ಅಶ್ಲೀಲ ವಿಡಿಯೋ ಚಿತ್ರೀಕರಿಸಿ ಲಕ್ಷಾಂತರ ಗಳಿಸಿದ್ದ ನಟಿಯ ಬಂಧನ
ಅಶ್ಲೀಲ ವಿಡಿಯೋಗಳನ್ನು ಚಿತ್ರಿಸಿ ಸಾಮಾಜಿಕ ಜಾಲತಾಣಗಳಲ್ಲಿ, ವೆಬ್‌ಸೈಟ್‌ಗಳಲ್ಲಿ ಹಂಚಿಕೊಳ್ಳುತ್ತಿದ್ದ ನಟಿ ಗೆಹಾನಾ ವಶಿಷ್ಠ ಹಾಗೂ ಆಕೆಯ ಸಹಾಯಕನನ್ನು ಪೊಲೀಸರು ಬಂಧಿಸಿದ್ದಾರೆ. ನಟಿಯು ಹಿಂದಿಯ ಕೆಲವು ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ಸಹ ನಟಿಸಿದ್ದಾಳೆ.
ಈ ನಟಿಯು, ತನ್ನ ಸಹಾಯಕನೊಂದಿಗೆ ಸೇರಿಕೊಂಡು ಕೆಲವು ನಟಿಯರ ಅಶ್ಲೀಲ ವಿಡಿಯೋಗಳನ್ನು ಚಿತ್ರಿಸಿ ವೆಬ್‌ಸೈಟ್‌ಗಳಲ್ಲಿ ಅಪ್‌ಲೋಡ್ ಮಾಡುತ್ತಿದ್ದಳು. ಸಾಮಾಜಿಕ ಜಾಲತಾಣದಲ್ಲಿಯೂ ಅಪ್‌ಲೋಡ್ ಮಾಡುತ್ತಿದ್ದರು. ಈ ಲಕ್ಷಾಂತರ ಹಣ ಗಳಿಸಿದ್ದಳು.
ಮುಂಬೈ ಪೊಲೀಸರು ಈ ನಟಿಯನ್ನು ಬಂಧಿಸಿದ್ದು, ಫೇಬ್ರವರಿ 10 ರವರೆಗೆ ಗೆಹಾನಾ ಅನ್ನು ಪೊಲೀಸರ ವಶಕ್ಕೆ ನೀಡಿ ನ್ಯಾಯಾಲಯವು ಆದೇಶ ನೀಡಿದೆ. ಈ ನಟಿಯು ನೀಲಿ ಚಿತ್ರಗಳ ಜಾಲವನ್ನು ನಡೆಸುತ್ತಿರುವ ಬಗ್ಗೆ ಪೊಲೀಸರು ಗುಮಾನಿ ವ್ಯಕ್ತಪಡಿಸಿದ್ದಾರೆ.

ಅಶ್ಲೀಲ ವಿಡಿಯೋ ಚಿತ್ರೀಕರಿಸಿಕೊಳ್ಳುತ್ತಿದ್ದ ನಟಿ
ಗೆಹಾನಾ ಳ ಮೂಲ ಹೆಸರು ವಂದನಾ ತಿವಾರಿ ಆಗಿದ್ದು, ಸಿನಿಮಾ ನಟಿಯಾಗಬೇಕೆಂಬ ಆಸೆಹೊತ್ತು ಬರುವ ನಟಿಯರನ್ನು ಬಳಸಿಕೊಂಡು ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿಕೊಳ್ಳುತ್ತಿದ್ದ ಈಕೆ, ನಟಿಯರಿಗೆ 15 ರಿಂದ 20 ಸಾವಿರ ಹಣ ನೀಡುತ್ತಿದ್ದರಂತೆ.

36 ಲಕ್ಷ ಹಣ ಗಳಿಸಿದ್ದ ನಟಿ ಗೆಹಾನಾ
ಈಕೆಯೇ ಒಂದು ವೆಬ್‌ಸೈಟ್ ಆರಂಭಿಸಿ, ವೆಬ್‌ಸೈಟ್‌ನಲ್ಲಿ ಈಕೆ ಅಪ್‌ಲೋಡ್ ಮಾಡುವ ವಿಡಿಯೋಗಳನ್ನು ನೋಡಲು ವೀಕ್ಷಕರು ಹಣ ಪಾವತಿಸಿ ವೆಬ್‌ಸೈಟ್‌ಗೆ ಚಂದಾದಾರಾಗಬೇಕಿತ್ತು. ಹೀಗೆ ವೆಬ್‌ಸೈಟ್‌ನಿಂದಲೇ 36 ಲಕ್ಷ ಹಣ ಗಳಿಸಿದ್ದಳಂತೆ ಗೆಹಾನಾ.

ವಿದೇಶದಿಂದ ವೆಬ್‌ಸೈಟ್‌ಗೆ ವಿಡಿಯೋ ಅಪ್‌ಲೋಡ್
ಬಹಳ ವ್ಯವಸ್ಥಿತವಾಗಿ ಈ ವ್ಯವಹಾರ ನಡೆಸುತ್ತಿದ್ದ ಗೆಹಾನಾ ಗೆ ಒಬ್ಬ ಸಹಾಯಕನೂ ಇದ್ದ. ಗೆಹಾನಾ ಚಿತ್ರೀಕರಿಸಿದ ವಿಡಿಯೋಗಳನ್ನು ಆತನಿಗೆ ಕಳಿಹಿಸಿದರೆ. ಆತ ವಿದೇಶಿ ಸಂಸ್ಥೆಗಳೊಂದಿಗೆ ಸಂವಹನ ನಡೆಸಿ, ವಿದೇಶಿ ಐಪಿ ಅಡ್ರೆಸ್‌ನಿಂದ ಆ ವಿಡಿಯೋಗಳನ್ನು ವೆಬ್‌ಸೈಟ್ ಗೆ ಅಪ್‌ಲೋಡ್ ಮಾಡಿಸುತ್ತಿದ್ದ.
Recommended Video

ವೆಬ್ ಸೀರೀಸ್‌ನಲ್ಲಿ ಅವಕಾಶ ಕೊಡಿಸುವುದಾಗಿ ವಂಚನೆ
ವೆಬ್ ಸೀರೀಸ್‌ನಲ್ಲಿ ನಟಿಸಲು ಅವಕಾಶ ಕೊಡಿಸುತ್ತೇನೆ ಎಂದು ಹೇಳಿ ಕೆಲವು ನಟಿಯರಿಂದ ಹೀಗೆ ಅಶ್ಲೀಲ ವಿಡಿಯೋ ಚಿತ್ರೀಕರಿಸಿಕೊಂಡಿದ್ದಳಂತೆ ಗೆಹಾನಾ. ಈಕೆಯಿಂದ ಮೋಸಹೋದ ನಾಲ್ಕು ನಟಿಯರು ಮುಂಬೈ ಪೊಲೀಸರಿಗೆ ದೂರು ನೀಡಿದ್ದರು. ಅದರ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು ಗೆಹಾನಾ ಹಾಗೂ ಆಕೆಯ ಸಹಾಯಕನನ್ನು ಬಂಧಿಸಿದ್ದಾರೆ.


Click it and Unblock the Notifications











