ಮೊದಲ ಮಗುವಿನ ನಿರೀಕ್ಷೆಯಲ್ಲಿ ಕ್ರಿಕೆಟಿಗ ಕೆ.ಎಲ್.ರಾಹುಲ್ - ನಟಿ ಅಥಿಯಾ ಶೆಟ್ಟಿ...!

ಸಾಮಾನ್ಯವಾಗಿ ಯಾರೇ ಮದುವೆಯಾಗಲಿ ಕೆಲ ದಿನಗಳು ಕಳೆಯುತ್ತಿದ್ದಂತೆ ಕೇಳೋ ಪ್ರಶ್ನೆ ಏನಾದ್ರೂ ಗುಡ್ ನ್ಯೂಸು.. ಅಂತಾನೇ. ಇನ್ನು ಸೆಲೆಬ್ರೆಟಿಗಳ ವಿಚಾರದಲ್ಲಿ ಇದು ಇನ್ನೂ ಅತಿಯಾಗಿರುತ್ತದೆ. ಅವರು ಹೋದಲ್ಲಿ ಬಂದಲ್ಲಿ ಅನೇಕರು ಈ ಪ್ರಶ್ನೆಯನ್ನು ಕೇಳುತ್ತಾನೇ ಇರುತ್ತಾರೆ.

ಹೀಗಾಗಿ ಬೇರೆಯವರು ಕೇಳುವುದಕ್ಕಿಂತ ಮುನ್ನ ನಾವಾಗಿಯೇ ಹೇಳುವುದು ಉತ್ತಮ ಎಂದು ಅಂದುಕೊಂಡು ಅನೇಕರು ಶುಭ ಸುದ್ದಿಯನ್ನು ನೀಡುತ್ತಾರೆ. ಈ ಸಾಲಿಗೆ ಈಗ ಹೆಮ್ಮೆಯ ಕನ್ನಡಿಗ ಮತ್ತು ಕ್ರಿಕೆಟ್ ಪ್ಲೇಯರ್ ಕೆ.ಎಲ್.ರಾಹುಲ್ ಮತ್ತು ಅಥಿಯಾ ಶೆಟ್ಟಿ ಸೇರಿಕೊಂಡಿದ್ದಾರೆ.

Actress Athiya Shetty and cricketer KL Rahul have announced their pregnancy on social media

ಈ ಕುರಿತು ಅಥಿಯಾ ಮತ್ತು ಕೆ.ಎಲ್ ರಾಹುಲ್ ''ನಮ್ಮ ಸುಂದರ ಆಶೀರ್ವಾದ ಶೀಘ್ರದಲ್ಲಿಯೇ ಬರಲಿದೆ'' ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಸದ್ಯಕ್ಕೆ ಕೆ.ಎಲ್.ರಾಹುಲ್ ಮತ್ತು ಅಥಿಯಾ ಶೆಟ್ಟಿಗೆ ನಾಗಚೈತನ್ಯ ಭಾವಿ ಪತ್ನಿ ಶೋಭಿತಾ ಧುಲಿಪಲ, ಪೂಜಾ ಹೆಗ್ಡೆ, ಸೇರಿ ಚಿತ್ರರಂಗದ ಅನೇಕ ತಾರೆಯರು ಮತ್ತು ಕ್ರಿಕೆಟ್ ಆಟಗಾರರು ಶುಭಾಶಯವನ್ನು ಕೋರುತ್ತಿದ್ದಾರೆ.

ಇನ್ನೂ ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ವಿಫಲರಾಗಿದ್ದ ಕೆ.ಎಲ್.ರಾಹುಲ್ ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು ಭಾರತ ಎ ತಂಡದ ಪರ ಕಣಕ್ಕಿಳಿದಿದ್ದಾರೆ. ಇನ್ನೂ ವಿಶೇಷ ಅಂದರೆ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳುವ ಮುನ್ನ ಕೆ.ಎಲ್. ರಾಹುಲ್, ಅಥಿಯಾ ಶೆಟ್ಟಿ ಅವರನ್ನು ಮದುವೆಯಾಗಿದ್ದರು. ಈಗ ಕಾಕತಾಳಿಯ ಎಂಬಂತೆ ಕೆ.ಎಲ್.ರಾಹುಲ್ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾಗಲೇ ತಂದೆಯಾಗುತ್ತಿದ್ದಾರೆ. ಇನ್ನೂ ಐಪಿಎಲ್‌ನಲ್ಲಿ ಲಕ್ನೋ ತಂಡದಿಂದ ಹೊರ ಬಂದಿರುವ ಕೆ.ಎಲ್.ರಾಹುಲ್ ಆರ್.ಸಿ.ಬಿ ತಂಡವನ್ನು ಸೇರಿಕೊಳ್ಳುವ ನಿರೀಕ್ಷೆ ಇದೆ.

