ಅವರು ಯಾವತ್ತೂ ನನಗೆ ಬಲವಂತ ಮಾಡಿಲ್ಲ: ರಾಜ್ ಕುಂದ್ರ ಪರನಿಂತ ಗೆಹನಾ

ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ಜೈಲು ಸೇರಿರುವ ಬಾಲಿವುಡ್ ಖ್ಯಾತ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರ ಪರ ಖ್ಯಾತ ಮಾಡೆಲ್ ಗೆಹನಾ ವಸಿಸ್ತ್ ಬ್ಯಾಟಿಂಗ್ ಮಾಡಿದ್ದಾರೆ. ಈ ಬಗ್ಗೆ ಗಾಂಧಿ ಬಾತ್ ನಟಿ ಹೇಳಿಕೆ ಬಿಡುಗಡೆ ಮಾಡಿದ್ದು, ಪೋರ್ನ್ ವಿಡಿಯೋನೆ ಬೇರೆ ಎರೋಟಿಕಾ ವಿಡಿಯೋಗಳೇ ಬೇರೆ ಎರಡನ್ನು ಒಂದೇ ಎಂದು ಸೇರಿಸಬೇಡಿ ಎಂದು ಗೆಹನಾ ವಿನಂತಿ ಮಾಡಿದ್ದಾರೆ.

Recommended Video

ಶಿಲ್ಪಾ ಶೆಟ್ಟಿ ಪತಿ ವಿರುದ್ಧ ಆಘಾತಕಾರಿ ವಿಷಯಗಳನ್ನು ಬಿಚ್ಚಿಟ್ಟ ಪೂನಂ ಪಾಂಡೆ

ರಾಜ್ ಕುಂದ್ರ ವಿವಾದದ ಬಗ್ಗೆ ಮೌನ ಮುರಿದಿರುವ ಗೆಹನಾ, "ಪ್ರತಿಯೊಬ್ಬರಲ್ಲೂ ನಾನು ಚಿಕ್ಕ ವಿನಂತಿ ಮಾಡಿಕೊಳ್ಳುತ್ತೇನೆ. ಬೋಲ್ಡ್ ಮತ್ತು ಎರೋಟಿಕಾ ಸಿನಿಮಾಗಳನ್ನು ಪೋರ್ನ್ ಸಿನಿಮಾಗಳಿಗೆ ಹೋಲಿಸಬೇಡಿ. ರಾಜ್ ಕುಂದ್ರ ಮತ್ತು ನನ್ನನ್ನು ಒಂದೇ ಪ್ರಕರಣದಲ್ಲಿ ಬಂಧಿಸಲಾಗಿದೆ. ಒಂದೇ ತನಿಖೆ ನಡೆಯುತ್ತಿದೆ. ರಾಜ್ ಕುಂದ್ರ ಕಂಪೆನಿಯಲ್ಲಿ ಏನು ಮಾಡುತ್ತಾರೆ ಎನ್ನುವುದು ನನಗೆ ಗೊತ್ತಿದೆ. ರಾಜ್ ಕುಂದ್ರ ನಿರ್ಮಿಸಿದ ಆಪ್ ಗಳಲ್ಲಿ ಮೂರು ಚಿತ್ರಗಳಲ್ಲಿ ನಾನು ನಟಿಸಿದ್ದೇನೆ. ಅವರು ಎಂದಿಗೂ ನನಗೆ ಇದನ್ನೆ ಮಾಡಿ ಎಂದು ಒತ್ತಾಯ ಮಾಡಿಲ್ಲ. ನಾನು ಮಾಡಿದ ಕೆಲಸದ ಪ್ರಕಾರ ನನಗೆ ಸಂಬಳ ನೀಡಲಾಗಿದೆ" ಎಂದು ಹೇಳಿದ್ದಾರೆ.

ನನ್ನ ಕೆಲಸ ಮತ್ತು ನಾನು ಪಡೆದ ಸಂಬಳ ಬಗ್ಗೆ ಯಾವುದೇ ಸಮಸ್ಯೆ ಇಲ್ಲ. ಇಲ್ಲಿಯ ವಿಷಯಗಳ ಬಗ್ಗೆ ಆಕ್ಷೇಪವಿಲ್ಲ. ಸೆಟ್ ನಲ್ಲಿ ಕೆಲಸಮಾಡುವಾಗ ಯಾವುದೆ ಕೆಟ್ಟ ಅನುಭವವೂ ನನಗೆ ಇರಲಿಲ್ಲ. ಆ ಚಿತ್ರಗಳು ಚೆನ್ನಾಗಿಯೇ ಬಿಡುಗಡೆಯಾದವು. ಆದರೆ ಅವು ಪೋರ್ನ್ ಸಿನಿಮಾಗಳಲ್ಲ. ಅನುಮಾನವಿದ್ದರೆ ಗೂಗಲ್ ನಲ್ಲಿ ಹುಡುಕಬಹುದು. ಮತ್ತು ನನ್ನ ಇತರ ಕೆಲಸಗಳನ್ನು ನೋಡಬಹುದು" ಎಂದು ಹೇಳಿದ್ದಾರೆ.

Actress Gehana Vasisth reacts to Raj kundra Arrest

ಇದೇ ಪ್ರಕರಣದಲ್ಲಿ ನಟಿ, ಮಾಡೆಲ್ ಗೆಹನಾ ಅವರನ್ನು ಫೆಬ್ರವರಿಯಲ್ಲಿ ಬಂಧಿಸಲಾಗಿತ್ತು. ಐದು ತಿಂಗಳ ಕಾಲ ಜೈಲಿನಲ್ಲೇ ಕಳೆದಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಗೆಹನಾ, "ನಾನು ಮಾಡದ ಅಪರಾಧಕ್ಕೆ ಅಮೂಲ್ಯವಾದ ಐದು ತಿಂಗಳು ಜೈಲಿನಲ್ಲಿ ಕಳೆದೆ. ನನ್ನ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ. ನನ್ನ ಮೊಬೈಲ್, ಲ್ಯಾಪ್ ಟ್ಯಾಪ್ ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ನನ್ನ ಜೀವನವನ್ನು ನರಕಕ್ಕೆ ತಳ್ಳಲಾಗಿದೆ. ನಾನು ಜೈಲಿನಿಂದ ಹೊರಬಂದ ಬಳಿಕ ನನ್ನ ಬಳಿ ಹಣವಿರಲಿಲ್ಲ. ನಾನು ಹೃದಯಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದೇನೆ. ನಾನು ಆಸ್ಪತ್ರೆಗೂ ದಾಖಲಾಗಿದ್ದೆ" ಎಂದು ತನ್ನ ಅಳಲು ತೋಡಿಕೊಂಡಿದ್ದಾರೆ.

More from Filmibeat

English summary
Actress Gehana Vasisth reacts to Raj kundra Arrest. She Says never forced me to do anything.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X