For Quick Alerts
  ALLOW NOTIFICATIONS  
  For Daily Alerts

  ಶ್ರೀದೇವಿ ಪುತ್ರಿಯ ಹಾಟ್ ಲುಕ್‌ಗೆ ಪಡ್ಡೆ ಹುಡುಗರು ಫಿದಾ

  |

  ಬಾಲಿವುಡ್ ನಟಿ ಜಾಹ್ನವಿ ಕಪೂರ್ ಸಿನಿಮಾ ವಿಚಾರಕ್ಕಿಂತ ತಮ್ಮ ಕಾಸ್ಟ್ಯೂಮ್ ವಿಚಾರಕ್ಕೆ ಹೆಚ್ಚು ಹೆಚ್ಚು ಸುದ್ದಿಯಾಗುತ್ತಿರುತ್ತಾರೆ. ಅದರಲ್ಲೂ ಜಿಮ್ ಡ್ರೆಸ್ ಗಳಿಗೆ ಹೆಚ್ಚು ಗಮನ ಸೆಳೆಯುತ್ತಾರೆ.

  ಆದ್ರೀಗ, ಮ್ಯಾಗಜಿನ್ ವೊಂದಕ್ಕೆ ಶ್ರೀದೇವಿ ಪುತ್ರಿ ಮಾಡಿಸಿರುವ ಹೊಸ ಫೋಟೋಶೂಟ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದೆ. ಜಾಹ್ನವಿ ತೊಟ್ಟಿರುವ ಬಿಳಿ ಬಣ್ಣದ ಔಟ್ ಫಿಟ್ ಬಟ್ಟೆ ಆಕೆಯೆ ಅಂದ ಹೆಚ್ಚಿಸಿದೆ.

  ಶ್ರೀದೇವಿ ಪುತ್ರಿಯ ಸ್ಟನ್ನಿಂಗ್ ಲುಕ್ ಗೆ ಬಾಲಿವುಡ್ ಮಂದಿ ಫಿದಾ ಶ್ರೀದೇವಿ ಪುತ್ರಿಯ ಸ್ಟನ್ನಿಂಗ್ ಲುಕ್ ಗೆ ಬಾಲಿವುಡ್ ಮಂದಿ ಫಿದಾ

  Grazia ಮ್ಯಾಗಜಿನ್ ಕವರ್ ಫೋಟೋಗೆ ಜಾಹ್ನವಿ ಕಪೂರ್ ಪೋಸ್ ನೀಡಿದ್ದಾರೆ. ಜಾಹ್ನವಿ ತೊಟ್ಟಿದ್ದ ಬಿಳಿ ಬಣ್ಣದ ಶೋಲ್ಡರ್ ಲೆಸ್ ಟಾಪ್ ಮತ್ತು ಸ್ಟೈಲಿಶ್ ಪ್ಯಾಂಟ್ ಕುರಿತು ಚರ್ಚೆಯಾಗ್ತಿದೆ. ಇದಕ್ಕೂ ಮುಂಚೆ ಜಾಹ್ನವಿ ಕಾಣಿಸಿಕೊಂಡಿದ್ದ ನೀಲಿ ಬಣ್ಣ ರೇಷ್ಮೆ ಬಟ್ಟೆಯೂ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆಕರ್ಷಣೆ ಉಂಟು ಮಾಡಿತ್ತು.

  ಶ್ರೀದೇವಿ ಪುತ್ರಿಯ ಪಿಂಕ್ ಡ್ರೆಸ್ ನೋಡಿ ಕಾಲೆಳೆಯುತ್ತಿದ್ದಾರೆ ನೆಟ್ಟಿಗರು ಶ್ರೀದೇವಿ ಪುತ್ರಿಯ ಪಿಂಕ್ ಡ್ರೆಸ್ ನೋಡಿ ಕಾಲೆಳೆಯುತ್ತಿದ್ದಾರೆ ನೆಟ್ಟಿಗರು

  ದಢಕ್ ಸಿನಿಮಾ ಮುಗಿದ ಬಳಿಕ ಗೋಸ್ಟ್ ಸ್ಟೋರಿಸ್ ವೆಬ್ ಸಿರೀಸ್ ನಲ್ಲಿ ಜಾಹ್ನವಿ ನಟಿಸಿದ್ದರು. ಸದ್ಯ ಗುಂಜಾನ್ ಸಕ್ಸೇನಾ ಚಿತ್ರದಲ್ಲಿ ನಟಿಸಿದ್ದು, ಈ ಚಿತ್ರದಲ್ಲಿ ಭಾರತೀಯ ಮೊದಲ ಮಹಿಳಾ ವಾಯುಪಡೆಯ ಪೈಲಟ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  ಕರಣ್ ಜೋಹರ್ ನಿರ್ಮಾಣದ ತಖ್ತ್ ಚಿತ್ರದಲ್ಲೂ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ದೋಸ್ತಾನ 2 ಹಾಗೂ ಇನ್ನೊಂದು ಮೆಗಾ ಚಿತ್ರದಲ್ಲಿ ಜಾಹ್ನವಿ ಅಭಿನಯಿಸುತ್ತಿದ್ದಾರೆ.

  English summary
  Bollywood actress Janhvi kapoor stole all the attention in her white outfit dress in magazine launch event.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X