»   » ದಾಂಪತ್ಯಕ್ಕೆ ಅಡಿಯಿಟ್ಟ 'ಬುದ್ಧಿವಂತ' ಬೆಡಗಿ ಬೃಂದಾ

ದಾಂಪತ್ಯಕ್ಕೆ ಅಡಿಯಿಟ್ಟ 'ಬುದ್ಧಿವಂತ' ಬೆಡಗಿ ಬೃಂದಾ

By: ಉದಯರವಿ
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಜೊತೆ 'ಬುದ್ಧಿವಂತ' ಚಿತ್ರದಲ್ಲಿ ಸೊಂಟ ಬಳುಕಿಸಿದ್ದ ಗುಜರಾತಿನ ಗುಲಾಬಿ ಕೆನ್ನೆ ಬೆಡಗಿ ಬೃಂದಾ ಪರೇಖ್ ಸದ್ದಿಲ್ಲದಂತೆ ಸಪ್ತಪದಿ ತುಳಿದಿದ್ದಾರೆ. ಫೆಬ್ರವರಿ 8ರಂದು ಮುಂಬೈನಲ್ಲಿ ಪಕ್ಕಾ ಹಿಂದೂ ಸಂಪ್ರದಾಯದಂತೆ ಈ ಮದುವೆ ನೆರವೇರಿತು. ಅಜಯ್ ಅವರ ಕೈಹಿಡಿಯುವ ಮೂಲಕ ಬೃಂದಾ ಹೊಸ ದಾಂಪತ್ಯ ಜೀವನಕ್ಕೆ ಅಡಿಯಿಟ್ಟರು.

ಸರಳ ಸುಂದರವಾಗಿ ನಡೆಯದಿರುವ ಈ ಮದುವೆಗೆ ಹಲವು ಬಾಲಿವುಡ್ ಗಣ್ಯರು ಆಗಮಿಸಿ ನೂತನ ದಂಪತಿಗಳಿಗೆ ಶುಭಕೋರಿದರು. ಅವರಲ್ಲಿ ಮುಖ್ಯವಾಗಿ ಗಾಯಕ ಹರಿಹರನ್, ನಟಿ ಪೂನಂ ಜಾವೇರ್ ವಧು ವರರಿಗೆ ಶುಭಾಶಯ ಕೋರಿದರು.

ಅಂದಹಾಗೆ ಬೃಂದಾ ಪಾರೇಖ್ ಕನ್ನಡದ ಕೆಲವು ಚಿತ್ರಗಳಲ್ಲಿ ಅತಿಥಿ ಪಾತ್ರಗಳನ್ನು ಪೋಷಿಸಿದ್ದಾರೆ. ನಮ್ಮಣ್ಣ, ಬುದ್ಧಿವಂತ, ತಿಪ್ಪಾರಳ್ಳಿ ತರ್ಲೆಗಳು ಹಾಗೂ ಸಂಜು ವೆಡ್ಸ್ ಗೀತಾ. ಈ ಎಲ್ಲಾ ಚಿತ್ರಗಳಲ್ಲಿ ಅವರದು ಅತಿಥಿ ಪಾತ್ರ. ಬನ್ನಿ ನೋಡೋಣ ಬೃಂದಾ ಅವರ ಮದುವೆ ಚಿತ್ರಗಳು...

ವಿಐಪಿ ಫ್ರೆಂಚಿ ಬೆಡಗಿ ಬೃಂದಾ ಪಾರೇಖ್ ಮದುವೆ

ಮುಂಬೈನಲ್ಲಿ ಹುಟ್ಟಿ ಬೆಳೆದ ಬೃಂದಾ ಪಾರೇಖ್ ತನ್ನ ವೃತ್ತಿಯನ್ನು ಆರಂಭಿಸಿದ್ದು ಮಾಡೆಲಿಂಗ್ ಮೂಲಕ. ಟಿವಿ ಜಾಹೀರಾತುಗಳಲ್ಲೂ ಸಾಕಷ್ಟು ಮಿಂಚಿದ ತಾರೆ. ವಿಮಲ್ ಸೂಟಿಂಗ್ಸ್, ಮೈಕ್ರೋಸಾಫ್ಟ್ ವಿಂಡೋಸ್ ಎಕ್ಸ್ ಪಿ, ಆಂಕರ್ ಸ್ವಿಚ್ ಗಳು, ವಿಐಪಿ ಫ್ರೆಂಚಿ, ಕಿಟ್ ಕ್ಯಾಟ್, ಥಂಪ್ಸ್ ಅಪ್, ಪೋಲೋ ಮಿಂಟ್, ರಾಯಲ್ ಚಾಲೆಂಜರ್ಸ್ ಬೀರ್, ಅಮೂಲ್ ಮ್ಯಾಕೋ ವೆಸ್ಟ್ಸ್ ಜಾಹೀರಾತುಗಳಲ್ಲಿ ಕಾಣಿಸಿಕೊಂಡರು.

