ಶಾಲಾ ದಿನಗಳಲ್ಲಿಯೇ ಅಶ್ಲೀಲ ವೆಬ್‌ಸೈಟ್‌ನಲ್ಲಿ ನಕಲಿ ಫೋಟೋ ಕಂಡು ನೊಂದಿದ್ದ ನಟಿ ಜಾನ್ವಿ ಕಪೂರ್

ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ನಟ ನಟಿಯರ ಫೋಟೋಗಳನ್ನು ಮಾರ್ಫ್ ಮಾಡಿ ಶೇರ್ ