ಬೆಂಗಳೂರಿನ ಈ ಸ್ಥಳದಲ್ಲಿ ಸಿಗುವ ಊಟ ಈ ಬಾಲಿವುಡ್‌ ನಾಯಕಿಗೆ ಪಂಚಪ್ರಾಣ, ಬಾಯಿ ಚಪ್ಪರಿಸಿ ಹೇಳಿದ್ದೇನು ನಟಿ..?

ಸಾಮಾನ್ಯವಾಗಿ ಚಿತ್ರರಂಗದಲ್ಲಿ ಬದುಕು ಕಟ್ಟಿಕೊಂಡ ಅನೇಕರಿಗೆ ಜನ ಸಾಮಾನ್ಯರಂತೆ ಓಡಾಡಬೇಕು, ಎಲ್ಲರ ನಡುವೆ ಕುಳಿತು ಊಟ ಮಾಡಬೇಕೆನ್ನುವ ಆಸೆ ಇರುತ್ತೆ. ಆದರೆ, ಅವರಿಗೆ ತಮಗೆ ಇಷ್ಟದ ಖಾದ್ಯಗಳನ್ನು ತಿನ್ನುವ ಸಮಯವೂ ಇರುವುದಿಲ್ಲ. ಇನ್ನೂ ಕೆಲವೊಮ್ಮೆ ಅವರ ತಾರಾ ವರ್ಚಸ್ಸು ಅಡ್ಡಗಾಲು ಹಾಕುತ್ತೆ.

ಇನ್ನೂ ಅವರಿಗೂ ತಮ್ಮದೇ ಆದ ಫುಡ್‌ ಟೇಸ್ಟ್‌ಗಳಿವೆ. ತುಂಬಾ ಇಷ್ಟಪಡುವ ಆಹಾರಗಳಿವೆ. ಅಂಥ ಆಹಾರಗಳನ್ನು ಅವರು ಕೆಲವು ನಿರ್ದಿಷ್ಟ ರೆಸ್ಟೋರೆಂಟ್‌ಗಳಲ್ಲಿಯೇ ಸವಿಯಲು ಇಷ್ಟಪಡುತ್ತಾರೆ. ಹೀಗಾಗಿಯೇ ಕೆಲವೊಮ್ಮೆ ಕೆಲವರು ಮಾರು ವೇಷದಲ್ಲಿ ತಮಗೆ ಇಷ್ಟವಾದ ಜಾಗಕ್ಕೆ ಹೋಗಿ ಬರುತ್ತಾರೆ. ಇನ್ನೂ ಕೆಲವರು ತಮ್ಮನ್ನು ಹೆಚ್ಚು ಗುರುತು ಹಿಡಿಯದ ಊರು ಕೇರಿಗೆ ತೆರಳಿ ಓಡಾಡಿಕೊಂಡು ಬರುತ್ತಾರೆ. ಅಲ್ಲಿ ತಮಗೆ ಇಷ್ಟವಾದ ಹೋಟೆಲ್‌ಗೆ ತೆರಳಿ ಊಟವನ್ನು ಮಾಡಿಕೊಂಡು ಬರುತ್ತಾರೆ. ಆ ಊಟದ ರುಚಿಗೆ ಮನಸೋತು ಮೇಲಿಂದ ಮೇಲೆ ಆ ಸ್ಥಳಕ್ಕೆ ಹೋಗಬೇಕೆಂದುಕೊಳ್ಳುತ್ತಾರೆ. ಇದಕ್ಕೆ ಬಾಲಿವುಡ್ ನಟಿ ಭೂಮಿ ಪೆಡ್ನೇಕರ್ ಸದ್ಯದ ಉದಾಹರಣೆ.

