For Quick Alerts
  ALLOW NOTIFICATIONS  
  For Daily Alerts

  ಏರ್ ಏಷ್ಯಾ ವಿರುದ್ಧ ಕೆಂಡಕಾರಿದ ಬಾಲಿವುಡ್ ನಟಿ ಇಶಾ

  |

  ಬಾಲಿವುಡ್ ನಟಿ ಇಶಾ ಗುಪ್ತ ಏರ್ ಏಷ್ಯಾ ವಿರುದ್ಧ ಕೆಂಡಕಾರಿದ್ದಾರೆ. ಇತ್ತೀಚಿಗೆ ಏರ್ ಏಷ್ಯಾದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಆದ ಕೆಟ್ಟ ಅನುಭವದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಏರ್ ಏಷ್ಯಾದ ವಿರುದ್ಧ ಈಗಾಗಲೆ ಸಾಕಷ್ಟು ಪ್ರಯಾಣಿಕರು ಮತ್ತು ಸೆಲೆಬ್ರಿಟಿಗಳು ದೂರಿದ್ದಾರೆ.

  ಗಗನಸಖಿಯರ ಕರ್ತವ್ಯದ ಬಗ್ಗೆ ಮತ್ತು ಪ್ರಯಾಣಿಕರ ಲಗೇಜ್ ಗಳನ್ನು ಪಡೆಯುವ ಬಗ್ಗೆಯು ಅಸಮಾಧಾನ ಹೊರಹಾಕಿದ್ದಾರೆ. ನಟಿ ಇಶಾ ಗುಪ್ತಾ ಇತ್ತೀಚಿಗೆ ಏರ್ ಏಷ್ಯಾದಲ್ಲಿ ಮುಂಬೈನಿಂದ ಪ್ರಯಾಣಿಸುವ ವೇಳೆ ಸರಿಯಾದ ಮಾಹಿತಿ ನೀಡದ ಏರ್ ಏಷ್ಯಾ ಸಿಬ್ಬಂದಿ ವಿರುದ್ಧ ಕೆಂಡಕಾರಿದ್ದಾರೆ.

  ಕರೀನಾ ಕಪೂರ್ ಕೈಯಲ್ಲಿರುವ ಬ್ಯಾಗ್ ಬೆಲೆ ಕೇಳಿದ್ರೆ ತಲೆ ತಿರುಗಿ ಬೀಳ್ತೀರಾ.!ಕರೀನಾ ಕಪೂರ್ ಕೈಯಲ್ಲಿರುವ ಬ್ಯಾಗ್ ಬೆಲೆ ಕೇಳಿದ್ರೆ ತಲೆ ತಿರುಗಿ ಬೀಳ್ತೀರಾ.!

  ವಿಮಾನ ಆಗಮನದ ಸಮಯ ಮತ್ತು ಟರ್ಮಿನೆಟರ್ ಬದಲಾದ ಬಗ್ಗೆ ಮಾಹಿತಿ ಯಾಕೆ ನೀಡುವುದಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಇಶಾ "ಪ್ರಯಾಣಿಕರ ಗಮನಕ್ಕೆ ತರದೆ ವಿಮಾನದ ಸಮಯ ಹೇಗೆ ಬದಲಾವಣೆ ಮಾಡಲಾಗಿದೆ, ಟರ್ಮಿನಲ್ ಬದಲಾವಣೆ ಮಾಡುವ ಬಗ್ಗೆ ಹೇಗೆ ತೀರ್ಮಾನ ಕೈಗೊಳ್ಳುತ್ತೆ? ಎಂದು ಬರೆದುಕೊಂಡಿದ್ದಾರೆ.

  ಈ ಟ್ವೀಟ್ ಅನ್ನು ಇಶಾ ಏರ್ ಏಷ್ಯಾಗೆ ಟ್ಯಾಗ್ ಮಾಡಿದ್ದಾರೆ. ಆದರೆ ಏರ್ ಏಷ್ಯಾ ಕಡೆಯಿಂದ ಯಾವುದೆ ಪ್ರತಿಕ್ರಿಯೆ ಬಂದಿಲ್ಲ. ಏರ್ ಏಷ್ಯಾದ ಕಡೆಯಿಂದ ಆಗುತ್ತಿರುವ ಕೆಟ್ಟ ಅನುಭವ ಇದೇ ಮೊದಲೇನಲ್ಲ. ಈಗಾಗಲೆ ಸಾಕಷ್ಟು ಸೆಲೆಬ್ರಿಟಿಗಳು ಏರ್ ಏಷ್ಯಾದ ವಿರುದ್ಧ ಕೆಂಡಕಾರಿದ್ದಾರೆ. ಈ ಹಿಂದೆ ನಟಿ ಸೋನಂ ಕಪೂರ್ ತನ್ನ ಬ್ಯಾಗ್ ಅನ್ನು ಕಳೆದುಕೊಂಡಿದ್ದರು.

  ಲಂಡನ್ ಗೆ ತೆರಳುತ್ತಿದ್ದ ಸಮಯದಲ್ಲಿ ಸೋನಂ ಬ್ಯಾಗ್ ಕಳೆದು ಹೋಗಿತ್ತು. ಏರ್ ಏಷ್ಯಾದಲ್ಲಿ ಸೋನಂ ಮೂರು ಬಾರಿ ಬ್ಯಾಗ್ ಕಳೆದುಕೊಂಡಿದ್ದಾರಂತೆ. ಹಾಗಾಗಿ ಮತ್ತೆ ಏರ್ ಏಷ್ಯಾದಲ್ಲಿ ಪ್ರಯಾಣ ಮಾಡಬಾರದೆಂದು ನಿರ್ಧರಿಸಿದ್ದೀನಿ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಸೋನಂ ಸೇರಿದಂತೆ ಸಾಕಷ್ಟು ಪ್ರಯಾಣಿಕರು ಕೆಟ್ಟ ಅನುಭವನ್ನು ಹಂಚಿಕೊಂಡಿದ್ದಾರೆ.

  English summary
  Bollywood Actress Isha Gupta slammed to Air Asia for change its arrival without informing the passengers.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X