For Quick Alerts
  ALLOW NOTIFICATIONS  
  For Daily Alerts

  ಇಲಿಯಾನಾ ಸೊಂಟ, ನಾಭಿಗೆ ಪಡ್ಡೆಗಳು ಢಮಾರ್

  By ರವಿಕಿಶೋರ್
  |

  ಇಂದ್ರಜಿತ್ ಲಂಕೇಶ್ ಅವರ 'ಹುಡುಗ ಹುಡುಗಿ' ಚಿತ್ರದಲ್ಲಿ ಡಿಂಗ್ ಡಾಂಗ್ ಎಂದು ಕುಣಿದಿದ್ದ ಅರಗಿಣಿ ಇಲಿಯಾನಾ. ತಮ್ಮ ನಾಭಿ ತೋರಿಸಿ ಸೊಂಟ ಕುಣಿಸಲು ರು.30 ಲಕ್ಷ ಚಾರ್ಚ್ ಮಾಡಿದ್ದರು. 'ಹುಡುಗ ಹುಡುಗಿ' ಚಿತ್ರ ಹಿಟ್ ಆಯ್ತೋ ಬಿಡ್ತೋ ಅದು ಬೇರೆ ಮಾತು, ಆದರೆ ಹಾಡು ಕೇಳಿದ ಪಡ್ಡೆಗಳು ಮೈಮೇಲೆ ಇರುವೆ ಬಿಟ್ಟುಕೊಂಡಂತಾದರು.

  ಈಗ ಬಾಲಿವುಡ್ ಅಂಗಳಕ್ಕೂ ಅಡಿಯಿಟ್ಟಿರುವ ಇಲಿಯಾನಾ ಅಲ್ಲೂ ತಮ್ಮ ಛಾಪನ್ನು ಮೂಡಿಸಲು ಭಾರಿ ಕಸರತ್ತು ಮಾಡುತ್ತಿದ್ದಾರೆ. ಇಲಿಯಾನಾ ಅಭಿನಯದ 'ಬರ್ಫಿ' ಚಿತ್ರ ಸಕ್ಸಸ್ ಆದ ಕಾರಣ ಈಗ ಮತ್ತೊಂದು ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಶಾಹಿದ್ ಕಪೂರ್ ಜೊತೆ 'ಪಥಾ ಪೋಸ್ಟರ್ ನಿಖ್ಲಾ ಹೀರೋ' ಎಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

  ಒಂದು ಕಾಲಘಟ್ಟದಲ್ಲಿ ದಕ್ಷಿಣ ಭಾರತದಲ್ಲೇ ಅತ್ಯಂತ ಸುಂದರ ಸೊಂಟದ ಬೆಡಗಿ ಎಂದು ಕಲಾರಸಿಕರಿಂದ ಕರೆಸಿಕೊಂಡಿದ್ದರು. ಈಗ ತಮ್ಮ ಸೊಂಟ ಹಾಗೂ ನಾಭಿಯನ್ನು ಇನ್ನಷ್ಟು ಆಕರ್ಷಕವಾಗಿ ಇಲಿಯಾನಾ ಮಾರ್ಪಡಿಸಿಕೊಂಡಿದ್ದಾರೆ. ಅದೇನು ಮಾಡಿಕೊಂಡರೋ ಏನೋ.

  ಇತ್ತೀಚೆಗೆ ನಡೆದ ಲಾಕ್ಮೆ ಫ್ಯಾಷನ್ ವೀಕ್ ನಲ್ಲೂ ಬೆಕ್ಕಿನ ಹೆಜ್ಜೆ ಹಾಕುತ್ತಾ ತಮ್ಮ ಸೊಂಟ, ನಾಭಿಯನ್ನು ಪ್ರದರ್ಶಿಸಿದರು. ಇದನ್ನು ನೋಡಿದ ಒಂದಷ್ಟು ಬಾಲಿವುಡ್ ನಿರ್ಮಾಪಕರು ಇಲಿಯಾನಾ ಬುಟ್ಟಿಗೆ ಬಿದ್ದಿದ್ದಾರೆ. ಇನ್ನು ಪಡ್ಡೆಗಳ ಪಾಡೇನು ಆಗಬೇಡ.

  English summary
  Ileana D'Cruz hot navel show and walks the ramp for designer Vikram Phadnis at Lakme Fashion Week Summer Resort 2013.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X