»   » 32ನೇ ವಸಂತಕ್ಕೆ ಕಾಲಿಟ್ಟ ನಟಿ ದೀಪಿಕಾ ಪಡುಕೋಣೆ

32ನೇ ವಸಂತಕ್ಕೆ ಕಾಲಿಟ್ಟ ನಟಿ ದೀಪಿಕಾ ಪಡುಕೋಣೆ

Posted By:
Subscribe to Filmibeat Kannada

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಇಂದು ತಮ್ಮ 32ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಬರ್ತ್ ಡೇ ಖುಷಿಯಲ್ಲಿ ಇರುವ ದೀಪಿಕಾಗೆ ಸಾಮಾಜಿಕ ಜಾಲತಾಣಗಳ ಮೂಲಕ ಸಾವಿರಾರು ಅಭಿಮಾನಿಗಳು ಶುಭ ಕೋರಿದ್ದಾರೆ.

ಬೆಂಗಳೂರಿನ ಹುಡುಗಿಯಾಗಿ ಕನ್ನಡದಲ್ಲಿ ಮೊದಲ ಬಾರಿಗೆ 'ಐಶ್ವರ್ಯ' ಸಿನಿಮಾ ಮಾಡಿದ್ದ ದೀಪಿಕಾ ಪಡುಕೋಣೆ ನಂತರ ಬಾಲಿವುಡ್ ಮೆಟ್ಟಿಲು ಏರಿದರು. ನೋಡನೋಡುತ್ತಲೆ ಒಂದರ ನಂತರ ಒಂದರಂತೆ ಸೂಪರ್ ಹಿಟ್ ಸಿನಿಮಾ ನೀಡಿ ಬಿ ಟೌನ್ ಕ್ವೀನ್ ಆದರೂ. ಒಂದು ಕಡೆ ಸ್ಟಾರ್ ಸಿನಿಮಾಗಳಲ್ಲಿ ನಟಿಸಿ, ಇನ್ನೊಂದು ಕಡೆ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡು ಎರಡು ವಿಭಾಗಳಲ್ಲಿ ದೀಪಿಕಾ ಗೆದ್ದರು.

'ಓ ಶಾಂತಿ ಓಂ', 'ಚೆನ್ನೈ ಎಕ್ಸಪ್ರೆಸ್', 'ಹ್ಯಾಪಿ ನ್ಯೂ ಹಿಯರ್', 'ಬಾಜಿರಾವ್ ಮಸ್ತಾನಿ' ದೀಪಿಕಾ ನಟನೆಯ ಬ್ಲಾಕ್ ಬಾಸ್ಟರ್ ಹಿಟ್ ಸಿನಿಮಾಗಳಾಗಿವೆ. 'ಪೀಕು' ದೀಪಿಕಾ ನಟನೆಯ ವಿಭಿನ್ನ ಸಿನಿಮಾಗಳಲ್ಲಿ ಪ್ರಮುಖವಾಗಿದೆ. ಹಿಂದಿ ಚಿತ್ರರಂಗದಲ್ಲಿ ದೊಡ್ಡ ನಟಿಯಾಗಿ ಮಿಂಚಿದ್ದ ಈ ಬೆಂಗಳೂರಿನ ಹುಡುಗಿ ಹಾಲಿವುಡ್ ನಲ್ಲಿ ಕೂಡ ಸಿನಿಮಾ ಮಾಡಿ ಬಂದಿದ್ದಾರೆ.

Actress Deepika Padukone turns 32

ಇನ್ನು ಈ ವರ್ಷದ ಹುಟ್ಟುಹಬ್ಬದ ದಿನವೇ ದೀಪಿಕಾ ತಮ್ಮ ಗೆಳೆಯ ಬಾಲಿವುಡ್ ನಟ ರಣ್ವೀರ್ ಸಿಂಗ್ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರೆ ಎನ್ನುವ ಸುದ್ದಿ ಇತ್ತು. ಆದರೆ ಸದ್ಯಕ್ಕೆ ಇಂದು ಇವರಿಬ್ಬರ ಎಂಗೇಜ್ ಮೆಂಟ್ ಬಗ್ಗೆ ಎಲ್ಲಿಯೂ ಸುದ್ದಿ ಬಹಿರಂಗವಾಗಿಲ್ಲ.

English summary
Bollywood actress Deepika Padukone turns 32. Fans wished her on social media.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X