ನನ್ನ ಖಾಸಗಿ ಭಾಗಕ್ಕೆ ಹೊಡೆಯುತ್ತಿದ್ದ: ಬಾಯ್‌ಫ್ರೆಂಡ್ ನೀಡಿದ ಚಿತ್ರಹಿಂಸೆ ಬಿಚ್ಚಿಟ್ಟ 'ನಮ್ಮಣ್ಣ' ನಾಯಕಿ

By ಫಿಲ್ಮಿಬೀಟ್ ಡೆಸ್ಕ್

ಸುದೀಪ್ ನಟನೆಯ 'ನಮ್ಮಣ್ಣ', ರವಿಚಂದ್ರನ್-ಶಿವರಾಜ್ ಕುಮಾರ್ ನಟನೆಯ 'ಕೋದಂಡರಾಮ' ಸೇರಿದಂತೆ ಇನ್ನೂ ಕೆಲವು ಕನ್ನಡ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದ ನಟಿ ಫ್ಲೋರಾ ಸೈನಿ ಅಲಿಯಾಸ್ ಆಶಾ ಸೈನಿ, ಬಾಯ್‌ಫ್ರೆಂಡ್‌ನಿಂದ ತಾವು ಅನುಭವಿಸಿದ ಚಿತ್ರಹಿಂಸೆಯನ್ನು ಇದೀಗ ತೆರೆದಿಟ್ಟಿದ್ದಾರೆ.

ಬಾಲಿವುಡ್ ಮಾತ್ರವೇ ಅಲ್ಲದೆ ನೆರೆಯ ತೆಲುಗು ಚಿತ್ರರಂಗದಲ್ಲಿ ಸ್ಟಾರ್ ನಟರುಗಳೊಟ್ಟಿಗೆ ತೆರೆ ಹಂಚಿಕೊಂಡಿರುವ ಒಂದು ಕಾಲದ ಸ್ಟಾರ್ ನಟಿ ಫ್ಲೊರಾ ಸೈನಿ ವೃತ್ತಿ ಬದುಕಿನಲ್ಲಿ ಯಶಸ್ಸನ್ನು ಕಂಡರಾದರೂ ಖಾಸಗಿ ಜೀವನದಲ್ಲಿ ಸಾಕಷ್ಟು ನೋವು, ಹಿಂಸೆ ಅನುಭವಿಸಿದ್ದಾರೆ. ಆ ನೋವಿನ ಕತೆಯನ್ನು ಇದೀಗ ಬಹಿರಂಗವಾಗಿ ಹಂಚಿಕೊಂಡಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ತಮ್ಮದೇ ಚಿತ್ರಗುಳ್ಳ ವಿಡಿಯೋ ಹಂಚಿಕೊಂಡಿರುವ ನಟಿ ಫ್ಲೋರಾ ಸೈನಿ, ಚಿತ್ರಗಳ ಜೊತೆ ತಮ್ಮ ಜೀವನದ ಕತೆಯನ್ನೂ ಸಹ ಚುಟುಕಾಗಿ ಬರೆದು ಹಂಚಿಕೊಂಡಿದ್ದಾರೆ.

ಸಣ್ಣ ವಯಸ್ಸಿನಲ್ಲೇ ಯಶಸ್ಸು ಪಡೆದ ಫ್ಲೋರಾ

ಸಣ್ಣ ವಯಸ್ಸಿನಲ್ಲೇ ಯಶಸ್ಸು ಪಡೆದ ಫ್ಲೋರಾ

''ಬಹಳ ಸಣ್ಣ ವಯಸ್ಸಿನಲ್ಲಿಯೇ ದೊಡ್ಡ ಯಶಸ್ಸನ್ನು ನಾನು ಕಂಡೆ. 20 ರ ವಯಸ್ಸಿನಲ್ಲಿಯೇ ನಾನು ಹತ್ತು ಸಿನಿಮಾಗಳಲ್ಲಿ ನಟಿಸಿದ್ದೆ, 20 ಕ್ಕೂ ಹೆಚ್ಚು ಟಾಪ್ ಡಿಸೈನರ್‌ಗಳಿಗಾಗಿ ಮಾಡೆಲಿಂಗ್ ಮಾಡಿದ್ದೆ. ಆ ಬಳಿಕ ನಾನು ಪ್ರೀತಿಯಲ್ಲಿ ಬಿದ್ದೆ, ಜನಪ್ರಿಯ ನಿರ್ಮಾಪಕನೊಬ್ಬನನ್ನು ನಾನು ಪ್ರೀತಿಸಿದೆ ಆ ನಂತರ ನನ್ನ ಜೀವನವೇ ಬದಲಾಗಿ ಬಿಟ್ಟಿತು'' ಎಂದು ಫ್ಲೋರಾ ಸೈನಿ ಬರೆದುಕೊಂಡಿದ್ದಾರೆ.

