ಸಾಯುವ ಮುನ್ನಾ ಹೃದಯ ಹಿಂಡುವ ಸಂದೇಶ ನೀಡಿ ಹೋದ ನಟಿ
ನಟಿ ದಿವ್ಯಾ ಚೌಕ್ಸಿ ಇಂದು ನಿಧನರಾಗಿದ್ದಾರೆ. ಸಿನಿಮಾ, ರಿಯಾಲಿಟಿ ಶೋ, ಟಿವಿ ಧಾರಾವಾಹಿಗಳಲ್ಲಿ ನಟಿಸಿರುವ ದಿವ್ಯಾ ಚೌಕ್ಸಿ ಕ್ಯಾನ್ಸರ್‌ನಿಂದ ಮೃತವಾಗಿದ್ದಾರೆ.
Recommended Video
ಅಂದು ನನ್ನ ಅಮ್ಮನ ಕಾಲಿಗೆ ಬಿದ್ದು ಕೊಟ್ಟ ಮಾತನ್ನ ಉಳಿಸಿಕೊಂಡರು ಶಿವಣ್ಣ | Shiva Rajkumar | Filmibeat Kannada
ದಿವ್ಯಾ ಸಾಯುವ ಕೆಲವೇ ಹೊತ್ತಿನ ಮುನ್ನಾ ತಮ್ಮದೇ ಸಾವಿನ ಬಗ್ಗೆ ಬರೆದುಕೊಂಡಿದ್ದಾರೆ. ಸಾಯುವ ಹದಿನೈದು ದಿನದ ಗಂಟೆ ಮುನ್ನಾ ತಮ್ಮ ಸಾವಿನ ಬಗ್ಗೆ ತಾವೇ ಬರೆದುಕೊಂಡಿದ್ದರು.
ಹೇ ದಿಲ್ ತೊ ಆವಾರಾ ಸಿನಿಮಾದಲ್ಲಿ ನಟಿಸಿದ್ದ ನಟಿ ಕೆಲವು ತಿಂಗಳಿನಿಂದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರು. ಕೊನೆಗೆ ಇಂದು ಕ್ಯಾನ್ಸರ್ ಗೆ ಬಲಿಯಾದರು.

ಆದರೆ ಸಾಯುವ ಮುನ್ನಾ ಇನ್‌ಸ್ಟಾಗ್ರಾಂ ನಲ್ಲಿ ಪೋಸ್ಟ್ ಹಾಕಿದ್ದ ದಿವ್ಯಾ ಚೌಕ್ಸಿ, 'ನಾನು ಮರಣಶಯ್ಯೆಯಲ್ಲಿದ್ದೀನಿ, ಮುಂದಿನ ಜನ್ಮದಲ್ಲಿ ನಿಮ್ಮನ್ನು ಭೇಟಿಯಾಗುತ್ತೇನೆ. ಮುಂದಿನ ಜನ್ಮವಾದರೂ ನೋವಿಲ್ಲದ ಜನ್ಮವಾಗಲಿ' ಎಂದು ಭಾವನಾತ್ಮಕವಾಗಿ ಬರೆದಿದ್ದಾರೆ.
ದಿವ್ಯಾ ಚೌಕ್ಸಿ ಸಾವಿಗೆ ಹಲವು ಟಿವಿ ನಟ-ನಟಿಯರು ಬೇಸರ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.
English summary
Actres Divya Chowksy died of cancer today. She posted about her own death.


Click it and Unblock the Notifications