For Quick Alerts
  ALLOW NOTIFICATIONS  
  For Daily Alerts

  ರಾಜ್ ಕುಂದ್ರಾ ಬಂಧನ: ಅಸಲಿ ವಿಷಯ ಬಿಚ್ಚಿಟ್ಟ ನಟಿ ಗೆಹನಾ

  |

  ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಬಂಧನ ಬಾಲಿವುಡ್‌ನ ಬಹು ಚರ್ಚಿತ ವಿಷಯ. ಹಲವರು ಹಲವು ರೀತಿಯ ಹೇಳಿಕೆಗಳನ್ನು ರಾಜ್ ಕುಂದ್ರಾ ಪ್ರಕರಣದಲ್ಲಿ ನೀಡುತ್ತಿದ್ದಾರೆ. ಬಂಧನದ ಕುರಿತು ಅನುಮಾನಗಳನ್ನು ಸಹ ಕೆಲವರು ವ್ಯಕ್ತಪಡಿಸಿದ್ದಾರೆ.

  ಮುಂಬೈ ಪೊಲೀಸರೇ ಹೇಳಿರುವಂತೆ ಫೆಬ್ರವರಿಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ ಕುಂದ್ರಾ ಬಂಧನವಾಗಿದೆ. ಫೆಬ್ರವರಿಯಲ್ಲಿ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲಿಗೆ ನಟಿ, ನಿರ್ದೇಶಕಿ ಗೆಹನಾ ವಸಿಷ್ಠ ಎಂಬುವರನ್ನು ಬಂಧಿಸಲಾಗಿತ್ತು.

  ಅದೇ ಗೆಹನಾ ವಸಿಷ್ಠಿ ಪ್ರಕರಣದ ಬಗ್ಗೆ ಹಾಗೂ ರಾಜ್ ಕುಂದ್ರಾಗೂ ಅವರಿಗೂ ಇರುವ ಸಂಬಂಧ. ಅಶ್ಲೀಲ ವಿಡಿಯೋ ಪ್ರಕರಣ, ತಾವು ರಾಜ್ ಕುಂದ್ರಾ ಸಂಸ್ಥೆಗಾಗಿ ಮಾಡಿ ಕೊಡುತ್ತಿದ್ದ ವಿಡಿಯೋ ಎಲ್ಲದರ ಬಗ್ಗೆ ವಿವರವಾಗಿ ಮಾತನಾಡಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ಕಳೆದ ವರ್ಷದ ಅಕ್ಟೋಬರ್ ವೇಳೆಗೆ ನನಗೆ ರಾಜ್‌ಕುಂದ್ರಾ ಮ್ಯಾನೇಜರ್‌ನಿಂದ ಕರೆ ಬಂತು. ನಿಮ್ಮ ವೈಯಕ್ತಿಕ ಆಪ್‌ ಮಾಡಿಕೊಡುತ್ತೇವೆ. ಈಗಾಗಲೇ ಶೆರ್ಲಿನ್, ಪೂನಂ ಪಾಂಡೆಗೆ ಮಾಡಿಕೊಟ್ಟಿದ್ದೇವೆ. ನೀವು ಒಂದು ಆಪ್‌ ಮಾಡಿಕೊಳ್ಳಿ. ನಿಮಗೆ ಒಪ್ಪಿಗೆಯಾಗುವ ಕಂಟೆಂಟ್ ಅನ್ನೇ ನೀವು ಹಾಕಿರಿ. ಬಂದ ಹಣವನ್ನು ಹಂಚಿಕೊಳ್ಳೋಣ ಎಂದರು. ರಾಜ್ ಅನ್ನು ಸಹ ನಾನು ಭೇಟಿಯಾದೆ, ಅವರು ಸಹ ನಿಮಗೆ ಸರಿ ಎನಿಸುವ ವಿಡಿಯೋಗಳನ್ನಷ್ಟೆ ಹಾಕಿರಿ, ಗ್ಲಾಮರಸ್ ಆಗಿಯೇ ಇರಬೇಕೆಂಬ ಒತ್ತಡ ಇಲ್ಲ ಎಂದಿದ್ದರು'' ಎಂದು ಮಾಹಿತಿ ನೀಡಿದ್ದಾರೆ ಗೆಹನಾ.

