For Quick Alerts
  ALLOW NOTIFICATIONS  
  For Daily Alerts

  ಐದು ದಿನದಲ್ಲಿ ಎರಡನೇ ಬಾರಿ ವಿಚಾರಣೆಗೆ ಹಾಜರಾದ 'ರಕ್ಕಮ್ಮ': ಬಂಧನ ಭೀತಿ

  |

  ಐದು ದಿನದಲ್ಲಿ ಎರಡನೇ ಬಾರಿ ನಟಿ ಜಾಕ್ವೆಲಿನ್ ಫರ್ನಾಂಡೀಸ್ ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗದ ಎದುರು ವಿಚಾರಣೆಗೆ ಹಾಜರಾಗಿದ್ದಾರೆ.

  ವಂಚಕ ಸುಕೇಶ್ ಚಂದ್ರಶೇಖರ್‌ನ 200 ಕೋಟಿ ವಂಚನೆ ಪ್ರಕರಣದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ಆರೋಪಿಯಾಗಿದ್ದು, ಈಗಾಗಲೇ ಇಡಿ (ಜಾರಿ ನಿರ್ದೇಶನಾಲಯ)ದಿಂದ ಹಲವು ಬಾರಿ ವಿಚಾರಣೆ ಎದುರಿಸಿದ್ದಾರೆ. ಇದೀಗ ದೆಹಲಿ ಪೊಲೀಸರು ಸಹ ಜಾಕ್ವೆಲಿನ್ ಅನ್ನು ವಿಚಾರಣೆ ನಡೆಸುತ್ತಿದ್ದು, ಕಳೆದ ಐದು ದಿನದಲ್ಲಿ ಎರಡನೇ ಬಾರಿ ನಟಿ ವಿಚಾರಣೆಗೆ ಹಾಜರಾಗಿದ್ದಾರೆ.

  ಸುಕೇಶ್ ಬಲೆಗೆ ಬಿದ್ದಿರುವ ನಟಿಯರ್ಯಾರು? ಪಡೆದ ದುಬಾರಿ ಉಡುಗೊರೆಗಳ್ಯಾವುವು?ಸುಕೇಶ್ ಬಲೆಗೆ ಬಿದ್ದಿರುವ ನಟಿಯರ್ಯಾರು? ಪಡೆದ ದುಬಾರಿ ಉಡುಗೊರೆಗಳ್ಯಾವುವು?

  ಸೆಪ್ಟೆಂಬರ್ 14 ರಂದು ನಟಿ ಜಾಕ್ವೆಲಿನ್ ಫರ್ನಾಂಡೀಸ್ ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗದ ಎದುರು ವಿಚಾರಣೆಗೆ ಹಾಜರಾಗಿದ್ದರು. ಅಂದು ಸತತ ಎಂಟು ಗಂಟೆಗಳ ಕಾಲ ವಿಚಾರಣೆ ನಡೆದಿತ್ತು. ಇಂದು ಮತ್ತೆ ಜಾಕ್ವೆಲಿನ್ ವಿಚಾರಣೆಗೆ ಹಾಜರಾಗಿದ್ದಾರೆ.

  ಸೆಪ್ಟೆಂಬರ್ 14 ರಂದು ಜಾಕ್ವೆಲಿನ್ ವಿಚಾರಣೆಗೆ ಹಾಜರಾಗಿದ್ದಾಗ ಇದೇ ಪ್ರಕರಣದ ಆರೋಪಿ ಪಿಂಕಿ ಇರಾನಿ ಸಹ ವಿಚಾರಣೆಗೆ ಆಗಮಿಸಿದ್ದರು, ಅವರು ನೀಡಿದ್ದ ಹೇಳಿಕೆ ಹಾಗೂ ಜಾಕ್ವೆಲಿನ್ ನೀಡಿದ ಹೇಳಿಕೆ ಪರಸ್ಪರ ತಾಳೆ ಆಗದೇ ಇರುವ ಕಾರಣ ಇದೀಗ ಮತ್ತೆ ಜಾಕ್ವೆಲಿನ್ ಅನ್ನು ವಿಚಾರಣೆಗೆ ಕರೆಸಲಾಗಿದೆ ಎನ್ನಲಾಗುತ್ತಿದೆ.

