For Quick Alerts
  ALLOW NOTIFICATIONS  
  For Daily Alerts

  'ವಿಕ್ರಾಂತ್ ರೋಣ' ಪ್ರಚಾರದ ನಡುವೆ ಇಡಿ ವಿಚಾರಣೆಗೆ ಹಾಜರಾದ 'ರಕ್ಕಮ್ಮ'

  |

  ಸುದೀಪ್ ನಟನೆಯ 'ವಿಕ್ರಾಂತ್ ರೋಣ' ಸಿನಿಮಾ ಇನ್ನೊಂದು ತಿಂಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾ ತಂಡವು ಅದ್ಧೂರಿಯಾಗಿ ಸಿನಿಮಾದ ಪ್ರಚಾರ ಆರಂಭಿಸಿದ್ದು, ಹೋದಲ್ಲೆಲ್ಲ ನಟಿ ಜಾಕ್ವೆಲಿನ್ ಫರ್ನಾಂಡೀಸ್ 'ರಾ ರಾ ರಕ್ಕಮ್ಮ' ಎಂದು ಸ್ಟೆಪ್ಸ್ ಹಾಕುತ್ತಿದ್ದಾರೆ.

  'ವಿಕ್ರಾಂತ್ ರೋಣ' ಸಿನಿಮಾದಲ್ಲಿ 'ರಾ ರಾ ರಕ್ಕಮ್ಮ' ಹಾಡಿಗೆ ಸೊಂಟ ಕುಣಿಸಿರುವ ನಟಿ ಜಾಕ್ವೆಲಿನ್ ಫರ್ನಾಂಡೀಸ್‌ ಇಂದು ಜಾರಿ ನಿರ್ದೇಶಕನಾಲಯದಲ್ಲಿ ವಿಚಾರಣೆ ಎದುರಿಸಿದ್ದಾರೆ.

  1 ಗಂಟೆಯಲ್ಲಿ 'ವಿಕ್ರಾಂತ್ ರೋಣ' ಟ್ರೈಲರ್ ರೆಕಾರ್ಡ್: ಯಾವ ಭಾಷೆಯಲ್ಲಿ ಎಷ್ಟು ವೀಕ್ಷಣೆ? 1 ಗಂಟೆಯಲ್ಲಿ 'ವಿಕ್ರಾಂತ್ ರೋಣ' ಟ್ರೈಲರ್ ರೆಕಾರ್ಡ್: ಯಾವ ಭಾಷೆಯಲ್ಲಿ ಎಷ್ಟು ವೀಕ್ಷಣೆ?

  ವಂಚಕ ಸುಖೇಶ್‌ ಕುರಿತಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಕ್ವೆಲಿನ್ ಫರ್ನಾಂಡೀಸ್ ಸತತವಾಗಿ ಇಡಿಯ ವಿಚಾರಣೆಗೆ ಒಳಪಡುತ್ತಿದ್ದು, ಇಂದು ಸಹ ಜಾಕ್ವೆಲಿನ್ ಇಡಿ ಅಧಿಕಾರಿಗಳ ಮುಂದೆ ಹಾಜರಾಗಿದ್ದಾರೆ.

  ಪ್ರಕರಣವೊಂದರಲ್ಲಿ ಬಂಧನಕ್ಕೊಳಗಾಗಿ ಜೈಲಿನಲ್ಲಿರುವ ವಂಚಕ ಸುಖೇಶ್, ಜೈಲಿನಿಂದಲೇ ಹಲವು ಉದ್ಯಮಿಗಳು, ಪ್ರತಿಷ್ಠಿತರಿಗೆ ಕೋಟ್ಯಂತರ ರುಪಾಯಿ ಹಣ ವಂಚನೆ ಮಾಡಿದ್ದ ಹಾಗೂ ಬೆದರಿಕೆ ಹಾಕಿ ಹಣ ವಸೂಲಿ ಮಾಡಿದ್ದ ಎಂದು ಆರೋಪಿಸಲಾಗಿದೆ.

  ವಂಚಕ ಸುಖೇಶ್, ಜಾಕ್ವೆಲಿನ್ ಫರ್ನಾಂಡೀಸ್‌ರ ಆಪ್ತ ಗೆಳೆಯನಾಗಿದ್ದು, ಇಬ್ಬರು ಅತ್ಯಾಪ್ತವಾಗಿರುವ ಕೆಲವು ಚಿತ್ರಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸುಖೇಶ್, ಸುಮಾರು 6 ಕೋಟಿ ಮೌಲ್ಯದ ವಿವಿಧ ಉಡುಗೊರೆಗಳನ್ನು ಜಾಕ್ವೆಲಿನ್ ಫರ್ನಾಂಡೀಸ್‌ಗೆ ನೀಡಿದ್ದಾನೆ ಎನ್ನಲಾಗುತ್ತಿದೆ. ಅಲ್ಲದೆ ಜಾಕ್ವೆಲಿನ್ ಮೂಲಕ ಸುಖೇಶ್ ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವುದಾಗಿಯೂ ಇಡಿ ಅನುಮಾನಿಸಿದೆ.

