ನಿರ್ಮಾಪಕರಿಂದ ತಪ್ಪಿಸಿಕೊಳ್ಳಲು ಮೇಕಪ್ ಮ್ಯಾನ್‌ನನ್ನು ಕೋಣೆಗೆ ಕರೆಸಿಕೊಂಡಿದ್ದೆ: ಇಶಾ ಗುಪ್ತಾ

ಚಿತ್ರರಂಗದಲ್ಲಿ ಹಲವು ಬಾರಿ ಕಾಸ್ಟಿಂಗ್ ಕೌಚ್ ಅನ್ನೋದು ಕೇಳಿ ಬರುತ್ತದೆ. ಕೆಲವು ನಟಿಯರು ಈ ಬಗ್ಗೆ ದನಿ ಎತ್ತಿದ್ದಾರೆ. ಮತ್ತೆ ಕೆಲವರು ಒಳಗೊಳಗೆ ಸುಮ್ಮನೆ ಸಹಿಸಿಕೊಳ್ಳುತ್ತಾರೆ. ಮತ್ತೆ ಕೆಲವರು ಘಟನೆ ನಡೆದು ಅದೆಷ್ಟೋ ದಿನಗಳ ಬಳಿಕ ಈ ವಿಷಯವನ್ನು ಬಹಿರಂಗಪಡಿಸುತ್ತಾರೆ. ಸದ್ಯಕ್ಕೆ ಬಾಲಿವುಡ್ ನಟಿ ಇಶಾ ಗುಪ್ತಾ ತಮ್ಮ ಭಯಾನಕ ಕಾಸ್ಟಿಂಗ್ ಕೌಚ್ ಅನುಭವವನ್ನು ಹಂಚಿಕೊಂಡಿದ್ದಾರೆ.

ಬಾಲಿವುಡ್‌ ನಟಿಯರಾದ ರಾಧಿಕಾ ಆಪ್ಟೆ, ಸ್ವರಾ ಭಾಸ್ಕರ್, ಕಂಗನಾ ರನೌತ್ ಸೇರಿ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ಈ ಹಿಂದೆ ತಮ್ಮ ಭಯಾನಕ ಕಾಸ್ಟಿಂಗ್ ಕೌಚ್ ಅನುಭವಗಳ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಹಾಗಂತಾ ಈ ಕೆಟ್ಟ ಚಾಳಿ ಚಿತ್ರರಂಗದಿಂದ ಹೊರಟುಹೋಗಿಲ್ಲ. ನಟಿಯರ ಮೇಲಿನ ಈ ದೌರ್ಜನ್ಯವು ಚಲನಚಿತ್ರೋದ್ಯಮದಲ್ಲಿ ಹರಡುತ್ತಲೇ ಇದೆ. ಇತ್ತೀಚೆಗಷ್ಟೇ ಇಶಾ ಗುಪ್ತಾ ತಮ್ಮ ಅನುಭವದ ಬಗ್ಗೆ ತೆರೆದಿಟ್ಟಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಿನಿ ಪ್ರೇಮಿಗಳನ್ನು ಬೆಚ್ಚಿಬೀಳಿಸಿದೆ.

actress-esha-gupta

ಕಾಸ್ಟಿಂಗ್ ಕೌಚ್ ಅನುಭವ ತೆರೆದಿಟ್ಟ ಇಶಾ ಗುಪ್ತಾ

ಸ್ಪಾಟ್‌ಬಾಯ್‌ ವೆಬ್‌ಸೈಟ್‌ ಜೊತೆಗೆ ನೀಡಿದ ಇತ್ತೀಚಿನ ಸಂದರ್ಶನವೊಂದರಲ್ಲಿ, ಇಶಾ ಗುಪ್ತಾ ಅವರು ಕೆಲಸಕ್ಕಾಗಿ ಲೈಂಗಿಕವಾಗಿ ಸಹಕರಿಸುವಂತೆ ಬೇಡಿಕೆಯಿಟ್ಟಿದ್ದ ಚಲನಚಿತ್ರ ನಿರ್ಮಾಪಕರ ಜೊತೆಗಿನ ಕೆಟ್ಟ ಅನುಭವವನ್ನು ವಿವರಿಸಿದ್ದಾರೆ. ತಾವು ನಟಿಸುತ್ತಿದ್ದ ಚಿತ್ರವು ಶೂಟಿಂಗ್ ಪ್ರಕ್ರಿಯೆಯಲ್ಲಿತ್ತು ಮತ್ತು ಅರ್ಧದಷ್ಟು ಪೂರ್ಣಗೊಂಡಿತ್ತು ಎಂದು ನಟಿ ಹೇಳಿದ್ದಾರೆ.

