ನಟಿ ಛಾವಿ ಮಿತ್ತಲ್‌ಗೆ ಸ್ತನ ಕ್ಯಾನ್ಸರ್, ಭಾವನಾತ್ಮಕ ಪತ್ರ ಬರೆದ ನಟಿ!
'ಶಿಟ್ಟಿ ಐಡಿಯಾಸ್ ಟ್ರೆಂಡಿಂಗ್' ಯೂಟ್ಯೂಬ್ ಕಾರ್ಯಕ್ರಮದಲ್ಲಿ ಹೆಸರುವಾಸಿಯಾದ ನಟಿ ಛಾವಿ ಮಿತ್ತಲ್, ತನ್ನ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ತಮಗೆ ಇರುವ ಸ್ತನ ಕ್ಯಾನ್ಸರ್ ಬಗ್ಗೆ ಹೇಳಿಕೊಂಡಿದ್ದರು. ಛಾವಿ ಮಿತ್ತಲ್ ಮಿತ್ತಲ್ ಕ್ಯಾನ್ಸರ್‌ಗೆ ತುತ್ತಾಗಿದ್ದಾರೆ ಎಂದು ತಿಳಿದ ಅಭಿಮಾನಿಗಳು ಈಕೆಗೆ ಆತ್ಮಸ್ಥೈರ್ಯ ತುಂಬಿದ್ದಾರೆ.
ಈ ಬಗ್ಗೆ ಮತ್ತೊಂದು ಹೊಸ ಪೋಸ್ಟ್ ಹಂಚಿಕೊಂಡಿರುವ ನಟಿ, "ನನ್ನ ಅಭಿಮಾನಿಗಳ ಪ್ರಾರ್ಥನೆ ಮತ್ತು ಶುಭಾಶಯಗಳಿಂದ ಚೆನ್ನಾಗಿದ್ದೇನೆ. ಅದಕ್ಕೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಾನು ನಿನ್ನೆಯಿಂದ ಬಹಳಷ್ಟು ಕಣ್ಣೀರು ಸುರಿಸಿದ್ದೇನೆ. ಆದರೆ ಅದು ಸಂತೋಷದ ಕಣ್ಣೀರು ಮಾತ್ರ. ಕಳೆದ 24 ಗಂಟೆಗಳಲ್ಲಿ ನಾನು ಸಾವಿರಾರು ಸಂದೇಶಗಳು ಮತ್ತು ಶುಭಾಶಯಗಳನ್ನು ಸ್ವೀಕರಿಸಿದ್ದೇನೆ ಮತ್ತು ಅವುಗಳಲ್ಲಿ ಪ್ರತಿಯೊಂದರಲ್ಲೂ ಸೂಪರ್ ವುಮೆನ್, ಸ್ಫೂರ್ತಿ, ಹೋರಾಟಗಾರ್ತಿ, ಹೀಗೆ ಅನೇಕ ಸುಂದರವಾದ ಪದಗಳಿವೆ." ಎಂದು ಬರೆದಿದ್ದಾರೆ.
ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ತನ್ನ ರೋಗ ನಿರ್ಣಯದ ವಿವರಗಳನ್ನು ಬಹಿರಂಗಪಡಿಸಿದ್ದಾರೆ. "ವೈದ್ಯರು ನನ್ನ ಕ್ಯಾನ್ಸರ್ ಗಡ್ಡೆಯನ್ನು ಬೇಗ ಪತ್ತೆ ಹಚ್ಚಿದ್ದಾರೆ. ಇದು ನನ್ನ ಪುಣ್ಯ." ಎಂದು ಪೋಸ್ಟ್ ಮಾಡಿದ್ದಾರೆ. ಕಾಯಿಲೆ ಬಗ್ಗೆ ಹೇಳಿಕೊಂಡಿರುವ ಮಿತ್ತಲ್ "ಎದೆಯಲ್ಲಿ ಕಾಣಿಸಿಕೊಂಡ ಸಣ್ಣ ಗಾಯವನ್ನು ಪರೀಕ್ಷಿಸಿಕೊಳ್ಳಲು ನಾನು ವೈದ್ಯರ ಬಳಿಗೆ ಹೋಗಿದ್ದೆ. ಆಗಲೇ ನನಗೆ ಸ್ತನ ಕ್ಯಾನ್ಸರ್ ಇರುವುದು ಗೊತ್ತಾಯಿತು. ವೈದ್ಯರು ನನ್ನ ಗಡ್ಡೆ ಬಗ್ಗೆ ಬೇಗ ಪತ್ತೆ ಹಚ್ಚಿದರು. ಇದು ನನ್ನ ಅದೃಷ್ಟ".

"ಕ್ಯಾನ್ಸರ್ ನಂತರದ ರೋಗಿಯಾಗಿ ಒಬ್ಬರು 6 ಮಾಸಿಕ ಪಿಇಟಿ ಸ್ಕ್ಯಾನ್‌ಗಳನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು. ಸ್ತನ ಕ್ಯಾನ್ಸರ್‌ನಿಂದ ನಿಮ್ಮ ಜೀವನವನ್ನು ಉಳಿಸಲು, ದಯವಿಟ್ಟು ನಿಯಮಿತವಾಗಿ ಸ್ವಯಂ ಪರೀಕ್ಷೆ , ಮ್ಯಾಮೊಗ್ರಾಮ್‌ಗಳನ್ನು ಮಾಡಿಸಿಕೊಳ್ಳಿ. ರೋಗ ಪತ್ತೆಯಾದರೆ ನಿರ್ಲಕ್ಷಿಸಬೇಡಿ". ಎಂದು ಸ್ತನ ಕ್ಯಾನ್ಸರ್ ಪೀಡಿತ ಮಹಿಳೆಯರಿಗೆ ಶಕ್ತಿ ತುಂಬಿದ್ದಾರೆ.

"ಈ ಕಾಯಿಲೆ ನನ್ನ ಉತ್ಸಾಹವನ್ನು ತಗ್ಗಿಸುವುದಿಲ್ಲ. ಈ ಕಾಯಿಲೆಯನ್ನು ನಿಭಾಯಿಸುವುದು ಸುಲಭವಾಗದೆ ಇರಬಹುದು. ಆದರೆ ನನಗೆ ಕಷ್ಟವಲ್ಲ. ನಾನು ಮತ್ತೆ ಅದೇ ರೀತಿ ಕಾಣಿಸದಿರಬಹುದು. ಆದರೆ ನನ್ನನ್ನು ವಿಭಿನ್ನವಾಗಿ ಭಾವಿಸಬೇಕಾಗಿಲ್ಲ."ಎಂದು ಮಿತ್ತಲ್ ಬರೆದುಕೊಂಡಿದ್ದಾರೆ. ನಿರ್ದೇಶಕ ಮೋಹಿತ್ ಹುಸೇನ್ ಅವರನ್ನು ವಿವಾಹವಾಗಿ ಎರಡು ಮುದ್ದಾದ ಮಕ್ಕಳ ತಾಯಿಯಾಗಿರುವ ಮಿತ್ತಲ್, 'ಏಕ್ ವಿವಾಹ್... ಐಸಾ ಭಿ' ಹಾಗೂ 'ಕೈಸೇ ಕಹೇಂ' ಚಿತ್ರದಲ್ಲಿ ನಟಿದ್ದಾರೆ. ಜೊತೆಗೆ ಹಲವು ಟಿವಿ ಕಾರ್ಯಕ್ರಮಗಳಲ್ಲಿ ಭಾಗಿ ಆಗಿದ್ದಾರೆ.


Click it and Unblock the Notifications