Actress Bhumi Pednekar is all praise for this famous restaurant in Bengaluru

ಹೌದು, ಭೂಮಿ ಪೆಡ್ನೇಕರ್.. ಒಂದ್ಕಾಲದ ಗಜಗಾಮಿನಿ. ಧಮ್ ಲಗಾಕೇ ಐಸಾ ಚಿತ್ರದ ಮೂಲಕ ಚಿತ್ರರಂಗವನ್ನ ಪ್ರವೇಶಿಸಿದ ಭೂಮಿ, ಆ ನಂತರ ಟಾಯ್ಲೆಟ್ - ಏಕ್ ಪ್ರೇಮ್ ಕತಾ ಚಿತ್ರ ಬಂದಾಗ ಬಳುಕುವ ಬಳ್ಳಿಯಂತೆ ಆಗಿದ್ದರು. ಭೂಮಿಯಲ್ಲಾದ ಈ ಬದಲಾವಣೆಯನ್ನ ಕಂಡು, ಆ ಕಾಲಕ್ಕೆ.. ಅನೇಕರು ನಿಬ್ಬೇರಗಾಗಿದ್ದರು.

ಇಂಥಾ ಭೂಮಿ ಪೆಡ್ನೇಕರ್ ಬೆಂಗಳೂರಿನ ಹೊಟೇಲ್‌ಗೆ ಮನಸೋತಿದ್ದಾರೆ. ನಾನು ಬೆಂಗಳೂರಿಗೆ ಹೋದರೆ ಈ ಊಟವನ್ನೇ ಮಾಡುತ್ತೇನೆ ಎಂದಿದ್ದಾರೆ. ಬೆಂಗಳೂರಿನಲ್ಲಿ ತಮ್ಮ ಇಷ್ಟದ ಹೊಟೇಲ್‌ನಲ್ಲಿ ನೆಮ್ಮದಿಯಾಗಿ ಊಟ ಮಾಡುತ್ತಿರುವ ಫೋಟೊ ಮತ್ತು ವಿಡಿಯೋ ಹಂಚಿಕೊಂಡಿದ್ದಾರೆ. ಹೀಗೆ ಭೂಮಿಯ ಹೃದಯ ಗೆದ್ದ ಈ ಹೋಟೆಲ್ ಯಾವುದೇ ಪಂಚತಾರಾ ಹೋಟೆಲ್ ಅಲ್ಲ ಬದಲಿಗೆ ಬೆಂಗಳೂರಿನ ಸುಪ್ರಸಿದ್ದ ನಾಗಾರ್ಜುನ ರೆಸ್ಟೋರೆಂಟ್ ಎನ್ನುವುದು ವಿಶೇಷ.

ಹೌದು, 1984ರಲ್ಲಿ ಎನ್.ಕೃಷ್ಣಾ ರೆಡ್ಡಿ ಸಾರಥ್ಯದಲ್ಲಿ ಶುರುವಾದ ನಾಗಾರ್ಜುನ ರೆಸ್ಟೋರೆಂಟ್ ಇಂದು ಬೆಂಗಳೂರಿನಲ್ಲಿ ಹಲವಡೆ ಇದೆ. ಆಂಧ್ರ ಶೈಲಿಯ ಊಟಕ್ಕೆ ಹೆಸರುವಾಸಿಯಾದ ಈ ರೆಸ್ಟೋರೆಂಟ್‌ನಲ್ಲಿ ವೆಜ್ ಮತ್ತು ನಾನ್ ವೆಜ್‌ ಊಟವನ್ನು ಇಷ್ಟಪಡುವವರು ಅನೇಕರಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಸಾಂಪ್ರದಾಯಿಕ ಶೈಲಿಯ ಬಾಳೆ ಎಲೆ ಊಟಕ್ಕೆ ಬೆಂಗಳೂರಿನ ಅನೇಕ ಬ್ರ್ಯಾಂಚ್‌ಗಳಲ್ಲಿ ಸದಾ ಕಾಲ ಜನಸಂದಣಿ ಇದ್ದೇ ಇರುತ್ತೆ. ಇಂತಹ ನಾಗಾರ್ಜುನ್‌ ರೆಸ್ಟೋರೆಂಟ್‌ನಲ್ಲಿನ ಭೋಜನ ಅಂದರೆ ಭೂಮಿ ಪೆಡ್ನೇಕರ್‌ಗೆ ಪಂಚ ಪ್ರಾಣ.