  ಜನವರಿ ವರೆಗೆ ಆಪ್‌ ನಡೆಸಿ ನಂತರ ಬಂದ್ ಮಾಡಿದೆ: ಗೆಹನಾ

  ಜನವರಿ ವರೆಗೆ ಆಪ್‌ ನಡೆಸಿ ನಂತರ ಬಂದ್ ಮಾಡಿದೆ: ಗೆಹನಾ

  ''ನಾನು ಜನವರಿ ವರೆಗೆ ಆಪ್‌ ನಡೆಸಿದೆ ನಂತರ ಅದನ್ನು ಬಂದ್ ಮಾಡಿದೆ. ಆ ನಂತರ ಮತ್ತೆ ಅವರು ನನ್ನನ್ನು ಸಂಪರ್ಕಿಸಿ 'ಹಾಟ್‌ಶಾಟ್ಸ್‌' ಆಪ್‌ಗಾಗಿ ಸಿನಿಮಾ ಒಂದನ್ನು ಮಾಡಿಕೊಡಲು ಕೇಳಿದರು. ಅಂತೆಯೇ ನಾನು ಒಪ್ಪಿಕೊಂಡು ಸಿನಿಮಾ ಮಾಡುತ್ತಿದ್ದೆ. ನಟ-ನಟಿಯರ ವಿಷಯವನ್ನು ನಮ್ಮ ಮ್ಯಾನೇಜರ್ ನೋಡಿಕೊಳ್ಳುತ್ತಿದ್ದರು. ಶೂಟ್ ಸಹ ಚೆನ್ನಾಗಿಯೇ ನಡೆಯುತ್ತಿತ್ತು'' ಎಂದು ವಿಷಯ ತೆರೆದಿಟ್ಟಿದ್ದಾರೆ.

  ರಾಜ್ ಕುಂದ್ರಾ ವಿರುದ್ಧ ಹೇಳಿಕೆ ನೀಡಲು ಒತ್ತಡ: ಗೆಹನಾ

  ರಾಜ್ ಕುಂದ್ರಾ ವಿರುದ್ಧ ಹೇಳಿಕೆ ನೀಡಲು ಒತ್ತಡ: ಗೆಹನಾ

  ''ಆದರೆ ಫೆಬ್ರವರಿಯಲ್ಲಿ ಏಕಾ-ಏಕಿ ನಮ್ಮ ಸೆಟ್‌ ಮೇಲೆ ಪೊಲೀಸರು ದಾಳಿ ನಡೆಸಿ ಕೆಲವರನ್ನು ಬಂಧಿಸಿದರು. ಆಗ ನಾನು ಸೆಟ್‌ನಲ್ಲಿ ಇರಲಿಲ್ಲ. ನಂತರ ನನ್ನ ಮನೆಗೂ ಬಂದು ವಾರೆಂಟ್ ಇಲ್ಲದೆ ಮನೆಯನ್ನೆಲ್ಲ ಹುಡುಕಿ ಮೊಬೈಲ್, ಲ್ಯಾಪ್‌ಟಾಪ್ ಎಲ್ಲವನ್ನೂ ಹೊತ್ತೊಯ್ದರು. ಒಂದು ದಿನ ಪೂರ್ತಿ ನನ್ನ ಮನೆಯಲ್ಲೇ ಪೊಲೀಸರು ಇದ್ದರು. ನನ್ನನ್ನು ಎರಡು ದಿನ ವಿಚಾರಣೆ ನಡೆಸಿ, ರಾಜ್ ಕುಂದ್ರಾ ಬಗ್ಗೆ ಪ್ರಶ್ನೆ ಕೇಳಿದರು. ರಾಜ್ ಕುಂದ್ರಾ ವಿರುದ್ಧ ಹೇಳಿಕೆ ನೀಡುವಂತೆ ಸಹ ಹೇಳಿದರು. ಆದರೆ ನಾನು ಒಪ್ಪಲಿಲ್ಲ'' ಎಂದಿದ್ದಾರೆ ಗೆಹನಾ. ಅಷ್ಟೇ ಅಲ್ಲದೆ, ಸಿಸಿಬಿಯವರು ಮನೆ ತಪಾಸಣೆ ನಡೆಸಿದ ಬಳಿಕ ನನ್ನ ಮನೆಯಲ್ಲಿದ್ದ 10 ಲಕ್ಷ ಮೌಲ್ಯದ ಆಭರಣಗಳು ಸಹ ಮಾಯವಾಗಿವೆ'' ಎಂದು ಆರೋಪಿಸಿದ್ದಾರೆ ಗೆಹನಾ.