  ಜಾಕ್ವೆಲಿನ್ ಆರೋಪಿ ಎಂದ ಇಡಿ

  ಜಾಕ್ವೆಲಿನ್ ಆರೋಪಿ ಎಂದ ಇಡಿ

  ಜಾಕ್ವೆಲಿನ್ ಫರ್ನಾಂಡೀಸ್ ಹಾಗೂ ವಂಚಕ ಸುಕೇಶ್ ಚಂದ್ರಶೇಖರ್ ನಡುವೆ ಆಪ್ತ ಸಂಬಂಧವಿತ್ತು. ಇದಕ್ಕೆ ಸಾಕ್ಷಿಯಾಗಿ ಇಬ್ಬರು ಬಹಳ ಆಪ್ತವಾಗಿದ್ದ ಹಲವು ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಜಾಕ್ವೆಲಿನ್, ಸುಕೇಶ್‌ನನ್ನು ಮದುವೆಯಾಗಲು ಬಯಸಿದ್ದುದಾಗಿಯೂ ವಿಚಾರಣೆ ಸಮಯದಲ್ಲಿ ಹೇಳಿಕೊಂಡಿದ್ದಾರೆ. ಪ್ರಕರಣದಲ್ಲಿ ಮೊದಲು ಸಾಕ್ಷಿಯಾಗಿದ್ದ ಜಾಕ್ವೆಲಿನ್ ಅನ್ನು ಇಡಿಯು ಆರೋಪಿಯನ್ನಾಗಿ ಮಾಡಿದೆ. ಸುಕೇಶ್‌ ಒಬ್ಬ ವಂಚಕ, ಅಕ್ರಮ ಹಾದಿಯಿಂದ ಹಣ ಗಳಿಸುತ್ತಿದ್ದಾನೆ ಎಂಬುದು ಜಾಕ್ವೆಲಿನ್‌ಗೆ ಗೊತ್ತಿದ್ದೂ ಸಹ ಆಕೆ ಆತನಿಂದ ಉಡುಗೊರೆಗಳನ್ನು ಸ್ವೀಕರಿಸಿದ್ದಾಳೆ, ಹಣ ಪಡೆದಿದ್ದಾಳೆ, ಆತನೊಂದಿಗೆ ಸಂಬಂಧ ಮುಂದುವರೆಸಿದ್ದಾಳೆ ಎಂದು ಇಡಿ ಆರೋಪಿಸಿದೆ.

  ಇಡಿ ವಿರುದ್ಧ ಅರ್ಜಿ ಸಲ್ಲಿಸಿರುವ ಜಾಕ್ವೆಲಿನ್

  ಇಡಿ ವಿರುದ್ಧ ಅರ್ಜಿ ಸಲ್ಲಿಸಿರುವ ಜಾಕ್ವೆಲಿನ್

  ಆದರೆ ಇಡಿಯು ತನನ್ನು ಆರೋಪಿಯನ್ನಾಗಿ ಮಾಡಿರುವ ವಿರುದ್ಧ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುವ ಜಾಕ್ವೆಲಿನ್ ಫರ್ನಾಂಡೀಸ್, ತಾನು ಸಹ ಈ ಪ್ರಕರಣದಲ್ಲಿ ಸಂತ್ರಸ್ತೆ, ನನಗೆ ಸುಳ್ಳು ಹೇಳಿ ಸುಕೇಶ್ ನನ್ನ ಸ್ನೇಹ ಬೆಳೆಸಿದ್ದ ಎಂದು ಹೇಳಿದ್ದಾರೆ. ಅಲ್ಲದೆ, ಇಡಿ ವಶಪಡಿಸಿಕೊಂಡಿರುವ ತನ್ನ ಆಸ್ತಿಗಳನ್ನು, ಬ್ಯಾಂಕ್ ಖಾತೆ ಹಾಗೂ ಹಣವನ್ನು ಬಿಡುಗಡೆ ಮಾಡುವಂತೆಯೂ ಕೇಳಿದ್ದಾರೆ.