ಖುದ್ದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಮಾತುಗಳನ್ನು ಹೇಳಿರುವ ಭೂಮಿ ಪೆಡ್ನೇಕರ್ ಬಾಳೆ ಎಲೆಯಲ್ಲಿ ನಾಗಾರ್ಜುನ ರೆಸ್ಟೋರೆಂಟ್‌ನಲ್ಲಿನ ದಾಲ್, ಸಬ್ಜಿ, ಚಟ್ನಿ, ಸಾಂಬಾರ್, ಮಜ್ಜಿಗೆ, ಅನ್ನವನ್ನು ಸವಿದು ಬಾಯಿ ಚಪ್ಪರಿಸಿದ್ದಾರೆ. ಇದಕ್ಕಿಂತ ಅತ್ಯುತ್ತಮವಾದ ಊಟ ಇನ್ನೇಲ್ಲಿದೆ ಎಂದಿದ್ದಾರೆ.

Actress Bhumi Pednekar is all praise for this famous restaurant in Bengaluru

ಇನ್ನುಳಿದಂತೆ ಬೆಂಗಳೂರಿನ ನಾಗಾರ್ಜುನ್ ರೆಸ್ಟೋರೆಂಟ್‌ನಲ್ಲಿ ಎಲ್ಲರ ನಡುವೆ ಕುಳಿತು ಭೂಮಿ ಪಡ್ನೇಕರ್ ಊಟ ಮಾಡಿದರೂ ಕೂಡ ಯಾರೆಂದರೆ ಯಾರು ಕೂಡ ಭೂಮಿ ಅವರನ್ನು ಗುರುತು ಹಿಡಿದಿಲ್ಲ. ಮೇಡಂ ಒಂದು ಸೆಲ್ಫೀ ಎಂದು ಕೇಳಿಲ್ಲ ಎನ್ನುವುದು ವಿಶೇಷ. ಮಿಕ್ಕಂತೆ ಭೂಮಿ ಪೆಡ್ನೇಕರ್ ಗೆ ಈಗ 34ರ ಹರೆಯ. ಬಾಲಿವುಡ್‌ಗೆ ಬಂದು 09 ವರ್ಷಗಳಾಗಿವೆ. ಈ 09 ವರ್ಷದಲ್ಲಿ ಭೂಮಿ ಪೆಡ್ನೇಕರ್ ಖಾಲಿ ಕುಳಿತ ಉದಾಹರಣೆ ಇಲ್ಲ. ಅದರಲ್ಲಿಯೂ 2019ರ ನಂತರ ವರ್ಷಕ್ಕೆ ಮೂರು ನಾಲ್ಕು ಸಿನಿಮಾಗಳನ್ನ ಮಾಡುತ್ತಾ ಬಂದವರು ಭೂಮಿ ಪೆಡ್ನೇಕರ್. ಇಂಥಾ ಭೂಮಿ ಪೆಡ್ನೇಕರ್ ಸದ್ಯ ವೆಬ್ ಸರಣಿಗಳತ್ತ ಹೆಚ್ಚೆಚ್ಚು ಗಮನ ವಹಿಸುತ್ತಿದ್ದಾರೆ. ಆ ಪೈಕಿ ಭೂಮಿ ಅಭಿನಯದ ದಿ ರಾಯಲ್ಸ್ ಚಿತ್ರ ಶೀಘ್ರದಲ್ಲಿಯೇ ನೆಟ್‌ಪ್ಲಿಕ್ಸ್‌ನಲ್ಲಿ ಪ್ರಸಾರವಾಗಲಿದೆ.

More from Filmibeat

Read more about: food actress bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X