For Quick Alerts
  ALLOW NOTIFICATIONS  
  For Daily Alerts

  200 ಕೋಟಿ ರೂಪಾಯಿ ವಂಚನೆ ಪ್ರಕರಣ: ಜಾಕ್ವೆಲಿನ್‌ ಫರ್ನಾಂಡಿಸ್‌ಗೆ ಮಧ್ಯಂತರ ಜಾಮೀನು

  |

  ಬಾಲಿವುಡ್‌ನಲ್ಲಿ ಭಾರಿ ಸಂಚಲನ ಮೂಡಿಸಿದ್ದ 200 ಕೋಟಿ ರೂಪಾಯಿ ವಂಚನೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಬಾಲಿವುಡ್‌ನ ಅನೇಕ ನಟಿಯರ ಎದೆಯಲ್ಲಿ ಢವಢವ ಉಂಟು ಮಾಡಿದ್ದ ಪ್ರಕರಣ ಸದ್ಯ ಪ್ರಮುಖ ಘಟ್ಟಕ್ಕೆ ತಲುಪಿದೆ. 200 ಕೋಟಿ ರೂಪಾಯಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಸುಕೇಶ್‌ ಚಂದ್ರಶೇಖರ್‌ ಜೊತೆಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ ಅವರನ್ನು ಜಾರಿ ನಿರ್ದೇಶನಾಲಯ ಸತತ ವಿಚಾರಣೆ ನಡೆಸಿತ್ತು. ಇದೀಗ ಬಾಲಿವುಡ್ ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ ಅವರಿಗೆ ನ್ಯಾಯಾಲಯ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

  ಉದ್ಯಮಿಗಳಿಗೆ 200 ಕೋಟಿ ರೂಪಾಯಿ ವಂಚನೆ ಮಾಡಿರುವ ಆರೋಪ ಎದುರಿಸುತ್ತಿರುವ ಸುಕೇಶ್‌ ಚಂದ್ರಶೇಖರ್‌ ಜೊತೆಗೆ ಆತ್ಮೀಯತೆ ಹೊಂದಿದ್ದ ಕಾರಣ ಬಾಲಿವುಡ್‌ ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ ಅವರಿಗೆ ಸಂಕಷ್ಟ ಎದುರಾಗಿದ್ದು, ಜಾರಿ ನಿರ್ದೇಶನಾಲಯ ಅಧಿಕಾರಿಗಳು, ಕೋರ್ಟ್‌ಗೆ ಸಲ್ಲಿಸಿರುವ ಪ್ರಕರಣದ ಚಾರ್ಜಶೀಟ್‌ನಲ್ಲಿ ಆರೋಪಿಗಳ ಪೈಕಿ ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ ಸಹ ಸೇರಿಸಲಾಗಿತ್ತು. ಬಂಧನ ಭೀತಿಯಲ್ಲಿದ್ದ ನಟಿ ಕೋರ್ಟ್ ಮೊರೆ ಹೋಗಿದ್ದರು. ಇದೀಗ ವಿಚಾರಣೆ ನಡೆಸಿದ ಕೋರ್ಟ್ ಜಾಕ್ವೆಲಿನ್‌ ಫರ್ನಾಂಡಿಸ್‌ಗೆ ಮಧ್ಯಂತರ ಜಾಮೀನು ನೀಡಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಕೋರ್ಟ್‌ ಅಕ್ಟೋಬರ್ 22ಕ್ಕೆ ಮುಂದೂಡಿದ್ದು, ಸದ್ಯ ಬಾಲಿವುಡ್‌ ನಟಿ ನಿಟ್ಟುಸಿರು ಬಿಟ್ಟಿದ್ದಾರೆ.

  ಜಾಕ್ವೆಲಿನ್ ಫರ್ನಾಂಡೀಸ್ ಆಪ್ತೆಯ ವಿಚಾರಣೆ: ನಟಿಗೆ ಹೆಚ್ಚಿದ ಸಂಕಷ್ಟಜಾಕ್ವೆಲಿನ್ ಫರ್ನಾಂಡೀಸ್ ಆಪ್ತೆಯ ವಿಚಾರಣೆ: ನಟಿಗೆ ಹೆಚ್ಚಿದ ಸಂಕಷ್ಟ

  200 ಕೋಟಿ ರೂಪಾಯಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಸುಕೇಶ್‌ ಚಂದ್ರಶೇಖರ್‌ ಬಂಧನವಾಗುತ್ತಿದ್ದಂತೆ, ಬಾಲಿವುಡ್‌ನ ಅನೇಕ ನಟಿಯರಿಗೆ ಆತಂಕ ಎದುರಾಗಿತ್ತು. ಆರೋಪಿ ಸುಕೇಶ್‌ ಚಂದ್ರಶೇಖರ್‌ ಅನೇಕ ಸ್ಟಾರ್‌ ನಟಿಯರ ಜೊತೆ ನಂಟು ಹೊಂದಿರುವುದು ಪ್ರಕರಣದ ತನಿಖೆಯಲ್ಲಿ ಬಹಿರಂಗವಾಗಿತ್ತು. ಇದರಲ್ಲಿ ಮುಖ್ಯವಾಗಿ ವಿಕ್ರಾಂತ್‌ ರೋಣ ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ ಹೆಸರು ತಳುಕುಹಾಕಿಕೊಂಡಿತ್ತು. ಅಂದಿನಿಂದ ನಟಿಗೆ ಸಂಕಷ್ಟ ಆರಂಭವಾಗಿದ್ದು, ಅನೇಕ ಬಾರಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಟಿಗೆ ಸಮನ್ಸ್‌ ಜಾರಿ ಮಾಡಿದ್ದರು. ಕೆಲ ದಿನಗಳ ಹಿಂದೆ ಅಧಿಕಾರಿಗಳು ಸತತ 7 ಗಂಟೆಗಳ ಕಾಲ ನಟಿಯನ್ನು ವಿಚಾರಣೆ ನಡೆಸಿದ್ದರು.