  ಮೂರು ಬಾರಿ ವಿಚಾರಣೆ ಮಾಡಿರುವ ಇಡಿ

  ಮೂರು ಬಾರಿ ವಿಚಾರಣೆ ಮಾಡಿರುವ ಇಡಿ

  ಇದೇ ಕಾರಣಕ್ಕೆ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅನ್ನು ಸತತವಾಗಿ ವಿಚಾರಣೆಗೆ ಒಳಪಡಿಸುತ್ತಿದೆ ಇಡಿ. ಈಗಾಲಗೇ ಜಾಕ್ವೆಲಿನ್ ಫರ್ನಾಂಡೀಸ್‌ಗೆ ಸೇರಿದ ಸುಮಾರು 7 ಕೋಟಿಯ ಆಸ್ತಿಯನ್ನು ಇಡಿ ವಶಪಡಿಸಿಕೊಂಡಿದೆ. ಇದರ ಜೊತೆಗೆ ಸುಮಾರು ಮೂರು ಬಾರಿ ಸಮನ್ಸ್ ನೀಡಿ ವಿಚಾರಣೆಯನ್ನೂ ಮಾಡಿದೆ.

  ಅಪರಾಧ ಚಟುವಟಿಕೆಯ ಹಣದಿಂದ ಉಡುಗೊರೆ

  ಅಪರಾಧ ಚಟುವಟಿಕೆಯ ಹಣದಿಂದ ಉಡುಗೊರೆ

  ವಂಚಕ ಸುಖೇಶ್, ಸುಮಾರು 5.71 ಕೋಟಿ ಮೌಲ್ಯದ ಉಡುಗೊರೆಗಳನ್ನು ಜಾಕ್ವೆಲಿನ್‌ಗೆ ನೀಡಿದ್ದಾನೆ. ಇದಕ್ಕೆ ತನ್ನ ಅಪರಾಧ ಚಟುವಟಿಕೆಯಿಂದ ಸಂಪಾದಿಸಿದ ಹಣವನ್ನು ಬಳಸಿದ್ದಾನೆ. ಸುಖೇಶ್ ಚಂದ್ರಶೇಖರ್, ಜಾಕ್ವೆಲಿನ್‌ಗೆ ಉಡುಗೊರೆಗಳನ್ನು ತಲುಪಿಸಲು ತನ್ನ ಬಹುಕಾಲದ ಮಿತ್ರ ಪಿಂಕಿ ಇರಾನಿಯನ್ನು ಬಳಸಿಕೊಂಡಿದ್ದ ಎಂದು ಇಡಿ ಹೇಳಿದೆ.

  ನಗದು, ಕಾರು, ಮನೆ ಉಡುಗೊರೆ

  ನಗದು, ಕಾರು, ಮನೆ ಉಡುಗೊರೆ

  ನಟಿ ಜಾಕ್ವೆಲಿನ್‌ಗೆ ನಗದು ಹಣ ನೀಡುವ ಜೊತೆಗೆ ಕಾರು, ಮನೆಯನ್ನು ಸಹ ಸುಕೇಶ್ ನೀಡಿದ್ದ ಹಾಗೂ ಜಾಕ್ವೆಲಿನ್‌ರ ಸಮೀಪದ ಸಂಬಂಧಿಗಳಿಗೂ ಸಹ ಸುಖೇಶ್ ಹಣ ನೀಡಿದ್ದು ಎಂದು ಇಡಿ ಆರೋಪ ಮಾಡಿದೆ. ಅಪರಾಧ ಚಟುವಟಿಕೆಗಳಿಂದ ಸಂಪಾದಿಸಿದ ಹಣವನ್ನು ಜಾಕ್ವೆಲಿನ್ ಮೂಲಕ ಸುಖೇಶ್ ವರ್ಗಾವಣೆ ಮಾಡುತ್ತಿದ್ದ ಎನ್ನಲಾಗಿದೆ.

  ಮಹಾ ವಂಚಕ ಸುಖೇಶ್ ಚಂದ್ರಶೇಖರ್

  ಮಹಾ ವಂಚಕ ಸುಖೇಶ್ ಚಂದ್ರಶೇಖರ್

  ಸುಖೇಶ್ ಚಂದ್ರಶೇಖರ್ ಜೈಲಿನಲ್ಲಿದ್ದುಕೊಂಡೆ ಹಲವು ಕೋಟ್ಯಧಿಪತಿಗಳಿಗೆ ಕೋಟ್ಯಂತರ ಹಣ ಮೋಸ ಮಾಡಿದ್ದಾನೆ. ಬೆದರಿಕೆ ಹಾಕಿ ಹಣ ವಸೂಲಿಯನ್ನೂ ಮಾಡಿದ್ದಾನೆ. ಕಳೆದ ವರ್ಷ ಸುಖೇಶ್‌ನ ಚೆನ್ನೈ ನಿವಾಸದ ಮೇಲೆ ದಾಳಿ ಮಾಡಿದ್ದ ಐಟಿ ಹಾಗೂ ಇಡಿ ಅಧಿಕಾರಿಗಳು ಸುಖೇಶ್‌ನ ಐಶಾರಾಮಿ ಮನೆ, ಐಶಾರಾಮಿ ಕಾರು ಹಾಗೂ ಕೆಜಿಗಟ್ಟಲೆ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

  English summary
  Actress Jacqueline Fernandez appeared before ED officials in conman Sukhesh Chandrashekhar case.
  Tuesday, June 28, 2022, 10:21
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X