  ಕೆಲ ವರ್ಷದಿಂದಲೂ ತಿಹಾರ್ ಜೈಲಿನಲ್ಲಿರುವ ವಂಚಕ

  ಕೆಲ ವರ್ಷದಿಂದಲೂ ತಿಹಾರ್ ಜೈಲಿನಲ್ಲಿರುವ ವಂಚಕ

  ಸುಕೇಶ್ ಚಂದ್ರಶೇಖರ್ ವಂಚಕ ಹಾಗೂ ಸುಲಿಗೆಕೋರನಾಗಿದ್ದು ಕೆಲ ವರ್ಷಗಳಿಂದಲೂ ತಿಹಾರ್ ಜೈಲಿನಲ್ಲಿದ್ದಾನೆ. ಆದರೆ ಅಲ್ಲಿಂದಲೇ ತನ್ನ ವಂಚನಾ ವೃತ್ತಿ ಮುಂದುವರೆಸಿದ್ದ. ಜೈಲಿನಲ್ಲಿರುವ ಖ್ಯಾತ ಉದ್ಯಮಿ, ಫೋರ್ಟೀಸ್ ಸಂಸ್ಥೆ ಮಾಜಿ ನಿರ್ದೇಶಕ ಶಿವೇಂದ್ರ ಸಿಂಗ್ ಪತ್ನಿ ಅದಿತಿಯಿಂದ 200 ಕೋಟಿ ಹಣ ಸುಲಿಗೆ ಮಾಡಿದ್ದ. ಅದಿತಿ ಸಿಂಗ್ ದೂರು ನೀಡಿದ ಬಳಿಕ ದೆಹಲಿ ಪೊಲೀಸರು ಹಾಗೂ ಇಡಿ ಈ ಪ್ರಕರಣದ ತನಿಖೆ ನಡೆಸಿ ಸುಕೇಶ್‌ನ ಆಟವನ್ನು ಬಯಲಿಗೆಳೆಯಿತು. ಅದೇ ಪ್ರಕರಣದ ತನಿಖೆಯ ವೇಳೆ ಸುಕೇಶ್‌ನೊಂದಿಗೆ ಜಾಕ್ವೆಲಿನ್ ಫರ್ನಾಂಡೀಸ್‌ಗೆ ಇದ್ದ ಸಂಪರ್ಕವೂ ಬಹಿರಂಗವಾಯಿತು.

  ನಟಿಯರನ್ನು ತಿಹಾರ್ ಜೈಲಿಗೆ ಕರೆಸಿಕೊಂಡಿದ್ದ ಸುಕೇಶ್

  ನಟಿಯರನ್ನು ತಿಹಾರ್ ಜೈಲಿಗೆ ಕರೆಸಿಕೊಂಡಿದ್ದ ಸುಕೇಶ್

  ಸುಕೇಶ್ ಚಂದ್ರಶೇಖರ್, ಜಾಕ್ವೆಲಿನ್‌ಗೆ ಐಶಾರಾಮಿ ಕಾರು, ಕೋಟ್ಯಂತರ ಹಣ, ಜಾಕ್ವೆಲಿನ್‌ರ ಸಹೋದರನಿಗೆ ಹಣ ನೀಡಿದ್ದ. ಜಾಕ್ವೆಲಿನ್ ಮಾತ್ರವೇ ಅಲ್ಲದೆ ನಟಿ ನೋರಾ ಫತೇಹಿಗೂ ದುಬಾರಿ ಕಾರು ಉಡುಗೊರೆ ನೀಡಿದ್ದ. ನಟಿಯರಾದ ನಿಕ್ಕಿ ತಾಂಬೋಲಿ, ಚಾಹತ್ ಖನ್ನಾ, ಮಾಡೆಲ್‌ಗಳಾದ ಸೋಫಿಯಾ ಸಿಂಗ್, ಆರುಷಾ ಪಾಟೀಲ್ ಅವರುಗಳಿಗೂ ದುಬಾರಿ ಉಡುಗೊರೆ ನೀಡಿದ್ದ, ಕೆಲವು ನಟಿಯರನ್ನು ತಾನಿದ್ದ ತಿಹಾರ್‌ ಜೈಲಿಗೂ ಕರೆಸಿಕೊಂಡಿದ್ದ.

  English summary
  Actress Jacqueline Fernandez appears before EOW of Delhi police in Sukesh Chandrashekhar's 200 crore rs extortion case again.
  Monday, September 19, 2022, 20:25
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X