  ಜಾಕ್ವೆಲಿನ್​ ಫರ್ನಾಂಡಿಸ್ ಆರೋಪಿ ಸುಕೇಶ್‌ ಚಂದ್ರಶೇಖರ್‌ ಬಳಿಯಿಂದ ಆರು ಕೋಟಿ ಮೌಲ್ಯದ ದುಬಾರಿ ಉಡುಗೊರೆಗಳನ್ನು ಪಡೆದುಕೊಂಡಿದ್ದರು. ಆರೋಪಿಯೊಂದಿಗೆ ನಟಿ ಬಹಳ ಆತ್ಮೀಯವಾಗಿದ್ದು, ಇವರಿಬ್ಬರ ಫೋಟೋಗಳು ಕೂಡ ವೈರಲ್‌ ಆಗಿದ್ದವು. ಅಲ್ಲದೇ ನಟಿ ಜಾಕ್ವೆಲಿನ್​ ಫರ್ನಾಂಡಿಸ್ ಆರೋಪಿ ಸುಕೇಶ್‌ ಚಂದ್ರಶೇಖರ್‌ನನ್ನು ಮದುವೆಯಾಗುವುದಾಗಿ ನಿರ್ಧರಿಸಿದ್ದರು ಎಂದು ಸಹ ವರದಿಯಾಗಿತ್ತು. ಪ್ರಕರಣದ ಬಗ್ಗೆ ನಿರಂತರ ತನಿಖೆ ನಡೆಸುತ್ತಿರುವ ಇ.ಡಿ ಅಧಿಕಾರಿಗಳು ಜಾಕ್ವೆಲಿನ್​ ಫರ್ನಾಂಡಿಸ್ ಆರೋಪಿ ಎಂದು ಉಲ್ಲೇಖಿಸಿ ಚಾರ್ಜ್‌ಶೀಟ್‌ ಸಹ ಸಲ್ಲಿಕೆ ಮಾಡಿದ್ದರು. ಇನ್ನು ಇತ್ತೀಚಿಗೆ ನಟಿ ಜಾಕ್ವೆಲಿನ್​ ಫರ್ನಾಂಡಿಸ್ ಆಪ್ತರಾದ ಪಿಂಕಿ ಇರಾನಿ, ಜಾಕ್ವೆಲಿನ್ ಸ್ಟೈಲಿಸ್ಟ್‌ ಲೀಪಾಕ್ಷಿ ಎಲ್ಲವಾಡಿಯವರನ್ನು ಸಹ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು.

  ಆರೋಪಿ ಸುಕೇಶ್‌ ಚಂದ್ರಶೇಖರ್‌ ಕುಖ್ಯಾತ ವಂಚಕನಾಗಿದ್ದು, ಹಲವು ವರ್ಷಗಳಿಂದ ತಿಹಾರ್‌ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ. ಜೈಲಿನಲ್ಲಿದ್ದುಕೊಂಡೆ ತನ್ನ ಕಸುಬು ಮುಂದುವರಿಸಿದ್ದ ಆರೋಪಿ, ಯಾರ್ನ್‌ ಬಾಕ್ಸಿ ಸಂಸ್ಥೆಯ ಮಾಜಿ ಮಾಲೀಕರ ಪತ್ನಿಯಿಂದ 200 ಕೋಟಿ ರೂಪಾಯಿ ವಸೂಲಿ ಮಾಡಿದ್ದ ಎನ್ನಲಾಗಿದೆ. ಇಂತಹ ಆರೋಪಿಯೊಂದಿಗಿನ ಸಂಪರ್ಕ ನಟಿ ಜಾಕ್ವೆಲಿನ್​ ಫರ್ನಾಂಡಿಸ್ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಇನ್ನು ಜಾಕ್ವೆಲಿನ್​ ಫರ್ನಾಂಡಿಸ್ ಮಾತ್ರವಲ್ಲದೇ, ನಟಿ ನೋರಾ ಫತಿಹಿ, ನಿಕ್ಕಿ ತಾಬೋಲಿ, ಆರುಷಿ ಖನ್ನಾ ಸೇರಿದಂತೆ ಅನೇಕರು ಸುಕೇಶ್‌ ಜೊತೆ ಸಂಪರ್ಕದಲ್ಲಿರುವುದುದು ತನಿಖೆ ವೇಳೆ ಬಹಿರಂಗವಾಗಿದೆ.

  English summary
  Bollywood actress Jacqueline Fernandez gets interim bail in Rs 200 crore money laundering case. conman Sukesh Chandrasekhar is main accused.
  Monday, September 26, 2022, 13:03
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X