ನೀವು ಗರ್ಭಿಣಿಯೇ? ದೀಪಿಕಾ ಪಡುಕೋಣೆಗೆ ಅಭಿಮಾನಿಗಳ ಪ್ರಶ್ನೆ
ಮದುವೆ ನಂತರ ನಟಿಮಣಿಯರಿಗೆ ಸಾಮಾನ್ಯವಾಗಿ ಎದುರಿಸುವ ಪ್ರಶ್ನೆಗಳು ಅಂದರೆ ನೀವು ಗರ್ಭಿಣಿಯೇ? ಮಗು ಯಾವಾಗ ಮಾಡಿಕೊಳ್ಳುತ್ತೀರಿ? ಎಂದು. ಸದ್ಯ ದೀಪಿಕಾ ಪಡುಕೋಣೆ ವಿಚಾರದಲ್ಲಿಯೂ ಹಾಗೆ ಆಗಿದೆ.
Recommended Video
ಲಾಕ್ ಡೌನ್ ಹೊತ್ತಲ್ಲಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ರಾ ದೀಪಿಕಾ ಎನ್ನುವ ಅನುಮಾನ ಕಾಡುತ್ತಿದೆ. ಇದಕ್ಕೆ ಕಾರಣವಾಗಿದ್ದು, ಇತ್ತೀಚಿಗೆ ದೀಪಿಕಾ ಇನ್ಸ್ಟಾಗ್ರಾಮ್ ನಲ್ಲಿ ಹಾಕಿರುವ ಫೋಟೋ. ಹೌದು, ಹೋಳು ಮಾಡಿರುವ ಮಾವಿನ ಕಾಯಿ ಫೋಟೋ ಶೇರ್ ಮಾಡಿದ್ದರು. ದೀಪಿಕಾ ಈ ಫೋಟೋ ಶೇರ್ ಮಾಡುತ್ತಿದ್ದಂತೆ ಅಭಿಮಾನಿಗಳು ನೀವು ಗರ್ಭಿಣಿಯೇ?, ಏನಾದರು ಒಳ್ಳೆಯ ಸುದ್ದಿ ಇದಿಯಾ? ಎಂದು ಪ್ರಶ್ನೆ ಮಾಡಲು ಶುರು ಮಾಡಿಕೊಂಡಿದ್ದಾರೆ.
ಸಾಮಾನ್ಯವಾಗಿ ಗರ್ಭಿಣಿಯರು ಮಾವಿನ ಕಾಯಿ ತಿಂದು ಬಯಕೆ ಈಡೇರಿಸಿಕೊಳ್ಳುತ್ತಾರೆ. ಹಾಗಾಗಿಯೆ ದೀಪಿಕಾ ಸಹ ಮಾವಿನ ಕಾಯಿ ತಿಂದು ಬಯಕೆ ಈಡೇರಿಕೊಳ್ಳುತ್ತಿದ್ದಾರಾ ಎಂದು ಅಭಿಮಾನಿಗಳಲ್ಲಿ ಅನುಮಾನ ಮೂಡಿಸಿದೆ.

ಅಂದ್ಹಾಗೆ ದೀಪಿಕಾ ಗರ್ಭಿಣಿ ಎನ್ನುವ ವದಂತಿ ಹರಿದಾಡುತ್ತಿರುವುದು ಇದೆ ಮೊದಲೇನಲ್ಲ. ಈ ಹಿಂದೆಯೂ ದೀಪಿಕಾ ಗರ್ಭಿಣಿ ಆಗಿದ್ದಾರೆ ಎನ್ನುವ ಗಾಳಿಸುದ್ದಿ ದೊಡ್ಡ ಮಟ್ಟಕ್ಕೆ ಸದ್ದು ಮಾಡಿತ್ತು. ಆದರೆ ಇದ್ಯಾವುದಕ್ಕು ದೀಪಿಕಾ ತಲೆಕೆಡಿಸಿಕೊಳ್ಳದೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ದೀಪಿಕಾ ಕೊನೆಯದಾಗಿ ಚಪಾಕ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ.


Click it and Unblock the Notifications