ಅಭಿನಯಕ್ಕಿಂತ ಮೈಮಾಟಕ್ಕೇ ಸೀಮಿತವಾದ ತಾರೆ

ತಮಿಳು, ತೆಲುಗು ಹಾಗೂ ಹಿಂದಿ ಚಿತ್ರಗಳಲ್ಲಿ ತೊಡಗಿಕೊಂಡ ಬೃಂದಾ ಅಭಿನಯಕ್ಕಿಂತ ಹೆಚ್ಚಾಗಿ ಮೈಮಾಟ ಪ್ರದರ್ಶನಕ್ಕೇ ಸೀಮಿತರಾದರು. ಕಡೆಗೆ ನಟಿ ಎಂಬುದಕ್ಕಿಂತಲೂ ಹೆಚ್ಚಾಗಿ ಐಟಂ ಬೆಡಗಿ ಎಂದೇ ಗುರುತಿಸಿಕೊಂಡರು.

ಪೋಕ್ಕಿರಿ, ಪೊಲ್ಲಾದನ್, ಸ್ವಂತಂ ಚಿತ್ರಗಳಲ್ಲಿ ಅಭಿನಯ

ಹಿಂದಿಯ ಲಂಡನ್ ಡ್ರೀಮ್ಸ್, ಕಾರ್ಪೋರೇಟ್, ಏಕ್ ಸೇ ಬೂರೇ ದೋ ಚಿತ್ರಗಳಲ್ಲಿ ಅಭಿನಯಿಸಿದರು. ತೆಲುಗಿನ ಸ್ವಂತಂ, ತಮಿಳಿನ ಮನ್ಮಧನ್, ಪೋಕ್ಕಿರಿ, ಪೊಲ್ಲಾದವನ್ ಚಿತ್ರಗಳು ಸಾಕಷ್ಟು ಹೆಸರು ತಂದುಕೊಟ್ಟವು.

ಕೆಂಪು ವಸ್ತ್ರಗಳಲ್ಲಿ ಮಿಂಚಿದ ಜೋಡಿ

ವಧುವರದು ಟಾಪ್ ಟು ಬಾಟಮ್ ಕೆಂಪು ವಸ್ತ್ರಗಳಲ್ಲಿ ಮಿಂಚಿದರು. ವಧುವಿನ ಕುಪ್ಪಸ, ದುಪ್ಪಟ, ಸೀರೆ ಹಾಗೂ ವರನ ವಸ್ತ್ರಗಳು ಕೆಂಪು ಬಣ್ಣದಲ್ಲಿದ್ದದ್ದು ವಿಶೇಷ.

ವಧು ಬೃಂದಾ ಜೊತೆ ಗಾಯಕ ಹರಿಹರನ್

ಮದುವೆಯಲ್ಲಿ ಸಾಕಷ್ಟು ಅತಿಥಿಗಳಿದ್ದರೂ ಕಣ್ಣಿಗೆ ಬಿದ್ದದ್ದು ಮಾತ್ರ ಕೆಲವೇ ಕೆಲವರು. ಅವರಲ್ಲಿ ಗಮನಸೆಳೆದವರೆಂದರೆ ಗಾಯಕ ಹರಿಹರನ್.

English summary
Kannada, Tamil, Telugu and Hindi films film actress and adult model Brinda Parekh and Ajay's Wedding in Sakinaka, Mumbai on 8th Feb 2014. Singer Hariharan, adult actor Poonam Jhawar attended the ceremony as well.
Please Wait while comments are loading...