For Quick Alerts
  ALLOW NOTIFICATIONS  
  For Daily Alerts

  ವಂಚಕ ಸುಕೇಶ್ ಭೇಟಿ: ನಟಿ ಚಾಹತ್ ಹೇಳಿದ್ದೇನು?

  |

  'ದುಷ್ಟರ ಸಂಗ ಅಭಿಮಾನ ಭಂಗ' ಗಾದೆ ಮಾತಿನಂತೆ, ವಂಚಕ ಸುಕೇಶ್‌ನ ಗೆಳೆತನ ಬಾಲಿವುಡ್‌ನ ಕೆಲವು ನಟಿಯರಿಗೆ ಅಭಿಮಾನ ಭಂಗದ ಜೊತೆ ಬಂಧನದ ಭೀತಿಯನ್ನೂ ಎದುರಿಸುವಂತಾಗಿದೆ.

  200 ಕೋಟಿ ಸುಲಿಗೆ ಪ್ರಕರಣದ ಮುಖ್ಯ ಆರೋಪಿ ಸುಕೇಶ್ ಚಂದ್ರಶೇಖರ್ ಅನ್ನು ಜಾಕ್ವೆಲಿನ್ ಫರ್ನಾಂಡೀಸ್, ನೋರಾ ಫತೇಹಿ ಸೇರಿದಂತೆ ಕೆಲವು ಬಾಲಿವುಡ್ ನಟಿಯರು ಭೇಟಿಯಾಗಿದ್ದರು, ಅವನಿಂದ ದುಬಾರಿ ಉಡುಗೊರೆಗಳನ್ನು ಪಡೆದಿದ್ದರು ಎಂಬುದು ಬಹಿರಂಗಗೊಂಡಿದ್ದು, ಸುಕೇಶ್‌ ಜೊತೆ ಸಂಪರ್ಕ ಇರಿಸಿಕೊಂಡಿದ್ದ ನಟಿಯರಿಗೆ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ.

  ಸುಕೇಶ್‌ ಪ್ರಕರಣದಲ್ಲಿ ಈವರೆಗೆ ಜಾಕ್ವೆಲಿನ್ ಫರ್ನಾಂಡೀಸ್, ನೋರಾ ಫತೇಹಿ ಹೆಸರುಗಳಷ್ಟೆ ಹೊರಬಿದ್ದಿದ್ದವು, ಇದೀಗ ಇನ್ನೂ ನಾಲ್ವರು ನಟಿಯರ ಹೆಸರು ಹೊರಬಂದಿದ್ದು ಅದರಲ್ಲಿ ನಟಿ ಚಾಹತ್ ಖನ್ನಾ ಸಹ ಒಬ್ಬರು.

  ಪ್ರಕರಣದಲ್ಲಿ ತಮ್ಮ ಹೆಸರು ಕೇಳಿ ಬಂದಿರುವ ಬಗ್ಗೆ ನಟಿ ಚಾಹತ್ ಖನ್ನಾ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, 'ಮಾಧ್ಯಮಗಳು, ಪ್ರಕರಣದ ಒಂದು ಮುಖವನ್ನಷ್ಟೆ ಪ್ರಕಟಿಸುತ್ತಿವೆ' ಎಂದಿದ್ದಾರೆ.

  ''ಪ್ರಕರಣದ ಬಗ್ಗೆ ನನಗೆ ಬಹಳಷ್ಟು ಹೇಳಬೇಕಿದೆ. ಪ್ರಕರಣದ ತನಿಖೆ ಪ್ರಗತಿಯಲ್ಲಿರುವ ಈ ಹೊತ್ತಿನಲ್ಲಿ ನನ್ನ ಬಗ್ಗೆ ನಾನೇ ಸ್ಪಷ್ಟನೆ ನೀಡುವುದು ಸರಿಯಲ್ಲ ಎಂಬ ಕಾರಣಕ್ಕೆ ಸುಮ್ಮನಾಗಿದ್ದೇನೆ. ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡಲು ಇದು ಸರಿಯಾದ ಸಮಯವಲ್ಲ'' ಎಂದಿದ್ದಾರೆ.

