'ಬೊಮ್ಮರಿಲ್ಲು' ಬ್ಯೂಟಿ ಹಾಸಿನಿ ಅಂದ ಇಂದಿಗೂ ಕಡಿಮೆ ಆಗಿಲ್ಲ

ನಾ ಪೇರು ಹಾಸನಿ (ನನ್ನ ಹೆಸರು ಹಾಸಿನಿ) ಎಂದು ಮುದ್ದು ಮುದ್ದಾಗಿ ಹೇಳಿದ್ದ ಜೆನಿಲಿಯಾಗಳನ್ನು ಇಂದಿಗೂ ಪ್ರೇಕ್ಷಕರು ಮರೆತಿಲ್ಲ. ಆ ರೀತಿ ಆಕೆಯ ಅಂದ ಕೂಡ ಇಂದಿಗೆ ಕೊಂಚವೂ ಕಡಿಮೆ ಆಗಿಲ್ಲ.

ಹೊಸ ಫೊಟೋಶೂಟ್ ಮಾಡಿಸಿರುವ ಜೆನಿಲಿಯಾ ಶನಿವಾರ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೆಲವನ್ನು ಹಂಚಿಕೊಂಡಿದ್ದಾರೆ. ಜೆನಿಲಿಯಾ ಆಗ ಹೇಗಿದ್ರೋ ಈಗಲೂ ಹಾಗೆ ಇದ್ದಾರೆ ಎಂದು ಹಲವು ಫೊಟೋಗಳಿಗೆ ಬಂದ ಸಾಮಾನ್ಯ ಪ್ರತಿಕ್ರಿಯೆಯಾಗಿದೆ.

Actress Genelia DSouza New Photoshoot

ಇನ್ಸ್ಟಾದಲ್ಲಿ ಹಂಚಿಕೊಂಡಿರುವ ಫೋಟೋಗಳಿಗೆ ಒಂದು ಮಿಲಿಯನ್ ಮೆಚ್ಚುಗೆ ಸಿಕ್ಕಿದೆ. ಫೋಟೋ ಶೂಟ್ ಸಖತ್ ಸ್ಟೈಲಿಶ್ ಆಗಿದೆ. ಅಭಿಮಾನಿಗಳಿಗೆ ಜೆನಿಲಿಯಾ ಫೊಟೋ ತುಂಬ ಇಷ್ಟ ಆಗಿದೆ.

ಜೆನಿಲಿಯಾ ಮತ್ತೆ ಚಿತ್ರರಂಗಕ್ಕೆ ಬರುತ್ತಾರೆ ಎನ್ನುವ ಸುದ್ದಿ ಇದ್ದು, ಆ ಕಾರಣಕ್ಕಾಗಿ ಫೋಟೋಶೂಟ್ ಮಾಡಿಸಿದ್ದಾರೆ ಎನ್ನುವ ಮಾತಿದೆ. ನಾಲ್ಕು ಬೇರೆ ಬೇರೆ ಪೋಸ್ ನ ಫೊಟೋಗಳನ್ನು ಶೇರ್ ಮಾಡಿದ್ದಾರೆ.

Actress Genelia DSouza New Photoshoot

32 ವರ್ಷವಾಗಿದ್ದು, ಎರಡು ಮಕ್ಕಳ ತಾಯಿಯಾಗಿರುವ ಜಿನಿಲಿಯಾ ಯಂಗ್ ಆಗಿ ಕಾಣುತ್ತಿದ್ದಾರೆ. ಅಂದಿನ ಸೌಂದರ್ಯ ಹಾಗೆಯೇ ಉಳಿದುಕೊಂಡಿದೆ. 2012 ರಲ್ಲಿ ಬಿಡುಗಡೆಯಾದ 'ನಾ ಇಷ್ಟಂ' ಚಿತ್ರದ ನಂತರ ಜೆನಿಲಿಯಾ ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿಸಿಲ್ಲ. ಕಳೆದ ವರ್ಷ ತಮ್ಮ ಪತಿ ರಿತೇಶ್ ದೇಶ್ ಮುಖ್ ನಟನೆಯ 'ಮೌಲಿ' ಎಂಬ ಸಿನಿಮಾವನ್ನು ನಿರ್ಮಾಣ ಮಾಡಿದ್ದರು.

More from Filmibeat

English summary
Actress Genelia D'souza new photoshoot.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X