ಸ್ತನ ಕ್ಯಾನ್ಸರ್ ವಿರುದ್ಧ ಹೋರಾಡ್ತಿದ್ದೀನಿ, ನಿಮ್ಗೆ ಚೂರು ಮನುಷತ್ವ ಇಲ್ವಾ; ನಟಿಯ ಆವೇದನೆ

ದಿನದಿಂದ ದಿನಕ್ಕೆ ಕ್ಯಾನ್ಸರ್‌ನಿಂದ ಬಳಲುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇತ್ತೀಚೆಗೆ ವರ್ಷಗಳಲ್ಲಿ ಸಾಕಷ್ಟು ವಿಧದ ಕ್ಯಾನ್ಸರ್‌ಗೆ ಚಿಕಿತ್ಸೆ ಸಿಗುತ್ತಿದೆ. ಕೆಲವರು ಈ ಮಾರಣಾಂತಿಕ ಕಾಯಿಲೆ ವಿರುದ್ಧ ಹೋರಾಡಿ ಗೆಲ್ಲುತ್ತಿದ್ದಾರೆ. ಸಾಕಷ್ಟು ಜನರಿಗೆ ಸ್ಫೂರ್ತಿ ತುಂಬುತ್ತಿದ್ದಾರೆ. ನಟ, ನಟಿಯರು ಇದರಲ್ಲಿ ಮುಂದಿದ್ದಾರೆ.

ಖ್ಯಾತ ನಟ-ನಟಿಯರು ಕೂಡ ಕ್ಯಾನ್ಸರ್‌ಗೆ ತುತ್ತಾಗಿದ್ದಾರೆ. ಅದರಲ್ಲಿ ಕೆಲವರು ಹೋರಾಡಿ ಗೆದ್ದಿದ್ದಾರೆ. ಮತ್ತೆ ಕೆಲವರು ಕೈಚೆಲ್ಲಿದ್ದಾರೆ. ಇದೀಗ ಬಾಲಿವುಡ್ ನಟಿ ಛಾವಿ ಮಿತ್ತಲ್ ಕೂಡ ಸ್ತನ ಕ್ಯಾನರ್‌ನಿಂದ ಬಳಲುತ್ತಿರುವ ವಿಚಾರ ತಿಳಿಸಿದ್ದಾರೆ. ಅದರ ವಿರುದ್ಧ ಹೋರಾಟ ಮಾಡುತ್ತಿರುವ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಇಂತಹ ಸಮಯದಲ್ಲೂ ತಮ್ಮನ್ನು ಟ್ರೋಲ್ ಮಾಡುವವರ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.

Actress Chhavi Mittal slams trolls over her hair loss amid cancer treatment

ಮಾನವತ್ವ ಸತ್ತು ಹೋಗಿದೆ ಎಂದು ಛಾವಿ ಮಿತ್ತಲ್ ಬೇಸರ ಹೊರ ಹಾಕಿದ್ದಾರೆ. ಅದಕ್ಕೆ ಕಾರಣವೂ ಇದೆ. ಕ್ಯಾನ್ಸರ್ ಚಿಕಿತ್ಸೆ ಬಹಳ ಗಂಭೀರವಾದದ್ದು, ಈ ಚಿಕಿತ್ಸೆ ವೇಳೆ ಕೂದಲು ಉದುರುವುದು ಸೇರಿದಂತೆ ಸಾಕಷ್ಟು ಬದಲಾವಣೆಗಳಾಗಿತ್ತದೆ. ಆಕೆಯ ಕೂದಲು ಉದುರುತ್ತಿರುವ ಬಗ್ಗೆ ಕೂಡ ಕೆಲವರು ಟ್ರೋಲ್ ಮಾಡಿದ್ದಾರೆ. ಇದೇ ಕಾರಣಕ್ಕೆ ಆಕೆ ಪೋಸ್ಟ್ ಮಾಡಿ ನೋವು ತೋಡಿಕೊಂಡಿದ್ದಾರೆ.

ಹರ್ಯಾಣ ಮೂಲಕ ನಟಿ ಛಾವಿ ಮಿತ್ತಲ್ ಹಿಂದಿ ಕಿರುತೆರೆಯಲ್ಲಿ ಹೆಚ್ಚು ಕೆಲಸ ಮಾಡಿದ್ದಾರೆ. ನಟನೆಯ ಜೊತೆ ನಿರ್ಮಾಪಕಿಯಾಗಿಯೂ ಗುರ್ತಿಸಿಕೊಂಡಿದ್ದಾರೆ. ಮದುವೆ ಆಗಿ ಆಕೆ ಒಬ್ಬ ಮಗ, ಒಬ್ಬಳು ಮಗಳು ಇದ್ದಾಳೆ. 2022ರ ಏಪ್ರಿಲ್‌ನಲ್ಲಿ ಛಾವಿ ಮಿತ್ತಲ್ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿರುವ ವಿಚಾರ ಗೊತ್ತಾಗಿದೆ. ಬಳಿಕ ಆಕೆ ಚಿಕಿತ್ಸೆ ಪಡೆದು ಅದರ ವಿರುದ್ಧ ಹೋರಾಡಲು ಮುಂದಾಗಿದ್ದರು.

