ಫ್ಯಾನ್ಸ್‌ಗೆ ಇಲಿಯಾನ ಗುಡ್‌ನ್ಯೂಸ್.. ತಾಯಿ ಆಗ್ತಿದ್ದೀನಿ ಎಂದ ನಟಿ: ಮದ್ವೆ ಯಾವಾಗಾಯ್ತು ಎಂದ ಟ್ರೋಲಿಗರು

ಗೋವಾ ಬ್ಯೂಟಿ ಇಲಿಯಾನಾ ಸೋಶಿಯಲ್ ಮೀಡಿಯಾದಲ್ಲಿ ಪ್ರೆಗ್ನೆನ್ಸಿ ವಿಚಾರವನ್ನು ಹಂಚಿಕೊಂಡಿದ್ದಾರೆ. ಬಳ್ಳಿಯಂತೆ ಬಳುಕುವ ಬೆಡಗಿ ಇಲಿಯಾನಾ ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ನಟಿಸಿ ಪಡ್ಡೆ ಹುಡುಗರ ಮನ ಗೆದ್ದಿದ್ದಾರೆ. ಕನ್ನಡದ ಐಟಂ ಸಾಂಗ್‌ವೊಂದರಲ್ಲೂ ಬಿಂದಾಸ್ ಹೆಜ್ಜೆ ಹಾಕಿದ್ದರು. ಕೆಲ ವರ್ಷಗಳ ಕಾಲ ಚಿತ್ರರಂಗದಿಂದ ದೂರ ಇದ್ದ ನಟಿ ಈಗ ಮತ್ತೆ ವಾಪಸ್ ಆಗಿದ್ದಾರೆ.

ಸದ್ಯ ಇಲಿಯಾನಾಗೆ ಚಿತ್ರರಂಗದಲ್ಲಿ ಅಷ್ಟಾಗಿ ಅವಕಾಶಗಳು ಸಿಗುತ್ತಿಲ್ಲ. ಇತ್ತೀಚೆಗೆ ರ್ಯಾಪರ್ ಬಾದ್‌ಶಾ ಜೊತೆ ಆಲ್ಬಂ ಸಾಂಗ್‌ವೊಂದಕ್ಕೆ ಹೆಜ್ಜೆ ಹಾಕಿದ್ದರು. ಇದೀಗ ದಿಢೀರನೇ ತಾಯಿಯಾಗುತ್ತಿರುವ ವಿಚಾರವನ್ನು ಘೋಷಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಬಹಳ ವಿಭಿನ್ನವಾಗಿ ಈ ವಿಚಾರವನ್ನು ಪೋಸ್ಟ್ ಮಾಡಿದ್ದಾರೆ. ಚಿಕ್ಕದೊಂದು ಟೀಶರ್ಟ್, ಕುತ್ತಿಗೆಯಲ್ಲಿ 'ಮಾಮಾ' ಎನ್ನುವ ಲಾಕೆಟ್ ಇರುವ ಫೋಟೊಗಳನ್ನು ಶೇರ್ ಮಾಡಿದ್ದಾರೆ. ಆ ಟೀ ಶರ್ಟ್‌ನಲ್ಲಿ 'ಅಂಡ್ ಸೋ ದಿ ಅಡ್ವೆಂಚರ್ ಬಿಗಿನ್ಸ್' (ಇನ್ನು ಸಾಹಸಯಾತ್ರೆ ಆರಂಭ) ಎಂದು ಬರೆದಿದೆ.

Actress Ileana DCruz announces her pregnancy with interesting post

ಎರಡು ಫೋಟೊಗಳನ್ನು ಶೇರ್ ಮಾಡಿ 'ಕಮಿಂಗ್ ಸೂನ್. ನನ್ನ ಪುಟ್ಟ ಡಾರ್ಲಿಂಗ್‌ ಭೇಟಿಗೆ ಕಾತರದಿಂದ ಕಾಯ್ತಿದ್ದೇನೆ' ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ಸಖತ್ ವೈರಲ್ ಆಗ್ತಿದೆ. ಈ ಪೋಸ್ಟ್‌ಗೆ ಅಭಿಮಾನಿಗಳು ಲೈಕ್ಸ್, ಕಾಮೆಂಟ್ಸ್‌ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಜೊತೆಗೆ ನಟಿ ಇಲಿಯಾನಾಗೆ ಶುಭಾಶಯ ಕೋರುತ್ತಿದ್ದಾರೆ. ಗೋವಾ ಬ್ಯೂಟಿ ದಿಢೀರ್ ಪ್ರೆಗ್ನೆನ್ಸಿ ವಿಚಾರ ಘೋಷಿಸಿದ್ದು ಕೆಲವರಿಗೆ ಅಚ್ಚರಿ ತಂದಿದೆ. ಇದೇ ಕಾರಣಕ್ಕೆ ಕೆಲವರು ಅನುಮಾನ ವ್ಯಕ್ತಪಡಿಸ್ತಿದ್ದಾರೆ. ಆಕೆಯ ಮದುವೆ, ಲವ್ ಬಗ್ಗೆ ಯಾವುದೇ ಸುದ್ದಿ ಇಲ್ಲ, ಈಗ ದಿಢೀರ್ ಪ್ರೆಗ್ನೆನ್ಸಿ ಸುದ್ದಿ ಹೇಗೆ ಎಂದು ಅಚ್ಚರಿಗೊಂಡಿದ್ದಾರೆ.

