Don't Miss!
- Sports
ಈ ಗೆಲುವಿನ ಹೆಚ್ಚಿನ ಶ್ರೇಯಸ್ಸು ಬೌಲರ್ಗಳಿಗೆ ಸಲ್ಲಬೇಕು: ವಾಸಿಂ ಜಾಫರ್ ಹೇಳಿಕೆ
- News
ಮಕ್ಕಳಾಗಲು ಮಾನವನ ಮೂಳೆ ಪೌಡರ್ ತಿನ್ನುವಂತೆ ಒತ್ತಾಯ, ಪ್ರಕರಣ ದಾಖಲು
- Lifestyle
ಮಗುವಿಗೆ ಗ್ಯಾಸ್ ಪ್ರಾಬ್ಲಂ ಆದಾಗ ಹೀಗೆ ಮಾಡಿ
- Automobiles
ಮತ್ತಷ್ಟು ತಡವಾಗಲಿದೆ ಹೊಸ ಹ್ಯುಂಡೈ ಕ್ರೆಟಾ ಫೇಸ್ಲಿಫ್ಟ್ ಎಸ್ಯುವಿ ಬಿಡುಗಡೆ
- Finance
NRI PAN Card: ಎನ್ಆರ್ಐ ಪ್ಯಾನ್ ಕಾರ್ಡ್ಗೆ ಆನ್ಲೈನ್ ಅರ್ಜಿ ಸಲ್ಲಿಸುವುದು ಹೇಗೆ?
- Technology
2023ರಲ್ಲಿ ಸ್ಮಾರ್ಟ್ಫೋನ್ ಖರೀದಿಸುವ ಮುನ್ನ ನೀವು ಗಮನಿಸಲೇಬೇಕಾದ ವಿಚಾರಗಳು!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಗ್ರೀಸ್ ರಸ್ತೆಗಳಲ್ಲೆಲ್ಲಾ ಕುಣಿದಾಡಿದ ಹನ್ಸಿಕಾ: 'ಬಿಂದಾಸ್' ಬೇಬಿಯ ಬ್ಯಾಚುಲರ್ ಪಾರ್ಟಿ ಬಲು ಜೋರು!
'ಬಿಂದಾಸ್' ನಟಿ ಹನ್ಸಿಕಾ ಮೊಟ್ವಾನಿ ಯಾರಿಗೆ ಗೊತ್ತಿಲ್ಲ ಹೇಳಿ. ಪುನೀತ್ ರಾಜ್ಕುಮಾರ್ ಜೊತೆ 'ಬಿಂದಾಸ್' ಸಿನಿಮಾದಲ್ಲಿ ಹೆಜ್ಜೆ ಹಾಕಿ ಕನ್ನಡಿಗರ ಮನೆಗೆದ್ದಿದ್ದ ನಟಿಯೀಕೆ. ಉತ್ತರ ಭಾರತದಿಂದ ಬಂದು ದಕ್ಷಿಣ ಭಾರತದವರೇ ಆಗಿರೋ ಹನ್ಸಿಕಾ ಮೋಟ್ವಾನಿ ಈಗ ಹಸೆಮಣೆ ಏರಲು ಸಜ್ಜಾಗಿದ್ದಾರೆ.
ಕೆಲವು ದಿನಗಳಿಂದ ಹನ್ಸಿಕಾ ಮೋಟ್ವಾನಿ ಮದುವೆ ಬಗ್ಗೆ ಸುದ್ದಿ ಹರಿದಾಡುತ್ತಲೇ ಇತ್ತು. ಈ ಬೆನ್ನಲ್ಲೇ ಕೆಲವು ದಿನಗಳ ಹಿಂದಷ್ಟೇ ಹನ್ಸಿಕಾ ವೈವಾಹಿಕ ಜೀವನಕ್ಕೆ ಕಾಲಿಡೋದು ಕನ್ಫರ್ಮ್ ಆಗಿತ್ತು. ಸೊಹೇಲ್ ಕಥುರಿಯಾ ಜೊತೆ ಹಾನ್ಸಿಕಾ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ.
ನಟಿ
ಹನ್ಸಿಕಾ
ಮೊಟ್ವಾನಿ
ಮದುವೆ
ಡಿಸ್ನಿ
ಹಾಟ್ಸ್ಟಾರ್ನಲ್ಲಿ!
ಸದ್ಯ ಹನ್ಸಿಕಾ ಗೆಳತಿಯರೊಂದಿಗೆ ಗ್ರೀಸ್ಗೆ ಹಾರಿದ್ದಾರೆ. ವಿದೇಶದಲ್ಲಿ ಮೋಜು-ಮಸ್ತಿ ಮಾಡುತ್ತಿದ್ದಾರೆ. ಅದರ ವಿಡಿಯೋ ಹಾಗೂ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಹನ್ಸಿಕಾ ಬ್ಯಾಚುಲರ್ ಪಾರ್ಟಿ ಹೇಗಿದೆ ಅನ್ನೋದನು ತಿಳಿಯಲು ಮುಂದೆ ಓದಿ.