ತಮ್ಮನ್ನು ಟ್ರೋಲ್ ಮಾಡುವವರ ಬಗ್ಗೆ ನಟಿ ಛಾವಿ ಮಿತ್ತಲ್ ಪ್ರತಿಕ್ರಿಯಿಸಿದ್ದಾರೆ. "ಮಾನವತ್ವ ಸತ್ತು ಹೋಯಿತು ಎಂದು ಮತ್ತೆ ನನಗೆ ಅನ್ನಿಸುತ್ತಿದೆ. ಕ್ಯಾನ್ಸರ್ ಚಿಕಿತ್ಸೆ ಕಾರಣ ಕೂದಲು ಉದುರುತ್ತಿದ್ದರೆ ನೀವು ಟ್ರೋಲ್ ಮಾಡುತ್ತಿದ್ದೀರ. 2022ರಿಂದ ನಾನು ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದೀನಿ. ಇದಕ್ಕೆ 10 ವರ್ಷ ಚಿಕಿತ್ಸೆ ಪಡೆಯಬೇಕಾಗುತ್ತದೆ. ಕಳೆದ 3 ವರ್ಷಗಳಿಂದ ಹಾರ್ಮೋನ್ ಚಿಕಿತ್ಸೆ ಪಡೆಯುತ್ತಿದ್ದೀನಿ" ಎಂದು ಆಕೆ ಬರೆದುಕೊಂಡಿದ್ದಾರೆ.

"ಈ ಚಿಕಿತ್ಸೆ ಕಾರಣ ಸಾಕಷ್ಟು ಅಡ್ಡ ಪರಿಣಾಮಗಳಿವೆ. ಚರ್ಮ ಒಣಗುವುದು, ನಿರ್ಜಲೀಕರಣ, ಕೂದಲು ಉದುರುವುದು ಹೀಗೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಮಹಿಳೆಯರಿಗೆ ಕೂದಲ ಬಗ್ಗೆ ಎಷ್ಟು ಪ್ರೀತಿ ಇರುತ್ತದೆ ಎಂದು ಬಿಡಿಸಿ ಹೇಳುವುದು ಬೇಕಿಲ್ಲ. ಮೊದಲು ನನ್ನ ಸ್ತನಗಳನ್ನು ಉಳಿಸಿಕೊಳ್ಳು ಹೋರಾಡಿದೆ. ಈಗ ಕೂದಲಿಗಾಗಿ ಹೋರಾಡುವಂತಾಗಿದೆ. ಇಂತಹ ಸಮಯದಲ್ಲಿ ನೀವು ಮಾಡುವ ನೆಗೆಟಿವ್ ಕಾಮೆಂಟ್ಸ್ ನೋವು ತರುತ್ತದೆ" ಎಂದು ಛಾವಿ ಮಿತ್ತಲ್ ಬೇಸರ ಹೊರ ಹಾಕಿದ್ದಾರೆ.

"ನಾನು ಈಗ ಈ ಪೋಸ್ಟ್ ಮಾಡುವುದಕ್ಕೂ ಕಾರಣವಿದೆ. ಕೆಲವರು ನನ್ನನ್ನು ಇಷ್ಟಪಟ್ಟು ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡ್ತಿಲ್ಲ. ಬದಲಿಗೆ ಟ್ರೋಲ್ ಮಾಡಲು ಫಾಲೋ ಮಾಡ್ತಿದ್ದಾರೆ. ಕೂದಲು ಉದುರುತ್ತಿದ್ದರೂ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ವಾರಿಯರ್‌ನ ಹೇಗೆ ಟ್ರೋಲ್ ಮಾಡಲು ನಿಮಗೆ ಹೇಗೆ ಮನಸ್ಸು ಬರುತ್ತದೆ" ಎಂದು ಛಾವಿ ಮಿತ್ತಲ್ ಪ್ರಶ್ನಿಸಿದ್ದಾರೆ.

"ಟ್ರೋಲಿಗರೇ, ನಿಮ್ಮ ತಲೆಯಲ್ಲಿ ಕೂದಲು ತುಂಬಿರಲಿ ಮತ್ತು ನಿಮಗೆ ಕ್ಯಾನ್ಸರ್ ಮುಕ್ತ ಜೀವನವಿರಲಿ. ಟ್ರೋಲ್ ಇಲ್ಲದ ಜೀವನ ನಿಮಗೆ ಸಿಗಲಿ. ಅದೇ ರೀತಿ ನಾನು ನನ್ನ ಆತ್ಮಸ್ಥೈರ್ಯ ಕಳೆದುಕೊಳ್ಳದೇ ನನ್ನ ದೇಹವನ್ನು ಹೇಗೆ ಇಟ್ಟುಕೊಂಡಿದ್ದೇನೆ ನೋಡಿ" ಎಂದು ನಟಿ ಛಾವಿ ಮಿತ್ತಲ್ ಪೋಸ್ಟ್ ಮಾಡಿದ್ದಾರೆ.

More from Filmibeat

English summary
Actress Upset with Trolls due to Hair Loss from Cancer Treatment;
Read more about: bollywood actress hindi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X