»   » ಹಾಟ್ ಅಂಡ್ ಸೆಕ್ಸಿ ಅವತಾರದಲ್ಲಿ ತಾರೆ ಬಿಪಾಶಾ ಬಸು

ಹಾಟ್ ಅಂಡ್ ಸೆಕ್ಸಿ ಅವತಾರದಲ್ಲಿ ತಾರೆ ಬಿಪಾಶಾ ಬಸು

Posted By: ರವಿಕಿಶೋರ್
Subscribe to Filmibeat Kannada

  ಬಾಲಿವುಡ್ ಬ್ಯೂಟಿ ಬಿಪಾಶಾ ಬಸು ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಬಾಲಿವುಡ್ ನ ಹಾಟ್ ಅಂಡ್ ಸೆಕ್ಸಿ ಸುಂದರಿಯರಲ್ಲಿ ತನ್ನದೇ ಆದಂತಹ ಛಾಪು ಒತ್ತಿದ ಘನತೆ ಈ ಚೆಲುವೆಯದು. ಗ್ಲಾಮರ್ ಪಾತ್ರಗಳಲ್ಲಿ ಮಿಂಚುತ್ತಿರುವ ಬೆಡಗಿ.

  ಚಿತ್ರೋದ್ಯಮಕ್ಕೆ ಅಡಿಯಿಟ್ಟು ಸರಿಸುಮಾರು 12 ವರ್ಷಗಳಾಗಿವೆಯಾದರೂ ತನ್ನ ಗ್ಲಾಮರ್ ಪಾತ್ರಗಳಿಂದ ಇಂದಿಗೂ ಗಮನಸೆಳೆಯುತ್ತಿರುವ ತಾರೆ. ಬಿಕಿನಿಯಿಂದ ಹಿಡಿದು ಚುಂಬನ ದೃಶ್ಯಗಳವರೆಗೂ ಲೀಲಾಜಾಲ ಅಭಿನಯ ನೀಡುತ್ತಾ ಕಾಡಿಬೇಡುವ ಸ್ಟೈಲಿಶ್ ಸುಂದರಿ.

  ಶೀಘ್ರದಲ್ಲೇ 'ಅಲೋನ್' ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ ಬಿಪಾಶಾ. ಸೆಕ್ಸ್ ಹಾಗೂ ಹಾರರ್ ಮಿಳಿತ ಅಂಶಗಳ ಆಧಾರವಾಗಿ ಈ ಚಿತ್ರವನ್ನು ತೆರೆಗೆ ತರಲಾಗಿದೆ. ತನ್ನ ವೃತ್ತಿ ಬದುಕಿನಲ್ಲಿ ಅತ್ಯಂತ ಶೃಂಗಾರಭರಿತವಾಗಿ, ಬೋಲ್ಡ್ ಆಗಿ ಅಭಿನಯಿಸಿದ ಚಿತ್ರ ಇದು ಎಂದು ಸ್ವತಃ ಬಿಪಾಶಾ ಬಸು ಹೇಳಿರುವುದು ಚಿತ್ರದ ಬಗೆಗಿನ ಕುತೂಹಲವನ್ನು ಇಮ್ಮಡಿಸುವಂತೆ ಮಾಡಿದೆ.

  ಶೃಂಗಾರ ಹಾಗೂ ಭಯಾನಕ ರಸಗಳ ಸಂಗಮ

  ಭೂಷಣ್ ಪಟೇಲ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದಾಗಿದೆ. ಬಿಪಾಶಾ ಜೊತೆಗೆ ಕರಣ್ ಸಿಂಗ್ ಗ್ರೋವರ್ ಈ ಬಾರಿ ತೆರೆ ಹಂಚಿಕೊಂಡಿದ್ದಾರೆ. ಜಾಕೀರ್ ಹುಸೇನ್ ಸಹ ಚಿತ್ರದಲ್ಲಿ ಪ್ರಮುಖ ಪಾತ್ರ ಪೋಷಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಸ್ಟಿಲ್ಸ್ ನೋಡಿದರೆ ಶೃಂಗಾರ ಹಾಗೂ ಭಯಾನಕ ರಸಗಳ ಸಂಗಮ ಈ ಚಿತ್ರ ಎಂಬುದು ಭಾಸವಾಗುತ್ತದೆ.