  ಮುಂದುವರೆದು, ''ಸರಿಯಾದ ಸಮಯ ಬಂದಾಗ ನಾನು ಖಂಡಿತ ಮಾತನಾಡುತ್ತೇನೆ. ಆದರೆ ಆಗಲೂ ನಾನು ನನ್ನನ್ನು ರಕ್ಷಿಸಿಕೊಳ್ಳಲು ಮಾತನಾಡುವುದಿಲ್ಲ ಬದಲಿಗೆ ನಿಜವಾಗಿಯೂ ನಡೆದಿದ್ದೇನೆ ಎಂಬುದನ್ನು ತಿಳಿಸಲು ನಾನು ಮಾತನಾಡುತ್ತೇನೆ. ಮಾಧ್ಯಮಗಳು ಈಗ ತೋರಿಸುತ್ತಿರುವುದು ಪ್ರಕರಣದ ಒಂದು ಮುಖವನ್ನಷ್ಟೆ'' ಎಂದಿದ್ದಾರೆ ನಟಿ.

  ''ತಪ್ಪು ಮಾಡಿದವರು ತಮ್ಮ ಪರವಾಗಿ ವಾದಿಸಲು ವಕೀಲರನ್ನು ನೇಮಿಸಿಕೊಳ್ಳುತ್ತಾರೆ. ನಾನೇನಾದರೂ ವಕೀಲರನ್ನು ನೇಮಿಸಿಕೊಂಡರೂ ಸಹ ಘಟನೆ ಕೇಳಿ ಅವರೂ ನಗುತ್ತಾರೆ. ನಾನೇನೂ ತಪ್ಪು ಮಾಡಿಲ್ಲ ಹಾಗಾಗಿ ನಾನು ಭಯ ಪಡುವ ಅಗತ್ಯವೇ ಇಲ್ಲ'' ಎಂದಿರುವ ಚಾಹತ್ ಖನ್ನಾ ''ಈಗಂತೂ ಮಾಧ್ಯಮಗಳಲ್ಲಿ ನನ್ನ ಬಗ್ಗೆ ಪ್ರಸಾರವಾಗುತ್ತಿರುವ ಸುದ್ದಿಗಳನ್ನು ಕೇಳಿ ನಾನು ಹಾಗೂ ನನ್ನ ಕುಟುಂಬದವರು ಚೆನ್ನಾಗಿ ನಗುತ್ತಿದ್ದೇವೆ'' ಎಂದಿದ್ದಾರೆ.

  ಚಾಹತ್ ಖನ್ನಾ 'ಬಡೇ ಅಚ್ಛೆ ಲಗ್ತೆ ಹೇ', 'ಕುಬೂಲ್ ಹೈ' ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಚಾಹತ್ ಮಾತ್ರವೇ ಅಲ್ಲದೆ ಮತ್ತೊಬ್ಬ ಜನಪ್ರಿಯ ನಟಿ ನಿಕ್ಕಿ ತಾಂಬೋಲಿ ಸಹ ಸುಕೇಶ್‌ ಜೊತೆ ಸಂಪರ್ಕ ಹೊಂದಿದ್ದರು ಎನ್ನಲಾಗುತ್ತಿದೆ. ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿರುವ ನಟಿ ನಿಕ್ಕಿ ತಾಂಬೋಲಿ ಬಿಗ್‌ಬಾಸ್ 14ರ ಸ್ಪರ್ಧಿಯೂ ಆಗಿದ್ದರು. ಇವರಿಬ್ಬರು ಮಾತ್ರವಲ್ಲದೆ ಮಾಡೆಲ್‌ಗಳಾದ ಸೋಫಿಯಾ ಸಿಂಗ್ ಹಾಗೂ ಆರುಷಾ ಪಟೇಲ್ ಸಹ ಸುಕೇಶ್ ಅನ್ನು ಭೇಟಿಯಾಗಿದ್ದರು.

  English summary
  Hindi Tv actress Chahat Khanna talked about Sukesh Chandrashekhar's case. She said she doesn't did any thing wrong.
  Monday, September 19, 2022, 13:07
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X