ಇನ್ನುಳಿದಂತೆ ತಮ್ಮ ತಂದೆ ಸುನಿಲ್ ಶೆಟ್ಟಿ ಅವರ ಪ್ರಭಾವಳಿಯಿಂದ ಚಿತ್ರರಂಗವನ್ನು ಸಲೀಸಾಗಿ ಪ್ರವೇಶಿಸಿದ ಅಥಿಯಾ ಶೆಟ್ಟಿಗೆ ಗೆಲುವು ಸಿಗಲಿಲ್ಲ. ಮಾಡಿದ ಮೂರು ಮತ್ತೊಂದು ಚಿತ್ರಗಳಲ್ಲಿ ಯಾವ ಚಿತ್ರ ಕೂಡ ಹೆಸರು ತಂದು ಕೊಡಲಿಲ್ಲ. ಆದರೂ ಮಾಡೆಲಿಂಗ್ ಕ್ಷೇತ್ರದಲ್ಲಿ ಅಥಿಯಾಗೆ ಬೇಡಿಕೆ ಇದೆ. ಜಾಹೀರಾತು ಕ್ಷೇತ್ರದಲ್ಲಿ ಅಥಿಯಾ ಅವರಿಗೆ ಉತ್ತಮವಾದ ಬೆಲೆಯೂ ಇದೆ.

ಅಂದ್ಹಾಗೇ ಕೆ.ಎಲ್. ರಾಹುಲ್ ಮತ್ತು ಅಥಿಯಾ ಶೆಟ್ಟಿ ಅವರದ್ದು ಪ್ರೇಮ ವಿವಾಹ. 2019ರಲ್ಲಿ ಸ್ನೇಹಿತನ ಮುಖಾಂತರ ಪರಿಚಯವಾದ ಇಬ್ಬರ ನಡುವೆ ಮೊದಲ ನೋಟದಲ್ಲಿಯೇ ಪ್ರೇಮಾಂಕುರವಾಗಿತ್ತು. ಆದರೂ ತಮ್ಮ ಲವ್ ಸ್ಟೋರಿ ಕೆ.ಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ಜಗತ್ತಿಗೆ ಗೊತ್ತಾಗದಂತೆ ಜತನದಿಂದ ಕಾಪಿಟ್ಟುಕೊಂಡಿದ್ದರು. 2019ರಲ್ಲಿಯೇ ಥೈಲ್ಯಾಂಡ್‌ನಲ್ಲಿ ಜೊತೆಯಾಗಿ ಹೊಸ ವರ್ಷವನ್ನು ಬರ ಮಾಡಿಕೊಂಡಿದ್ದರು. ಈ ಸಂದರ್ಭದಲ್ಲಿ ಅನೇಕರು ಇಬ್ಬರ ಸಂಬಂಧದ ಕುರಿತು ಅನುಮಾನ ವ್ಯಕ್ತಪಡಿಸಿದ್ದರು.

ಆದರೂ ತಮ್ಮ ಸಂಬಂಧದ ಕುರಿತು ಮೌನ ವಹಿಸಿಕೊಂಡು ಬಂದ ಕೆ.ಎಲ್.ರಾಹುಲ್ ಎರಡು ವರ್ಷದ ನಂತರ ಅಂದರೆ 2021ರಲ್ಲಿ ಅಥಿಯಾ ಶೆಟ್ಟಿ ಹುಟ್ಟುಹಬ್ಬದಂದು ಶುಭಾಶಯವನ್ನು ಕೋರಿದರು. ಇಲ್ಲಿಂದಾಚೆ ಬಹಿರಂಗವಾಗಿ ಅನೇಕ ಬಾರಿ ಕಾಣಿಸಿಕೊಂಡ ಇಬ್ಬರು 2023ರ ಜನವರಿ 23ರಂದು ಅಥಿಯಾ ಶೆಟ್ಟಿ ತಂದೆ ಮತ್ತು ಬಾಲಿವುಡ್ ನ ಹಿರಿಯ ನಟ ಸುನಿಲ್ ಶೆಟ್ಟಿ ಒಡೆತನದ ಖಾಂಡಾಲಾ ಫಾರ್ಮ್‌ಹೌಸ್‌ನಲ್ಲಿ ಮದುವೆಯಾದರು. ಕೇವಲ ನೂರೇ ನೂರು ಅತಿಥಿಗಳ ಸಮ್ಮುಖದಲ್ಲಿ ಸಪ್ತಪದಿಯನ್ನು ತುಳಿದಿದ್ದರು.

ಇನ್ನೂ 2023ರಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅಥಿಯಾ ಶೆಟ್ಟಿ, ನನಗಿಂತ ಕೆ.ಎಲ್.ರಾಹುಲ್ ಚೆನ್ನಾಗಿ ಮಾತನಾಡುತ್ತಾರೆ. ನಮ್ಮಿಬ್ಬರದ್ದು ವಿಭಿನ್ನ ವ್ಯಕ್ತಿತ್ವ, ನಾನು ಮಾತನಾಡದೇ ಇದ್ದರೂ ನನ್ನ ಕಷ್ಟ ರಾಹುಲ್‌ಗೆ ಅರ್ಥವಾಗುತ್ತೆ ಎಂದು ಹೇಳಿದ್ದರು. ರಾಹುಲ್ ಅವರಲ್ಲಿನ ಈ ಗುಣ ನನಗೆ ತುಂಬಾ ಇಷ್ಟವಾಯಿತು ಎಂದು ಹೇಳಿದ್ದರು. ಅವರ ಮೇಲೆ ಪ್ರೀತಿ ಉಕ್ಕಿ ಹರಿಯಲು ಇದೇ ಕಾರಣ ಎಂದು ಕೂಡ ಅಥಿಯಾ ಶೆಟ್ಟಿ ಹೇಳಿದ್ದರು.

More from Filmibeat

Read more about: kl rahul actress bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X