ಬನಿತಾ ಸಂಧುಗೆ ಕೊರೊನಾ ಪಾಸಿಟಿವ್, ಯುಕೆಯಿಂದ ಬಂದಿದ್ದ ನಟಿ?
ಬಾಲಿವುಡ್‌ನಲ್ಲಿ ನೆಲೆ ಕಂಡು ಕಂಡಿರುವ ಬ್ರಿಟಿಷ್ ಮೂಲದ ನಟಿ ಬನಿತಾ ಸಂಧುಗೆ ಕೊರೊನಾ ವೈರಸ್ ತಗುಲಿದೆ. ಪ್ರಸ್ತುತ ಕೊಲ್ಕತ್ತಾದಲ್ಲಿ 'ಕವಿತಾ ಮತ್ತು ತೇರೆಸಾ' ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದ ನಟಿಗೆ ಕೊವಿಡ್ ಸೋಂಕು ತಗುಲಿರುವುದು ಸೋಮವಾರ ಖಚಿತವಾಗಿದೆ.
ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿರಾಕರಿಸಿದ ಬಳಿಕ ನಟಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಬನಿತಾ ಸಂಧು ಅವರು ಡಿಸೆಂಬರ್ 20 ರಂದು ಯುನೈಟೆಡ್ ಕಿಂಗ್‍ಡಮ್‌ನಿಂದ ಭಾರತಕ್ಕೆ ಬಂದಿದ್ದರು ಎಂದು ತಿಳಿದು ಬಂದಿದೆ. ಅಂದು ಬನಿತಾ ಸಂಧು ಪ್ರಯಾಣ ಮಾಡಿದ ವಿಮಾನದಲ್ಲಿದ್ದ ಸಹ ಪ್ರಯಾಣಿಕನಿಗೆ ರೂಪಾಂತರಿ ಕೊರೊನಾ ವೈರಸ್ ತಗುಲಿದೆ. ಈ ಹಿನ್ನೆಲೆ ನಟಿಯ ಮೇಲೆ ಹೆಚ್ಚಿನ ನಿಘಾ ವಹಿಸಲಾಗಿದೆ.

ಹೊಸ ತಳಿಯ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಬೆಲಿಯಾಘಾಟಾ ಆಸ್ಪತ್ರೆಯಲ್ಲಿ ವಿಶೇಷ ಕೊಠಡಿ ವ್ಯವಸ್ಥೆ ಮಾಡಿ, ರೂಪಾಂತರಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಆಸ್ಪತ್ರೆಗೆ ನಟಿ ಬನಿತಾ ಸಂಧು ಅವರನ್ನು ದಾಖಲಿಸಲಾಗಿದೆ.
ಅದಕ್ಕೂ ಮುಂಚೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ನಟಿ ನಿರಾಕರಿಸಿದ್ದರು. ಆಸ್ಪತ್ರೆಯಲ್ಲಿ ಸರಿಯಾದ ಮೂಲಸೌಕರ್ಯಗಳಿಲ್ಲ ಎಂದು ಆರೋಪಿಸಿ 23 ವರ್ಷದ ಬನಿತಾ ಆಂಬುಲೆನ್ಸ್‌ನಿಂದ ಹೊರಬರಲು ನಿರಾಕರಿಸಿದರು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಸದ್ಯಕ್ಕೆ ನಟಿ ಬನಿತಾ ಸಂಧುಗೆ ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿದೆ. ಆದರೆ, ಅದು ಹೊಸ ತಳಿಯ ರೂಪವೇ ಅಥವಾ ಸಾಮಾನ್ಯ ಸೋಂಕು ಎನ್ನುವುದು ಅಧ್ಯಯನದ ಬಳಿಕವೇ ಖಚಿತಪಡಿಸಬೇಕಿದೆ.
ಬನಿತಾ ಸಂಧು ಚಿತ್ರಗಳು
2018ರಲ್ಲಿ 'ಅಕ್ಟೋಬರ್' ಚಿತ್ರದ ಮೂಲಕ ಬಾಲಿವುಡ್ ಇಂಡಸ್ಟ್ರಿ ಪ್ರವೇಶಿಸಿದ ನಟಿ ನಂತರ ತಮಿಳಿನಲ್ಲಿ 'ಆದಿತ್ಯ ವರ್ಮ' (ಅರ್ಜುನ್ ರೆಡ್ಡಿ ರೀಮೇಕ್) ಸಿನಿಮಾ ನಟಿಸಿದರು. ಸದ್ಯ 'ಸರ್ದಾರ್ ಉದಮ್ ಸಿಂಗ್' ಹಾಗೂ ಇಂಗ್ಲೀಷ್‌ನ 'ಕವಿತಾ ಮತ್ತು ತೇರೆಸಾ' ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.


Click it and Unblock the Notifications











