For Quick Alerts
  ALLOW NOTIFICATIONS  
  For Daily Alerts

  ಮನೆಗೆಲಸದವರಿಗೆ ಕೊರೊನಾ ಸೋಂಕು: ಕ್ವಾರಂಟೈನ್ ನಲ್ಲಿ ನಟಿ ಜಾಹ್ನವಿ ಕಪೂರ್ ಕುಟುಂಬ

  |

  ಮನಗೆಲಸದವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟ ಹಿನ್ನಲೆ, ಬಾಲಿವುಡ್ ನಟಿ ಶ್ರೀದೇವಿ ಕುಟುಂಬ ಈಗ ಕ್ವಾರಂಟೈನ್ ಗೆ ಒಳಗಾಗಿದೆ. ಶ್ರೀದೇವಿ ಪುತ್ರಿಯರಾದ ಜಾಹ್ನವಿ, ಖುಷಿ ಹಾಗೂ ಪತಿ ಬೋನಿ ಕಪೂರ್ ಮನೆಯಲ್ಲಿಯೇ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.

  ಈ ಬಗ್ಗೆ ನಟಿ ಬೋನಿ ಕಪೂರ್ ಬಹಿರಂಗ ಪಡಿಸಿದ್ದು, ಜಾಹ್ನವಿ ಮತ್ತು ಖುಷಿ ಸೇರಿದಂತೆ ಮನೆಯವರೆಲ್ಲರು ಸುರಕ್ಷಿತರಾಗಿರುವುದಾಗಿ ಹೇಳಿದ್ದಾರೆ. ಮನೆಯವರ್ಯಾರಿಗೂ ಕೊರೊನಾ ಸೋಂಕಿನ ಯಾವುದೆ ಲಕ್ಷಣ ಕಂಡುಬಂದಿಲ್ಲ ಎಂದಿದ್ದಾರೆ. ಮುಂದೆ ಓದಿ...

  ನಾಯಕಿಯರಿಗೆ ಹೆಚ್ಚು ಪ್ರಾಮುಖ್ಯತೆ ಇರಲ್ಲ ಎಂದು ತೆಲುಗು ಸಿನಿಮಾ ತಿರಸ್ಕರಿಸಿದ ನಟಿ ಜಾಹ್ನವಿನಾಯಕಿಯರಿಗೆ ಹೆಚ್ಚು ಪ್ರಾಮುಖ್ಯತೆ ಇರಲ್ಲ ಎಂದು ತೆಲುಗು ಸಿನಿಮಾ ತಿರಸ್ಕರಿಸಿದ ನಟಿ ಜಾಹ್ನವಿ

  ಆತಂಕದಲ್ಲಿ ಬೋನಿ ಕಪೂರ್ ಕುಟುಂಬ

  ಆತಂಕದಲ್ಲಿ ಬೋನಿ ಕಪೂರ್ ಕುಟುಂಬ

  ಮನೆಗೆಲಸದವರಿಗೆ ಸೋಂಕು ಕಾಣಿಸಿಕೊಂಡ ಕಾರಣ ಬೋನಿ ಕಪೂರ್ ಕುಟುಂಬ ಆತಂಕಕ್ಕೆ ಒಳಗಾಗಿತ್ತು. ಕುಟುಂಬದವರೆಲ್ಲರು ಮನೆಲ್ಲಿರುವ ಕಾರಣ ಕೆಲಸಗಾರನ ಸಂಪರ್ಕ ಮಾಡಿರುವ ಸಾಧ್ಯತೆ ಹೆಚ್ಚಾಗಿರುತ್ತೆ. ಎಲ್ಲರೂ ಸೇಫ್ ಆಗಿದ್ದೀವಿ ಎಂದು ಬೋನಿ ಕಪೂರ್ ತಿಳಿಸಿದ್ದಾರೆ.

