For Quick Alerts
  ALLOW NOTIFICATIONS  
  For Daily Alerts

  ಕಮೋಡ್ ಮೇಲೆ ಕುಳಿತು ಫೋನ್ ನಲ್ಲಿ ಮಾತನಾಡುತ್ತಿರುವ ನಟಿಯ ಫೋಟೋ ವೈರಲ್

  |

  ಬಾಲಿವುಡ್ ನಟಿ ಎಲಿ ಅವ್ರಾಮ್ ಬಗ್ಗೆ ಎಲ್ಲರಿಗೂ ಹೆಚ್ಚಾಗಿ ಗೊತ್ತಿರಲಿಕ್ಕಿಲ್ಲ. ಸ್ವೀಡನ್ ನ ಈ ನಟಿ ಬಾಲಿವುಡ್ ನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಮಿಂಚಿದ್ರು ಹೆಳಿಕೊಳ್ಳುವಷ್ಟು ಖ್ಯಾತಿ ಸಿಕ್ಕಿಲ್ಲ. ಹಿಂದಿಯಲ್ಲಿ ಒಂದಿಷ್ಟು ಸಿನಿಮಾಗಳನ್ನು ಮಾಡಿರುವ ಎಲಿ ಅವ್ರಾಮ್ ಕನ್ನಡ ಸಿನಿಮಾದಲ್ಲೂ ಮಿಂಚಿದ್ದಾರೆ. ಈ ನಟಿಯ ಬಗ್ಗೆ ಈಗ್ಯಾಕೆ ಇಷ್ಟೊಂದು ಪೀಠಿಕೆ ಅಂದರೆ ಇತ್ತೀಚಿಗೆ ಎಲಿ ಅಮ್ರಾಮ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವ ಫೋಟೋ ಸಖತ್ ಸದ್ದು ಮಾಡುತ್ತಿದೆ.

  ಎಲಿ ಅವ್ರಾಮ್ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸಖತ್ ಹಾಟ್ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಇತ್ತೀಚಿಗೆ ಶೌಚಾಲಯದಲ್ಲಿ ಕಮೋಡ್ ಮೇಲೆ ಕುಳಿತು ಫೋಟೋ ಶೂಟ್ ಮಾಡಿಸಿದ್ದಾರೆ. ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ಕರೀನಾಳ ಮಂಡಿ ಕಾಣುತ್ತಿಲ್ಲ: ಹೀಗೂ ಫೋಟೋಶಾಪ್ ಮಾಡ್ತಾರಾ ಗುರು.?!ಕರೀನಾಳ ಮಂಡಿ ಕಾಣುತ್ತಿಲ್ಲ: ಹೀಗೂ ಫೋಟೋಶಾಪ್ ಮಾಡ್ತಾರಾ ಗುರು.?!

  ಟಾಯ್ಲೆಟ್ ನಲ್ಲಿ ಕೇವಲ ಜಾಕೆಟ್ ಹಾಕಿರುವ ಎಲಿ ಕಮೇಡ್ ಮೇಲೆ ಕುಳಿತು ಫೋನ್ ನಲ್ಲಿ ಮಾತನಾಡುತ್ತಿದ್ದಾರೆ. ಈ ಪೋಸ್ಟ್ ಗೆ ನೆಟ್ಟಿಗರಿಂದ ತರಹೇವಾರಿ ಕಮೆಂಟ್ಸ್ ಹರಿದು ಬರುತ್ತಿವೆ. ಸೆಲೆಬ್ರಿಟಿಗಳು ಸಾಮಾನ್ಯ ಫೋಟೋಗಳನ್ನು ಶೇರ್ ಮಾಡಿದ್ರೆ ನೆಟ್ಟಿಗರು ಸುಮ್ಮನಿರುವುದಿಲ್ಲ. ಅಂತಹದ್ರಲ್ಲಿ ಎಲಿ ಅವ್ರಾಮ್ ಹಾಕಿರುವ ಹಾಟ್ ಫೋಟೋ ಕಿಚ್ಚುವಂತಿದೆ.

  ಕೆಲವರು ಇಂತಹ ಫೋಟೋಗಳನ್ನು ಶೇರ್ ಮಾಡುವುದಕ್ಕೆ ನಾಚಿಕೆ ಆಗುವುದಿಲ್ಲವ ಅಂತ ಬಾಯಿಗೆ ಬಂದಹಾಗೆ ಬೈಯುತ್ತಿದ್ದಾರೆ, ಇನ್ನು ಕೆಲವರು ಸಖತ್ ಹಾಟ್ ಆಗಿ ಇದೆ, ಈ ಅವತಾರದಲ್ಲಿ ನಿಮ್ಮನ್ನು ನೋಡಲು ಮಜಾ ಆಗುತ್ತಿದೆ ಎಂದು ಹೇಳುತ್ತಿದ್ದಾರೆ.

  ಅಂದ್ಹಾಗೆ ಎಲಿ ಅವ್ರಾಮ್ ಬಾಲಿವುಡ್ ನ ಕೆಲವು ಸಿನಿಮಾಗಳ ಜೊತೆಗೆ ಹಿಂದಿ ಬಾಸ್ ನಲ್ಲಿಯೂ ಮಿಂಚಿದ್ದಾರೆ. ವಿಶೇಷ ಅಂದರೆ ಎಲಿ ಕನ್ನಡ ಸಿನಿಮಾದಲ್ಲೂ ಮಿಂಚಿದ್ದಾರೆ. ಕನ್ನಡದಲ್ಲಿ ಎಲಿ ಇನ್ನು ರಿಲೀಸ್ ಆದ ಬಟರ್ ಫ್ಲೈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಪಾರುಲ್ ಯಾದವ್ ನಾಯಕಿಯಾಗಿ ಕಾಣಿಸಿಕೊಂಡಿರುವ ಸಿನಿಮಾದಲ್ಲಿ ಎಲಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ.

  English summary
  Bollywood Actress Elli Avram latest photoshoot she is sitting on Commodus and talking on the phone is viral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X