ಹಣವಿಲ್ಲದೆ ಪರದಾಡುತ್ತಿದ್ದ ನಟಿಗೆ ಸಹಾಯ ಮಾಡಿದ ಆಕೆಯ ಮೇಕಪ್ ಮ್ಯಾನ್!
ಕೊರೊನಾ ಲಾಕ್‌ಡೌನ್ ದೇಶದ ಆರ್ಥಿಕತೆ ಭಾರಿ ದೊಡ್ಡ ಪೆಟ್ಟನ್ನೇ ನೀಡಿದೆ. ದೇಶದ ಆರ್ಥಿಕತೆಯ ಜೊತೆಗೆ ವೈಯಕ್ತಿಕವಾಗಿಯೂ ಜನರ ಆರ್ಥಿಕ ಪರಿಸ್ಥಿತಿ ಭಾರಿ ಕುಸಿತ ಕಂಡಿದೆ.
Recommended Video
ದಿನಗೂಲಿ ನೌಕರರು, ಬಡತನ ರೇಖೆಗಿಂತ ಕೆಳಗಿನವರು, ಕಾರ್ಮಿಕರು ಹಣಕ್ಕಾಗಿ ಪರದಾಡುವಂತಾಗಿದ್ದರೆ, ಮಧ್ಯಮವರ್ಗದವರು, ಶ್ರೀಮಂತರು ಕೂಡಿಟ್ಟ ಹಣ ಕರಗುವ ಭೀತಿ ಎದುರಿಸುತ್ತಿದ್ದಾರೆ. ಇದಕ್ಕೆ ಚಿತ್ರರಂಗದ ನಟ-ನಟಿಯರೂ ಹೊರತಲ್ಲ.
ಲಾಕ್‌ಡೌನ್ ವಿಸ್ತರಣೆ ಆದಂತೆ ನಟ-ನಟಿಯರೂ ಸಹ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಿದ್ದಾರೆ. ಅದರಲ್ಲೊಬ್ಬರು ಖ್ಯಾತ ಟಿವಿ ನಟಿ ಸೋನಲ್ ವೆಂಗುರ್ಲೇಕರ್.

ಧಾರಾವಾಹಿ, ರಿಯಾಲಿಟಿ ಶೋ ನಟಿ
ಸೋನಲ್ ವೆಂಗುರ್ಲೇಕರ್ ಟಿವಿ ಲೋಕದಲ್ಲಿ ಪರಿಚಿತ ಮುಖ. ಧಾರಾವಾಹಿ, ರಿಯಾಲಿಟಿ ಶೋ ಗಳಿಂದ ಖ್ಯಾತರಾಗಿರುವ ಅವರು, ಕೊರೊನಾ ಸಮಯದಲ್ಲಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರಂತೆ.

'ಮುಂದಿನ ತಿಂಗಳು ಜೀವನ ನಡೆಸುವುದೂ ಕಷ್ಟ'
ನನ್ನ ಬಳಿ ಹೆಚ್ಚು ಹಣವಿಲ್ಲ. ಮುಂದಿನ ತಿಂಗಳು ಜೀವನ ನಡೆಸಲು ನನಗೆ ಕಷ್ಟವಾಗಲಿದೆ. ನನಗೆ ಹಣ ಕೊಡಬೇಕಾದ ನಿರ್ಮಾಪಕರು, ಗೆಳೆಯರು ನನ್ನ ಕರೆಗಳನ್ನು ಸ್ವೀಕರಿಸುತ್ತಿಲ್ಲ. ನಾನು ತೀವ್ರವಾಗಿ ಆರ್ಥಿಕ ಸಮಸ್ಯೆಗೆ ಸಿಲುಕಿದ್ದೇನೆ. ಕೆಲಸ ಇಲ್ಲದ ಕಾರಣ ಸಂಪಾದನೆಯೂ ಇಲ್ಲ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಮೇಕ್‌ಅಪ್ ಮ್ಯಾನ್ ಹಣ ಕೊಡುವುದಾಗಿ ಹೇಳಿದ
ಆದರೆ ಇಂಥಹಾ ಸಂಕಷ್ಟದ ಸಮಯದಲ್ಲಿ ಅವರ ಮೇಕ್‌ಅಪ್ ಮ್ಯಾನ್ ಅವರ ಸಹಾಯಕ್ಕೆ ಧಾವಿಸಿದ್ದಾರಂತೆ. 'ನನ್ನ ಮೇಕ್‌ಅಪ್ ಮ್ಯಾನ್ ನನಗೆ ಹಣ ಸಹಾಯ ಮಾಡುವುದಾಗಿ ಹೇಳಿದ. ಆತನ ಪತ್ನಿ ಗರ್ಭಿಣಿ ಆಗಿದ್ದು, ಆತನ ಬಳಿ ಹೆಚ್ಚು ಹಣವಿಲ್ಲದಿದ್ದರೂ ಸಹ ನನಗೆ ಹಣ ನೀಡುವುದಾಗಿ ಆತ ಹೇಳಿದ' ಎಂದು ಸೋನಲ್ ಹೇಳಿದ್ದಾರೆ.

15 ಸಾವಿರ ಹಣ ಇದೆ ತಗೊಳ್ಳಿ ಎಂದ ಮೇಕ್‌ಅಪ್ ಮ್ಯಾನ್
'ನನ್ನ ಬಳಿ 15 ಸಾವಿರ ಹಣ ಇದೆ, ಈಗ ನಿಮಗೆ ಬೇಕಾದರೆ ಹಣ ತೆಗೆದುಕೊಳ್ಳಿ, ನನ್ನ ಪತ್ನಿ ಗರ್ಭಿಣಿ ಆಕೆಯ ಡೆಲಿವರಿ ಸಮಯದಲ್ಲಿ ಹಣ ವಾಪಸ್ ಕೊಡಿ' ಎಂದು ಆಕೆಯ ಮೇಕ್‌ಅಪ್ ಮ್ಯಾನ್ ಸಂದೇಶ ಕಳಿಸಿದ್ದನಂತೆ. ಅದನ್ನನು ಓದಿ ನಾನು ಅತ್ತು ಬಿಟ್ಟೆ ಎಂದು ಸೋನಲ್ ಬರೆದುಕೊಂಡಿದ್ದಾರೆ.


Click it and Unblock the Notifications











