹೌದು, ಉದ್ಯಮಿ ರಾಹುಲ್ ಶರ್ಮಾ ಜತೆ ವಿವಾಹವಾಗಿದ್ದ ಆಸಿನ್ ಬಾಳಿನಲ್ಲಿ ಬಿರುಗಾಳಿ ಎದ್ದಿದ್ದು ಇಬ್ಬರೂ ಪರಸ್ಪರ ವಿವಾಹ ವಿಚ್ಛೇದನ ಪಡೆದುಕೊಳ್ಳಲು ಮುಂದಾಗಿದ್ದಾರೆ ಎಂದು ಸುದ್ದಿಗಳು ಹರಿದಾಡಿದ್ದವು.
2016ರಲ್ಲಿ ಉದ್ಯಮಿ ರಾಹುಲ್ ಶರ್ಮ ಜೊತೆ ಆಸಿನ್ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ನಂತರ ಚಿತ್ರರಂಗ ತೊರೆದು ಆಕೆ ತಮ್ಮ ಪತಿ ರಾಹುಲ್ ಜೊತೆ ಮೈಕ್ರೋ ಮ್ಯಾಕ್ಸ್ ಕಂಪನಿಯಲ್ಲೂ ಕೆಲಸ ಮಾಡಿದ್ರು. ಇದೀಗ ದಂಪತಿ ನಡುವೆ ಎಲ್ಲವೂ ಸರಿಯಿಲ್ಲ. ಇಬ್ಬರು ದೂರಾಗಲು ನಿರ್ಧರಿಸಿದ್ದಾರೆ ಎನ್ನುವ ವದಂತಿ ಹರಡಿದೆ. ಇದೇ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆಗಿತ್ತು.

ಹೀಗೆ ಸುದ್ದಿ ದೊಡ್ಡ ಮಟ್ಟದಲ್ಲಿ ಹರಿದಾಡಿದ್ದನ್ನು ಗಮನಿಸಿದ ನಟಿ ಆಸಿನ್ ಇದೀಗ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೋರಿ ಹಂಚಿಕೊಳ್ಳುವ ಮೂಲಕ ಎಲ್ಲಾ ಗೊಂದಲಗಳಿಗೂ ತೆರೆ ಎಳೆದಿದ್ದಾರೆ. ತಾವು ಹಾಗೂ ತಮ್ಮ ಪತಿ ರಾಹುಲ್ ಶರ್ಮಾ ಚೆನ್ನಾಗಿಯೇ ಇದ್ದೇವೆ, ಇಬ್ಬರ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲ, ಇದೆಲ್ಲಾ ಸುಳ್ಳು ಸುದ್ದಿ, ನಾವಿಬ್ಬರೂ ಒಟ್ಟಿಗೆ ಸಮ್ಮರ್ ಟೂರ್ ಮಾಡುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ.
"ನಾವು ನಮ್ಮ ಬೇಸಿಗೆ ರಜೆಯನ್ನು ಎಂಜಾಯ್ ಮಾಡುತ್ತಿದ್ದೇವೆ. ನಾವಿಬ್ಬರೂ ಪಕ್ಕದಲ್ಲಿಯೇ ಕುಳಿತು ಉಪಹಾರವನ್ನು ಆನಂದಿಸುತ್ತಿರುವಾಗ ಕಾಲ್ಪನಿಕ ಹಾಗೂ ಸಂಪೂರ್ಣವಾಗಿ ಆಧಾರರಹಿತವಾದ 'ಸುದ್ದಿ'ಗಳನ್ನು ನೋಡಿದೆವು. ನಾವು ನಮ್ಮ ಕುಟುಂಬದೊಂದಿಗೆ ನಮ್ಮ ಮದುವೆಗೆ ಯೋಜಿಸುತ್ತಿರುವ ಸಮಯವನ್ನು ನೆನಪಿಸಿಕೊಂಡೆವು. ಅಲ್ಲದೇ ನಮ್ಮ ನಡುವಿನ ಸಂಬಂಧ ಮುರಿದುಬಿದ್ದಿದೆ ಎಂಬುದನ್ನು ಕೇಳಿ ನಗು ಬಂತು. ನಿಜವಾಗಿನಾ? ದಯವಿಟ್ಟು ಒಳ್ಳೆಯ ಕೆಲಸಗಳನ್ನು ಮಾಡಿ. (ಇದಕ್ಕಾಗಿ 5 ನಿಮಿಷಗಳ ಅದ್ಭುತ ರಜಾದಿನವನ್ನು ವ್ಯರ್ಥಮಾಡಿದ್ದಕ್ಕಾಗಿ ನಿರಾಶೆಗೊಂಡಿದ್ದೇನೆ!) ನಿಮ್ಮ ದಿನ ಚೆನ್ನಾಗಿರಲಿ" ಎಂದು ಆಸಿನ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಉಲ್ಲೇಖಿಸಿದ್ದಾರೆ.


Click it and Unblock the Notifications