'ಬಿಂದಾಸ್' ಬೇಬಿಯ ಬ್ಯಾಚುರಲ್ ಪಾರ್ಟಿ
ಬಹುಭಾಷಾ ನಟಿ ಹನ್ಸಿಕಾ ಮೋಟ್ವಾನಿ ತನ್ನ ಗೆಳತಿಯರಿಗೆ ದುಬಾರಿ ಬ್ಯಾಚುಲರ್ ಪಾರ್ಟಿ ನೀಡಿದ್ದಾರೆ. ಗೆಳತಿಯರೊಂದಿಗೆ ಐತಿಹಾಸ ನಗರ ಗ್ರೀಸ್ಗೆ ತೆರಳಿದ್ದು ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಿದ್ದಾರೆ. ಅದರ ವಿಡಿಯೋ ಹಾಗೂ ಫೋಟೊಗಳನ್ನು ಹನ್ಸಿಕಾ ಮೋಟ್ವಾನಿ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ "ಬೆಸ್ಟ್ ಬ್ಯಾಚ್ಯುಲರೇಟ್" ಎಂದು ಶೇರ್ ಮಾಡಿಕೊಂಡಿದ್ದಾರೆ. ಆಕೆ ಫ್ಯಾನ್ಸ್ ಈ ಫೋಟೊ ಹಾಗೂ ವಿಡಿಯೋಗಳಿಗೆ ಮೆಚ್ಚುಗೆ ಸೂಚಿಸಿ ಕಮೆಂಟ್ ಕೂಡ ಮಾಡುತ್ತಿದ್ದಾರೆ.

ಗ್ರೀಸ್ನಲ್ಲಿ ಹನ್ಸಿಕಾ ಫುಲ್ 'ಬಿಂದಾಸ್'
ಹನ್ಸಿಕಾ ಮೋಟ್ವಾನಿಯ ಗರ್ಲ್ಸ್ ಗ್ಯಾಂಗ್ ಗ್ರೀಸ್ ಬಿಂದಾಸ್ ಆಗಿ ಎಂಜಾಯ್ ಮಾಡಿದೆ. ಅವರು ಉಳಿದುಕೊಂಡಿರುವ ಹೊಟೇಲ್ನ ಸ್ವಿಮ್ಮಿಂಗ್ ಪೂಲ್ನಲ್ಲಿ ಮಸ್ತಿ ಮಾಡಿದೆ. ಹಾಗೇ ಗ್ರೀಸ್ ಸುಂದರ ರಸ್ತೆಗಳಲ್ಲಿ ಎಂದಿನಂತೆ ಬಿಂದಾಸ್ ಆಗಿ ಹನ್ಸಿಕಾ ಮೋಟ್ವಾನಿ ಓಡಾಡಿದ್ದಾರೆ, ಕುಣಿದಿದ್ದಾರೆ. ರಾತ್ರಿ ವೇಳೆ ರೆಸ್ಟೊರೆಂಟ್ನಲ್ಲಿ ಡ್ಯಾನ್ಸ್ ಮಾಡಿ ಹನ್ಸಿಕಾ ಮೋಟ್ವಾನಿ ಮದುವೆಯನ್ನು ಸೆಲೆಬ್ರೆಟ್ ಕೂಡ ಮಾಡಿದ್ದಾರೆ. ಈ ವಿಡಿಯೋವನ್ನೂ ನಟಿ ಹಂಚಿಕೊಂಡಿದ್ದು,ಅತ್ಯದ್ಭುತ ಬ್ಯಾಚುಲರ್ ಪಾರ್ಟಿ ಎಂದು ಹೇಳಿಕೊಂಡಿದ್ದಾರೆ.

ಹನ್ಸಿಕಾ ಮದುವೆ ಪ್ಯಾನ್ ಏನು?
ಇತ್ತೀಚೆಗೆ ಹನ್ಸಿಕಾ ಮೋಟ್ವಾನಿ 'ಮಾತಾ ಕಿ ಚೌಕಿ'ಯಲ್ಲಿ ಕಾಣಿಸಿಕೊಂಡಿದ್ದರು. ಇಲ್ಲಿಂದ ಆಕೆಯ ಮದುವೆ ಕಾರ್ಯಗಳನ್ನು ಆರಂಭ ಮಾಡಿದ್ದಾರೆ. ಇನ್ನುಮದುವೆ ಜೈಪುರದಲ್ಲಿ ನಡೆಯಲಿದೆ. ಆದರೆ, ಮದುವೆ ಜರ್ನಿಯನ್ನು ಮುಂಬೈನಿಂದಲೇ ಶುರು ಮಾಡಲು ಬಯಸಿದ್ದರು. ಹೀಗಾಗಿ ಮುಂದಿನ ವಾರದ ಮಾತಾ ಕಿ ಚೌಕಿಯಿಂದಲೇ ಮದುವೆಗೆ ಸಂಬಂಧಿಸಿದ ಕಾರ್ಯಗಳನ್ನು ಆರಂಭ ಮಾಡಲಿದ್ದಾರೆ ಎಂದು ಹನ್ಸಿಕಾ ಮೋಟ್ವಾನಿಯ ಆಪ್ತರು ಮಾಧ್ಯಮಗಳಿಗೆ ರಿವೀಲ್ ಮಾಡಿದ್ದಾರೆ.

ಹನ್ಸಿಕಾ ಮೋಟ್ವಾನಿ ಮದುವೆ ಯಾವಾಗ?
ಹನ್ಸಿಕಾ ಮೋಟ್ವಾನಿ ಡಿಸೆಂಬರ್ 4ರಂದು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಜೈಪುರದ ಮುಂಡೊಟಾ ಫೋರ್ಟ್ನಲ್ಲಿ ಅದ್ಧೂರಿ ವಿವಾಹ ಜರುಗಲಿದೆ. ಕೇವಲ ಸ್ನೇಹಿತರು ಹಾಗೂ ಕುಟುಂಬದ ಸದಸ್ಯರಷ್ಟೇ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇದೇ ದಿನ ಬೆಳಗ್ಗೆ ಹಳದಿ ಕಾರ್ಯಕ್ರಮ ಇಟ್ಟುಕೊಳ್ಳಲಾಗಿದೆ. ಡಿಸೆಂಬರ್ 3ರಂದು ಮೆಹೆಂದಿ ಹಾಗೂ ಸಂಗೀತ ಕಾರ್ಯಕ್ರಮ ನಡೆಯಲಿದೆ.