"ನಮಗೆ ಗೊತ್ತಿಲ್ದೆ ಮದುವೆ ಯಾವಾಗ ಮಾಡ್ಕೊಂಡೆ? ಆ ಮಗುವಿನ ತಂದೆ ಯಾರು? ಅಂತೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ. ಇದೇ ವಿಚಾರ ಈಗ ಟಾಲಿವುಡ್, ಬಾಲಿವುಡ್‌ನಲ್ಲಿ ಸಖತ್ ಸದ್ದು ಮಾಡ್ತಿದೆ. ಇಲಿಯಾನಾ ನಿಜಕ್ಕೂ ತಾಯಿ ಆಗುತ್ತಿದ್ದಾರಾ? ಅಥವಾ ಯಾವುದಾದರೂ ಸಿನಿಮಾ ಪ್ರಚಾರಕ್ಕಾಗಿ ಈ ರೀತಿ ಪೋಸ್ಟ್ ಮಾಡಿದ್ದಾರಾ? ಎಂದು ಕೆಲವರು ಅನುಮಾನ ವ್ಯಕ್ತಪಡಿಸ್ತಿದ್ದಾರೆ. ಆದರೆ ಇದಕ್ಕೆಲ್ಲಾ ಶೀಘ್ರದಲ್ಲೇ ಉತ್ತರ ಸಿಗಲಿದೆ. ಇನ್ನು ಗೋವಾ ಬ್ಯೂಟಿ ಹೆಜ್ಜೆ ಹಾಕಿದ್ದ 'ಸಾಬ್ ಗಜಬ್' ಆಲ್ಬಮ್ ಸಾಂಗ್ ಕಳೆದ ವಾರವಷ್ಟೆ ರಿಲೀಸ್ ಆಗಿ ಸದ್ದು ಮಾಡ್ತಿದೆ.

Actress Ileana DCruz announces her pregnancy with interesting post

2006ರಲ್ಲಿ ತೆಲುಗಿನ 'ದೇವದಾಸು' ಸಿನಿಮಾ ಮೂಲಕ ಇಲಿಯಾನಾ ಡಿಕ್ರೂಸ್ ಚಿತ್ರರಂಗ ಪ್ರವೇಶಿಸಿದ್ದರು. ಅದೇ ವರ್ಷ ನಟಿಸಿದ 'ಪೋಕಿರಿ' ಸಿನಿಮಾ ದೊಡ್ಡ ಯಶಸ್ಸು ತಂದುಕೊಟ್ಟಿತ್ತು. ಅಲ್ಲಿಂದ ಮುಂದೆ ಸಾಲು ಸಾಲು ಸಿನಿಮಾಗಳಲ್ಲಿ ಬಿಂದಾಸ್ ಬೆಡಗಿ ಮಿಂಚಿದರು. ತೆಲುಗಿನ ಮುನ್ನಾ, ಜಲ್ಸಾ, ಜುಲಾಯಿ ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಬರ್ಫಿ' ಚಿತ್ರದಿಂದ ಬಾಲಿವುಡ್ ಪ್ರವೇಶಿಸಿದ ಬೆಡಗಿ 'ಹ್ಯಾಪಿ ಎಂಡಿಂಗ್', 'ರುಸ್ತುಂ', 'ಬಾದ್‌ಶಾಹೋ', 'ರೈಡ್' ಚಿತ್ರಗಳಲ್ಲಿ ನಟಿಸಿ ಗೆದ್ದಿದ್ದಾರೆ.

ಇಂದ್ರಜಿತ್ ಲಂಕೇಶ್ ಕನ್ನಡ 'ಹುಡುಗಿ ಹುಡುಗಿ' ಚಿತ್ರದ ಐಟಂ ಸಾಂಗ್‌ಗಾಗಿ ಇಲಿಯಾನಾರನ್ನು ಸ್ಯಾಂಡಲ್‌ವುಡ್‌ಗೆ ಕರೆ ತಂದಿದ್ದರು. ಇನ್ನು ಕೆಲ ವರ್ಷಗಳ ಹಿಂದೆ ಗೂವಾ ಬ್ಯೂಟಿ ಆಸ್ಟ್ರೇಲಿಯಾದ ಫೋಟೊಗ್ರಾಫರ್ ಆಂಡ್ರ್ಯೂ ನೀಬೊನ್ ಜೊತೆ ರಿಲೇಷನ್‌ಶಿಪ್‌ನಲ್ಲಿ ಇದ್ದರು. ಇಬ್ಬರು ಮದುವೆ ಕೂಡ ಆಗಿದ್ದಾರೆ ಎನ್ನಲಾಗಿತ್ತು. ಕೆಲ ವರ್ಷಗಳ ನಂತರ ಇಬ್ಬರು ದೂರಾಗಿದ್ದಾರೆ ಎನ್ನುವ ಗುಸುಗುಸು ಕೂಡ ಕೇಳಿ ಬಂದಿತ್ತು. ಇತ್ತೀಚಿನ ವರ್ಷಗಳಲ್ಲಿ ಇಲಿಯಾನ ಸಿನಿಮಾಗಳಲ್ಲಿ ನಟಿಸಿದ್ದಕ್ಕಿಂತ ಬಿಕಿನಿ ತೊಟ್ಟು ಫೋಟೊಗಳನ್ನು ಕ್ಲಿಕ್ಕಿಸಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದೇ ಹೆಚ್ಚು.

More from Filmibeat

English summary
Actress Ileana D'Cruz announces her pregnancy with interesting post. fans can't stop congratulating the Pokiri actress in the comments section. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X