ಮರ್ಮಾಂಗಕ್ಕೆ ಗುದ್ದುತ್ತಿದ್ದ: ಫ್ಲೋರಾ ಸೈನಿ

ಮರ್ಮಾಂಗಕ್ಕೆ ಗುದ್ದುತ್ತಿದ್ದ: ಫ್ಲೋರಾ ಸೈನಿ

''ಆತ ಕ್ರೂರಿಯೆಂಬುದು ಗೊತ್ತಾಯಿತು. ನನ್ನ ಮುಖವನ್ನು ಬಾಕ್ಸಿಂಗ್ ಬ್ಯಾಗ್‌ನಂತೆ ಬಳಸುತ್ತಿದ್ದ. ನನ್ನ ಖಾಸಗಿ ಅಂಗಗಳಿಗೆ ಗುದ್ದುತ್ತಿದ್ದ. ನನ್ನ ಫೋನ್ ಅನ್ನು ಎತ್ತಿಟ್ಟುಕೊಂಡು ನಾನು ಸಿನಿಮಾಗಳಲ್ಲಿ ನಟಿಸದಂತೆ ತಡೆದ. ಹದಿನಾಲ್ಕು ತಿಂಗಳು ನಾನು ಯಾರನ್ನೂ ಭೇಟಿಯಾಗದಂತೆ, ಯಾರೊಂದಿಗೂ ಮಾತನಾಡದಂತೆ ತಡೆದ. ಕೊನೆಗೆ ಒಂದು ದಿನ ಆತ ನನ್ನ ಹೊಟ್ಟೆಗೆ ಒದ್ದ ಆ ದಿನ ನಾನು ಮನೆ ಬಿಟ್ಟು ಓಡಿಹೋದೆ'' ಎಂದು ಕರಾಳ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. ಆತನಿಂದ ಹೊಡೆತ ತಿಂದು ಜರ್ಜರಿತವಾದ ತಮ್ಮ ಮುಖದ ಚಿತ್ರವನ್ನೂ ಸಹ ಫ್ಲೋರಾ ಹಂಚಿಕೊಂಡಿದ್ದಾರೆ.

ಈಗ ಮತ್ತೆ ಪ್ರೀತಿಯನ್ನು ಹುಡುಕಿಕೊಂಡಿದ್ದೇನೆ: ಫ್ಲೋರಾ

ಈಗ ಮತ್ತೆ ಪ್ರೀತಿಯನ್ನು ಹುಡುಕಿಕೊಂಡಿದ್ದೇನೆ: ಫ್ಲೋರಾ

''ನಾನು ನನ್ನ ಅಪ್ಪ-ಅಮ್ಮನೊಟ್ಟಿಗೆ ಇರಲು ಪ್ರಾರಂಭಿಸಿದೆ. ನನ್ನ ದೈಹಿಕ, ಮಾನಸಿಕ ಆರೋಗ್ಯ ಸರಿಹೋಗಲು ನನಗೆ ತಿಂಗಳುಗಳೇ ಹಿಡಿದವು. ನಿಧಾನಕ್ಕೆ ನಾನು ಸರಿಹೋದೆ, ನಾನು ಬಹಳ ಇಷ್ಟಪಡುತ್ತಿದ್ದ ನಟನೆಗೆ ನಾನು ಮರಳಿದೆ. ಸ್ವಲ್ಪ ಸಮಯ ಹಿಡಿಯಿತು ಆದರೆ ನಾನೀಗ ಸಂತೋಶದಿಂದ್ದೇನೆ, ನನಗೆ ಪ್ರೀತಿಯು ಸಿಕ್ಕಿದೆ. ಎಷ್ಟೇ ಕತ್ತಲು ನಿಮ್ಮನ್ನು ಆವರಿಸಿದರೂ, ಕೊನೆಯಲ್ಲಿ ಬೆಳಕು ಸಿಕ್ಕೇ ಸಿಗುತ್ತದೆ'' ಎಂದಿದ್ದಾರೆ ನಟಿ ಫ್ಲೋರಾ ಸೈನಿ.

ನಿರ್ಮಾಪಕ ಗೌರಂಗ್ ದೋಷಿ ಜೊತೆ ಲವ್ ಲೈಫ್

ನಿರ್ಮಾಪಕ ಗೌರಂಗ್ ದೋಷಿ ಜೊತೆ ಲವ್ ಲೈಫ್

ಫ್ಲೋರಾ ಸೈನಿ, ಬಾಲಿವುಡ್‌ನ ಜನಪ್ರಿಯ ನಿರ್ಮಾಪಕ ಗೌರಂಗ್ ದೋಷಿ ಜೊತೆ ಪ್ರೀತಿಯಲ್ಲಿದ್ದರು. ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಅವರು ಗೌರಂಗ್ ದೋಷಿಯ ಹೆಸರು ಬಳಸಿಲ್ಲ. ಫ್ಲೋರಾ ಸೈನಿ 1999 ರಲ್ಲಿ ತೆಲುಗಿನ 'ಪ್ರೇಮ ಕೋಸಂ' ಹೆಸರಿನ ತೆಲುಗು ಸಿನಿಮಾದಿಂದ ನಟನೆಗೆ ಪದಾರ್ಪಣೆ ಮಾಡಿದರು. ಬಳಿಕ ಬಾಲಕೃಷ್ಣ, ವೆಂಕಟೇಶ್, ಶ್ರೀಕಾಂತ್ ಸೇರಿದಂತೆ ಹಲವು ಸ್ಟಾರ್ ನಟರೊಟ್ಟಿಗೆ ನಟಿಸಿದರು. ಕನ್ನಡದಲ್ಲಿಯೂ ಸುದೀಪ್ ನಟನೆಯ 'ನಮ್ಮಣ್ಣ', ರವಿಚಂದ್ರನ್-ಶಿವಣ್ಣ ನಟನೆಯ 'ಕೋದಂಡರಾಮ', 'ಗಿರಿ', 'ಧಿಮಾಕು', 'ವಿಸ್ಮಯ ಪ್ರಮೇಯ', 'ವಾಹ್ ರೆ ವಾಹ್', 'ಸಿಐಡಿ ಈಶಾ' ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಹಿಂದಿ ಸಿನಿಮಾಗಳು ಹಾಗೂ ವೆಬ್ ಸರಣಿಗಳಲ್ಲಿ ಫ್ಲೋರಾ ನಟಿಸುತ್ತಿದ್ದಾರೆ.

More from Filmibeat

English summary
Multi language actress Flora Saini opened up on her 14 month toxic relationship with famous producer. She said no she find love.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X