  ಎಲ್ಲರ ಗಮನಸೆಳೆಯುತ್ತಿರುವ ಹಾಟ್ ಸನ್ನಿವೇಶಗಳು

  ಬಿಪಾಶಾ ಬಸು ಹಾಗೂ ಕರಣ್ ಸಿಂಗ್ ಗ್ರೋವರ್ ನಡುವಿನ ಹಾಟ್ ಹಾಟ್ ಸನ್ನಿವೇಶಗಳು ಚಿತ್ರದಲ್ಲಿ ಎಲ್ಲರ ಗಮನಸೆಳೆಯುತ್ತಿವೆ. ಹಿಂದಿ ಧಾರಾವಾಹಿಗಳಲ್ಲಿ ಅಭಿನಯಿಸಿರುವ ಕರಣ್ ಸಿಂಗ್ ಗ್ರೋವರ್ ಅವರು 'ಅಲೋನ್' ಚಿತ್ರದ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಹೀರೋ ಆಗಿ ಪರಿಚಯವಾಗುತ್ತಿದ್ದಾರೆ.

  ರಾಗಿಣಿ ಎಂಎಂಎಸ್ 2 ಖ್ಯಾತಿಯ ನಿರ್ದೇಶಕ

  ಈ ಹಿಂದೆ ನಿರ್ದೇಶಕ ಭೂಷಣ್ ಪಟೇಲ್ ಅವರು '1920: ಈವಿಲ್ ರಿಟರ್ನ್ಸ್', 'ರಾಗಿಣಿ ಎಂಎಂಎಸ್ 2' ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದವರು. ಆ ಚಿತ್ರಗಳ ಮೂಲಕ ಯಶಸ್ಸಿನ ರುಚಿ ನೋಡಿದ್ದಾರೆ.

  ರೊಮ್ಯಾಂಟಿಕ್ ಹಾಡುಗಳು ಇನ್ನೊಂದು ಆಕರ್ಷಣೆ

  ಈ ಚಿತ್ರದಲ್ಲಿ ಶೃಂಗಾರಭರಿತ ಸನ್ನಿವೇಶಗಳ ಜೊತೆಗೆ ಹಾರರ್ ಸೀನ್ ಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದೆ. ಸಮುದ್ರ ತೀರದಲ್ಲಿ ಚಿತ್ರೀಕರಿಸಿರುವ ರೊಮ್ಯಾಂಟಿಕ್ ಹಾಡುಗಳು ಪ್ರೇಕ್ಷಕರನ್ನು ಆಕರ್ಷಿಸುವುದರಲ್ಲಿ ಎರಡು ಮಾತಿಲ್ಲ.

  ಜನವರಿ 16, 2015ಕ್ಕೆ ತೆರೆಗೆ ಅಪ್ಪಳಿಸುತ್ತಿದೆ

  ಪನೋರಮಾ ಸ್ಟುಡಿಯೋ ನಿರ್ಮಾಣದ ಚಿತ್ರ ಇದಾಗಿದೆ. ಅಲೋನ್ ಚಿತ್ರ ಜನವರಿ 16, 2015ಕ್ಕೆ ತೆರೆಗೆ ಅಪ್ಪಳಿಸುತ್ತಿದೆ. ಈ ಚಿತ್ರಕ್ಕೆ ಸಂಬಂಧಿಸಿದ ಪೋಸ್ಟರ್ ಇತ್ತೀಚೆಗೆ ಬಿಡುಗಡೆ ಮಾಡಲಾಗಿದ್ದು, ಚಿತ್ರದಲ್ಲಿನ ಹಾಟ್ ಹಾಗೂ ಹಾರರ್ ದೃಶ್ಯಗಳು ಪ್ರಮುಖ ಆಕರ್ಷಣೆಯಾಗಿವೆ.

  ಭರ್ಜರಿ ಹಿಟ್ ನಿರೀಕ್ಷೆಯಲ್ಲಿ ಬಿಪಾಶಾ ಬಸು

  ಬಿಪಾಶಾ ಬಸು ಅವರು ಭಾರಿ ಹಿಟ್ ಚಿತ್ರ ಕೊಟ್ಟು ಬಹಳಷ್ಟು ಸಮಯವಾಗಿದೆ. ಈ ಚಿತ್ರದ ಮೂಲಕ ಭರ್ಜರಿ ಹಿಟ್ ನೀಡಿವ ನಿರೀಕ್ಷೆಯಲ್ಲಿದ್ದಾರೆ. ಇನ್ನು ಚಿತ್ರದ ನಾಯಕ ನಟ ಕರಣ್ ಸಿಂಗ್ ಗ್ರೋವರ್ ಅವರಿಗೆ ಇದು ಮೊದಲ ಚಿತ್ರವಾದ ಕಾರಣ ಅವರೂ ಅಷ್ಟೇ ಈ ಚಿತ್ರ ಬಗ್ಗೆ ಭಾರಿ ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ.

  English summary
  Actress Bipasha Basu may have done bold scenes in her previous releases, but she feels her forthcoming movie Alone is her boldest movie so far. In Alone, directed by Bhushan Patel, the Bengali beauty has shed all her inhibitions to shoot some passionate and steamy scenes with her co-star Karan Singh Grover.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more