"ಈ ವೇಳೆ ನಾನು ನಿರಾಕರಿಸಿದಾಗ, ನನ್ನನ್ನು ಚಿತ್ರದಿಂದ ಹೊರ ಹಾಕಬೇಕು ಎಂದು ಸಹ ನಿರ್ಮಾಪಕರು ನಿರ್ದೇಶಕರಿಗೆ ಹೇಳಿದ್ದರು. ಇದಾದ ನಂತರ, ಕೆಲವು ಸಿನಿಮಾ ತಯಾರಕರು ನನ್ನನ್ನು ತಮ್ಮ ಚಲನಚಿತ್ರಗಳಲ್ಲಿ ತೆಗೆದುಕೊಳ್ಳಲು ನಿರಾಕರಿಸಿದರು. ನಾನು ಅವರಿಗಾಗಿ ಏನನ್ನೂ ಮಾಡದಿದ್ದರೆ ನನ್ನನ್ನು ಚಿತ್ರದಲ್ಲಿ ತೆಗೆದುಕೊಂಡು ಏನು ಪ್ರಯೋಜನ ಎಂದು ನನ್ನ ಬಗ್ಗೆ ಜನ ಮಾತನಾಡುತ್ತಿದ್ದರು" ಎಂದು ಹೇಳಿದ್ದಾರೆ.

actress-esha-gupta

ಹೊರಾಂಗಣದಲ್ಲಿ ಶೂಟಿಂಗ್ ನಡೆಯುತ್ತಿದ್ದ ವೇಳೆ ಮತ್ತೊಂದು ಘಟನೆಯನ್ನು ಹಂಚಿಕೊಂಡಿರುವ ಅವರು ಇಬ್ಬರು ಸಿನಿಮಾ ತಯಾರಕರು ಆಕೆಯನ್ನು ಕಾಸ್ಟಿಂಗ್ ಕೌಚ್‌ನಲ್ಲಿ ಸಿಲುಕಿಸಲು ಹೇಗೆ ಪ್ರಯತ್ನಿಸಿದ್ದರು ಎಂಬುದನ್ನು ತಿಳಿಸಿದ್ದಾರೆ. "ನಾನು ನಟಿಸುತ್ತಿದ್ದ ಸಿನಿಮಾದ ಚಿತ್ರೀಕರಣ ಹೊರಾಂಗಣದಲ್ಲಿ ನಡೆಯುತ್ತಿದ್ದಾಗ ನಿರ್ಮಾಪಕರ ಕಡೆಯವರು ಬೇರೆ ಹೋಟೆಲ್​ನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದರು. ನನ್ನ ರೂಮಿನಲ್ಲಿ ನಾನೊಬ್ಬಳೇ ಇರುವಂತೆ ಮಾಡಿದ್ದರು. ಆದರೆ ನಾನು ಒಬ್ಬಂಟಿಯಾಗಿ ಮಲಗಲು ಹೋಗಲಿಲ್ಲ. ನನ್ನ ಮೇಕಪ್​ ಮ್ಯಾನ್ ಅನ್ನು ನನ್ನ ಕೋಣೆಯಲ್ಲಿ ಮಲಗಲು ಕರೆದುಕೊಂಡೆ. ಇದರಿಂದ ಅವರು ತಮ್ಮ ಪ್ಲ್ಯಾನ್ ಬಿಟ್ಟುಬಿಟ್ಟರು" ಎಂದು ಇಶಾ ಗುಪ್ತಾ ಹೇಳಿದ್ದಾರೆ.

ಇಶಾ ಗುಪ್ತಾ

ನಟಿ ಇಶಾ ಗುಪ್ತಾ ಅವರು ಇಮ್ರಾನ್ ಹಶ್ಮಿ ಅಭಿನಯದ ಜನ್ನತ್ 2 ಸಿನಿಮಾದಿಂದ ತಮ್ಮ ನಟನೆಯನ್ನು ಪ್ರಾರಂಭಿಸಿದರು. ಅವರು ಬಾಬಿ ಡಿಯೋಲ್ ಜೊತೆಗೆ ಆಶ್ರಮ್ ವೆಬ್ ಸರಣಿಯಲ್ಲಿ ಇತ್ತೀಚಿಗೆ ಅಭಿನಯಯಿಸಿದ್ದರು. ಇದಾದ ನಂತರ ದೇಸಿ ಮ್ಯಾಜಿಕ್ ಮತ್ತು ಹೇರಾ ಫೆರಿ 3 ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

More from Filmibeat

English summary
Actress Esha Gupta shares her shocking casting couch experience.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X