  ಶ್ರೀದೇವಿ ಪುತ್ರಿಯ ಹಾಟ್ ಲುಕ್‌ಗೆ ಪಡ್ಡೆ ಹುಡುಗರು ಫಿದಾಶ್ರೀದೇವಿ ಪುತ್ರಿಯ ಹಾಟ್ ಲುಕ್‌ಗೆ ಪಡ್ಡೆ ಹುಡುಗರು ಫಿದಾ

  ಬೋನಿ ಕಪೂರ್ ಬರೆದ ಪತ್ರದಲ್ಲೇನಿದೆ

  ಬೋನಿ ಕಪೂರ್ ಬರೆದ ಪತ್ರದಲ್ಲೇನಿದೆ

  ಈ ಬಗ್ಗೆ ಬೋನಿ ಕಪೂರ್ ಬರೆದ ಪತ್ರವನ್ನು ಮಗಳು ಜಾಹ್ನವಿ ಕಪೂರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. "ಮನೆಯಲ್ಲಿ 23 ವರ್ಷದ ಕೆಲಸದವರೊಬ್ಬರಿಗೆ ಕೊರೊನಾ ಸೋಂಕು ಕಂಡುಬಂದಿದೆ. ಶನಿವಾರ ಅವರಿಗೆ ಹುಷಾರಿರಲಿಲ್ಲ. ಪರೀಕ್ಷೆಗೆ ಒಳಪಡಿಸಿ, ಪ್ರತ್ಯೇಕವಾಗಿ ಇರಿಸಲಾಗಿತ್ತು, ಪರೀಕ್ಷಾ ವರದಿ ಪಾಸಿಟಿವ್ ಬಂದಿದೆ. ನಂತರ ಪಾಲಿಗೆ ಸಿಬ್ಬಂದಿ ಬಂದು ಅವರನ್ನು ಕ್ವಾರಂಟೈನ್ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ" ಎಂದಿದ್ದಾರೆ.

  ಬರಿಗಾಲಿನಲ್ಲಿ ತಿರುಪತಿ ಬೆಟ್ಟ ಹತ್ತಿ ತಿಮ್ಮಪ್ಪನ ದರ್ಶನ ಪಡೆದ ಶ್ರೀದೇವಿ ಪುತ್ರಿ.!ಬರಿಗಾಲಿನಲ್ಲಿ ತಿರುಪತಿ ಬೆಟ್ಟ ಹತ್ತಿ ತಿಮ್ಮಪ್ಪನ ದರ್ಶನ ಪಡೆದ ಶ್ರೀದೇವಿ ಪುತ್ರಿ.!

  ಕ್ವಾರಂಟೈನ್ ನಲ್ಲಿ ಶ್ರೀದೇವಿ ಕುಟುಂಬ

  ಕ್ವಾರಂಟೈನ್ ನಲ್ಲಿ ಶ್ರೀದೇವಿ ಕುಟುಂಬ

  "ನಮ್ಮ ಮನೆಯಲ್ಲಿ ಯಾರಿಗೂ ರೋಗ ಲಕ್ಷಣ ಕಂಡುಬಂದಿಲ್ಲ. ಲಾಕ್ ಡೌನ್ ಶುರುವಾದಾಗಿನಿಂದ ನಾವ್ಯಾರು ಮನೆಬಿಟ್ಟು ಹೊರಗೆ ಹೋಗಿಲ್ಲ. ಆದ್ರೂ ಮುಂದಿನ 14 ದಿನಗಳು ಕ್ವಾರಂಟೈನ್ ಗೆ ಒಳಗಾಗುತ್ತೇವೆ. ವೈದ್ಯರು ನೀಡಿರುವ ಸೂಚನೆಯನ್ನು ಪಾಲಿಸುತ್ತೇವೆ. ತಕ್ಷಣ ಸ್ಪಂದಿಸಿದ ಮಹಾರಾಷ್ಟ್ರ ಸರ್ಕಾರಕ್ಕೆ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ.

  ಯಾವುದೇ ರೀತಿಯ ವದಂತಿ ಹರಡಿಸಬೇಡಿ

  ಯಾವುದೇ ರೀತಿಯ ವದಂತಿ ಹರಡಿಸಬೇಡಿ

  "ಯಾವುದೆ ರೀತಿಯ ವದಂತಿ ಹರಡಬಾರದೆಂದು ಮಾಹಿತಿ ತಿಳಿಸುತ್ತಿದ್ದೇವೆ. ನಾವು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದೇವೆ. ಕೊರೊನಾ ಒಳಗಾಗಿರೋ ಕೆಲಸಗಾರ ಬೇಗ ಗುಣಮುಖರಾಗಿ ವಾಪಸ್ ಬರುತ್ತಾನೆ." ಎಂದು ದೀರ್ಘವಾಗಿ ಬರೆದುಕೊಂಡಿದ್ದಾರೆ.

  English summary
  Actress Janhvi kapoor house help tests positive for covid 19. Janhvi Kapoor, Khushi others are safe, said Boney Kapoor.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X