  ಸಾಮೂಹಿಕ ಅತ್ಯಾಚಾರ ಆರೋಪ ಹೊರಿಸಲಾಯಿತು: ಗೆಹನಾ

  ಸಾಮೂಹಿಕ ಅತ್ಯಾಚಾರ ಆರೋಪ ಹೊರಿಸಲಾಯಿತು: ಗೆಹನಾ

  ''ನಂತರ ನನ್ನನ್ನು ಬಂಧಿಸಲಾಯಿತು. ನನ್ನ ಪೊಲೀಸ್ ಕಸ್ಟಡಿ ಅವಧಿ ಮುಗಿದ ಬಳಿಕ ನನಗೆ ಜಾಮೀನು ದೊರಕಿತು. ಆ ನಂತರ ಮತ್ತೆ ನನ್ನನ್ನು ಬೇರೆ ಠಾಣೆಯ ಪೊಲೀಸರು ಬಂಧಿಸಿದರು. ನನ್ನ ವಿರುದ್ಧ ಸಾಮೂಹಿಕ ಅತ್ಯಾಚಾರದ ಪ್ರಕರಣ ದಾಖಲಾಗಿತ್ತು. ಅತ್ಯಾಚಾರ ದೂರು ನೀಡಿದ್ದ ಮಹಿಳೆಯನ್ನು ಠಾಣೆಯಲ್ಲಿ ಭೇಟಿಯಾದೆ. 'ಸಾಮೂಹಿಕ ಅತ್ಯಾಚಾರ ನಡೆಯುವಾಗ ನೀವು ಸುಮ್ಮನೆ ಕೂತು ನೋಡುತ್ತಿದ್ದಿರಿ'' ಎಂದು ಆಕೆ ದೂರಿದಳು' ಎಂದು ಠಾಣೆಯಲ್ಲಿ ನಡೆದ ಘಟನೆ ಬಿಚ್ಚಿಟ್ಟಿದ್ದಾರೆ ಗೆಹನಾ.

