ಸಹಾಯಕನ ಕೈಯಲ್ಲಿ ಶೂ ತೆಗೆಸಿಕೊಂಡ ಬಾಲಿವುಡ್ ನಟಿ: ನೆಟ್ಟಿಗರಿಂದ ತರಾಟೆ
ಬಾಲಿವುಡ್ ಸೆಲೆಬ್ರೆಟಿಗಳು ಸದಾ ಒಂದಿಲ್ಲೊಂದು ವಿವಾದದಲ್ಲಿ ಸಿಲುಕಿಕೊಳ್ಳುತ್ತಿರುತ್ತಾರೆ. ಈವರೆಗೆ ವಿವಾದಗಳಿಂದ ದೂರವೇ ಉಳಿದಿದ್ದ ನಟಿ ಭೂಮಿ ಪಡ್ನೇಕರ್ ಕೂಡ ಇತ್ತೀಚೆಗೆ ಎಡವಟ್ಟು ಮಾಡಿಕೊಂಡಿದ್ದಾಳೆ. ತಾನಾಯ್ತು ತನ್ನ ಸಿನಿಮಾ ಆಯ್ತು ಎಂದು ಭೂಮಿ ಫಡ್ನೇಕರ್ ಇರ್ತಾಳೆ. ಅಭಿನಯಕ್ಕೆ ಅವಕಾಶ ಇರುವ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಮನ ಗೆಲ್ಲುತ್ತಿದ್ದಾಳೆ. ತನ್ನದೇ ಬೇರೆ ಇಮೇಜ್ ಸೃಷ್ಟಿಸಿಕೊಂಡಿದ್ದಾಳೆ.
ಇತ್ತೀಚೆಗೆ ಕಾರ್ಯಕ್ರಮವೊಂದಕ್ಕೆ ಹಾಜರಾಗಿದ್ದ ನಟಿ ಭೂಮಿ ಪಡ್ನೇಕರ್ ವಿವಾದದಲ್ಲಿ ಸಿಲುಕಿಕೊಂಡಿದ್ದಾಳೆ. ಜ್ಯೋತಿ ಬೆಳಗಲು ನಟಿ ಭೂಮಿ ಶೂ ಬಿಟ್ಟು ವೇದಿಕೆ ಏರಲು ಪ್ರಯತ್ನಿಸಿದ್ದಾಳೆ. ಆದರೆ ಈ ವೇಳೆ ಅಷ್ಟು ಸುಲಭವಾಗಿ ಶೂ ತೆಗೆಯಲು ಸಾಧ್ಯವಾಗಲಿಲ್ಲ. ಕೂಡಲೇ ಆಕೆ ತನ್ನ ಸಹಾಯಕನನ್ನು ಕರೆದಿದ್ದಾಳೆ. ಆತ ಅಲ್ಲಿಗೆ ಬಂದು ಚಪ್ಪಲಿ ತೆಗೆಯಲು ಸಹಾಯ ಮಾಡಿದ್ದಾನೆ. ನಂತರ ಆಕೆ ವೇದಿಕೆ ಮೇಲೆ ಏರಿದ್ದಾಳೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ನೆಟ್ಟಿಗರು ಇದಕ್ಕೆ ಟೀಕೆ ಮಾಡುತ್ತಿದ್ದಾರೆ.

ಸಹಾಯಕನ ಕೈಯಲ್ಲಿ ಚಪ್ಪಲಿ ತೆಗೆಸುತ್ತೀಯಾ ಎಂದು ನೆಟ್ಟಿಗರು ಗರಂ ಆಗಿದ್ದಾರೆ. ಇದೇ ಕಾರಣಕ್ಕೆ ನಟಿ ಭೂಮಿ ಪಡ್ನೇಕರ್‌ನ ಟ್ರೋಲ್ ಮಾಡುತ್ತಿದ್ದಾರೆ. 'ಧಮ್ ಲಗಾ ಕೆ ಹೈಸಾ' ಸಿನಿಮಾ ಮೂಲಕ ಬಾಲಿವುಡ್ ಪ್ರವೇಶಿಸಿದ ನಟಿ ಭೂಮಿ ಪಡ್ನೇಕರ್‌ಗೆ 'ಟಾಯ್ಲೆಟ್': ಏಕ್ ಪ್ರೇಮ್ ಕಥಾ ಸಿನಿಮಾ ಬ್ರೇಕ್ ಕೊಟ್ಟಿತ್ತು. ಮುಂದೆ 'ಲಸ್ಟ್ ಸ್ಟೋರಿಸ್', 'ಭೂತ್', 'ದುರ್ಗಮತಿ', 'ರಕ್ಷಾ ಬಂಧನ್' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾಳೆ. ಮಹೇಶ್ ಬಾಬು ನಟನೆಯ ಮುಂದಿನ ಚಿತ್ರದಲ್ಲೂ ಭೂಮಿ ನಟಿಸ್ತಾಳೆ ಎನ್ನಲಾಗ್ತಿದೆ.

'ಭಕ್ಷಕ್', 'ದಿ ಲೇಡಿ ಕಿಲ್ಲರ್', 'ಮೇರಿ ಪತ್ನಿ ಕಾ ರೀಮೆಕ್' ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಭೂಮಿ ಪಡ್ನೇಕರ್ ಬಣ್ಣ ಹಚ್ಚಿದ್ದಾಳೆ. ಇನ್ನು ಸೋಶಿಯಲ್ ಮೀಡಿಯಾದಲ್ಲೂ ಆಕ್ಟೀವ್ ಆಗಿರುವ ಬೆಡಗಿ ಹಾಟ್ ಹಾಟ್ ಫೋಟೊಶೂಟ್‌ಗಳಿಂದ ಸದ್ದು ಮಾಡುತ್ತಿರುತ್ತಾಳೆ. ಮುಂಬೈನಲ್ಲಿ ಹುಟ್ಟಿ ಬೆಳೆದ ಭೂಮಿ ಆರಂಭದಲ್ಲಿ ಯಶ್ ರಾಜ್ ಫಿಲ್ಮ್ಸ್ ಸಂಸ್ಥೆಯಲ್ಲಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಳು. ಅದೇ ಸಂಸ್ಥೆಯ 'ಧಮ್ ಲಗಾ ಕೆ ಹೈಸಾ' ಚಿತ್ರದಲ್ಲಿ ಮೊದಲು ನಟಿಸಲು ಆರಂಭಿಸಿದಳು.


Click it and Unblock the Notifications











