ಶಾಪಗ್ರಸ್ಥೆ ಅಪ್ಸರೆ ಹಿಡಿಂಬಿಯಾಗಿ ಹೇಮಾ ಮಾಲಿನಿ

By Rajendra

ಒಂದು ಕಾಲದ ತಾರಾ ಜೋಡಿಗಳು ಈಗ ಮತ್ತೆ ಒಂದಾಗುತ್ತಿದ್ದಾರೆ. ಅದೂ ಬರೋಬ್ಬರಿ 23 ವರ್ಷಗಳ ಬಳಿಕ ಈ ಹಳೆ ಜೋಡಿ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರಲು ಸಿದ್ಧತೆ ನಡೆಸುತ್ತಿದೆ. ಜಿತೇಂದ್ರ ಹಾಗೂ ಹೇಮಾ ಮಾಲಿನಿ ಪೌರಾಣಿಕ ಚಿತ್ರಕ್ಕೆ ಬಣ್ಣ ಹಚ್ಚಲು ಸಿದ್ಧವಾಗಿದ್ದಾರೆ.

ಈ ಚಿತ್ರಕ್ಕೆ 'ಮಹಾಭಾರತ್ ಔರ್ ಬರಾಬರೀಕ್' ಎಂದು ಹೆಸರಿಡಲಾಗಿದೆ. ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ಧರ್ ಮೆಶ್ ತಿವಾರಿ. ಈ ಚಿತ್ರದ ಬಗ್ಗೆ ಅವರು ಮಾತನಾಡುತ್ತಾ, "ಹೇಮಾ ಮಾಲಿನಿ ಅವರು ಶಾಪಗ್ರಸ್ಥ ಅಪ್ಸರೆ ಹಿಡಂಬಿಯಾಗಿ ಈ ಚಿತ್ರದಲ್ಲಿ ಅಭಿನಯಿಸಲಿದ್ದಾರೆ " ಎಂದಿದ್ದಾರೆ.

ಇನ್ನು ಜಿತೇಂದ್ರ ಅವರು ಹಿಡಂಬಿಯ ಅನುಯಾಯಿಯಾಗಿ ಕಾಣಿಸಲಿದ್ದಾರೆ. ಈ ಚಿತ್ರದಲ್ಲಿ ಇಬ್ಬರೂ ಅಭಿನಯಿಸುತ್ತಿದ್ದರೂ ಯಾವ ಸನ್ನಿವೇಶದಲ್ಲೂ ಒಟ್ಟಿಗೆ ಕಾಣಿಸುವುದಿಲ್ಲವಂತೆ. "ಜಿತೂಜಿ ಹಾಗೂ ಹೇಮಾಜಿ ಅವರಿಬ್ಬರೂ ಆಧ್ಯಾತ್ಮಿಕ ಜೀವಿಗಳು. ಚಿತ್ರದಲ್ಲಿ ಜಿತೇಂದ್ರ ಅವರ ಹಳೆ ಗೀತೆ ಮಾದರಿಯಲ್ಲಿ ಒಂದು ಹಾಡಿರುತ್ತದೆ " ಎನ್ನುತ್ತಾರೆ ತಿವಾರಿ.

ಇದಿಷ್ಟೇ ಅಲ್ಲದೆ ಚಿತ್ರದ ಪಾತ್ರವರ್ಗದಲ್ಲಿ ಬಿಆರ್ ಚೋಪ್ರಾ ಅವರ ಮಹಾಭಾರತ ಧಾರಾವಾಹಿಯಲ್ಲಿ ಅಭಿನಯಿಸಿದ್ದ ಫಿರೋಜ್ ಖಾನ್ (ಅರ್ಜುನ), ಗೂಫಿ ಪೈಂತಾಲ್ (ಶಕುನಿ), ರೂಪಾ ಗಂಗೂಲಿ (ದ್ರೌಪದಿ) ಇರುತ್ತಾರೆ. ತಾರೆ ಗ್ರೇಸಿ ಸಿಂಗ್ ಸಹ ಅಭಿನಯಿಸುತ್ತಿದ್ದಾರೆ. (ಏಜೆನ್ಸೀಸ್)

More from Filmibeat

English summary
Actress Hema Malini and Jeetendra team up in a mythological film after two decades. The film titled as Mahabharat Aur Barabareek, in which Hema Malini is playing Hidamba and Jeetendra plays a disciple.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X