  ಆಕೆ ಕಳಿಸಿರುವ ಸಂದೇಶಗಳು ನನ್ನ ಬಳಿ ಇವೆ: ಗೆಹನಾ

  ಆಕೆ ಕಳಿಸಿರುವ ಸಂದೇಶಗಳು ನನ್ನ ಬಳಿ ಇವೆ: ಗೆಹನಾ

  ''ಆಕೆ ತನ್ನ ಮೇಲೆ ಅತ್ಯಾಚಾರ ಆಗಿದೆ ಎಂದು ಆರೋಪಿಸಿರುವ ದಿನವೇ ಆಕೆ ಸೆಟ್‌ನಲ್ಲಿ ಡಾನ್ಸ್ ಮಾಡುತ್ತಿರುವ ವಿಡಿಯೋ ನನ್ನ ಬಳಿ ಇದೆ. ಚಿತ್ರೀಕರಣದ ಸಂಭಾವನೆ ಕಳಿಸಿದ ದಾಖಲೆಗಳು ಇವೆ. ಆ ಚಿತ್ರೀಕರಣ ಆದಮೇಲೆ ಆಕೆ ಪ್ರತಿದಿನ ಸಂದೇಶ ಕಳಿಸಿ, ನನಗೆ ನಿಮ್ಮ ಇನ್ನೊಂದು ಸಿನಿಮಾದಲ್ಲಿ ಅವಕಾಶ ಕೊಡಿ ಎಂದು ಕೇಳಿರುವ ಸಂದೇಶಗಳು ಇವೆ. ಆ ಸಿನಿಮಾಕ್ಕಾಗಿ ಪ್ರೊಮೋಷನ್ ವಿಡಿಯೋ ಕೊಟ್ಟಿದ್ದಾಳೆ. ಆಕೆ ತನ್ನ ಮೇಲೆ ಅತ್ಯಾಚಾರವಾಗಿದೆ ಎಂದು ಹೇಳಿದ ದಿನದಿಂದ ಸತತವಾಗಿ ಹತ್ತು ದಿನ ಪ್ರತಿದಿನ ಒಂದೊಂದು ಟಿಕ್‌ಟಾಕ್ ವಿಡಿಯೋ ಮಾಡಿ ಹಾಕಿದ್ದಾಳೆ. ಸಾಮೂಹಿಕ ಅತ್ಯಾಚಾರವಾದ ಮಹಿಳೆಯೊಬ್ಬಳು ಇದನ್ನೆಲ್ಲ ಮಾಡುತ್ತಾಳೆಯೇ?'' ಎಂದು ಗೆಹನಾ ಪ್ರಶ್ನಿಸಿದ್ದಾರೆ.

  ''ನಾನು ತಪ್ಪು ಮಾಡಿಲ್ಲ ಹಾಗಾಗಿ ಧೈರ್ಯವಾಗಿ ನಿಮ್ಮ ಮುಂದೆ ಬಂದಿದ್ದೇನೆ''

  ''ನಾನು ತಪ್ಪು ಮಾಡಿಲ್ಲ ಹಾಗಾಗಿ ಧೈರ್ಯವಾಗಿ ನಿಮ್ಮ ಮುಂದೆ ಬಂದಿದ್ದೇನೆ''

  ''ನನ್ನ ವಿರುದ್ಧ ಯಾವುದೇ ಸಾಕ್ಷ್ಯ ಪೊಲೀಸರಿಗೆ ಸಿಗಲಿಲ್ಲ. ಅಲ್ಲದೆ ಅವರು ಹೇಳಿದಂತೆ ನಾನು ರಾಜ್ ಕುಂದ್ರಾ ವಿರುದ್ಧ ಯಾವುದೇ ಹೇಳಿಕೆ ನೀಡಲಿಲ್ಲ ಹಾಗಾಗಿ ನನ್ನನ್ನು ಪ್ರಕರಣದಲ್ಲಿ ಸಿಕ್ಕಿ ಹಾಕಿಸಲು ಈ ತಂತ್ರ ಅವರು ಬಳಸಿದರು. ಮೊದಲ ಬಾರಿಗೆ ಪೊಲೀಸರು ನನಗೆ ನೊಟೀಸ್ ಕಳಿಸಿದಾಗಲೂ ನಾನು ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಲಿಲ್ಲ. ಈಗಲೂ ಅಷ್ಟೆ, ನಾನು ತಪ್ಪು ಮಾಡಿಲ್ಲ ಹಾಗಾಗಿ ನಾನು ಧೈರ್ಯವಾಗಿದ್ದೇನೆ. ಇದನ್ನೆಲ್ಲ ನಿಮ್ಮ ಮುಂದೆ ಧೈರ್ಯದಿಂದ ಹೇಳಿಕೊಳ್ಳುತ್ತಿದ್ದೇನೆ'' ಎಂದಿದ್ದಾರೆ ನಟಿ ಗೆಹನಾ.

  English summary
  Actress Gehana Vasist talked about Raj Kundra case. She was the first to arrest in the case. She said police said her to say Raj Kundra's name.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X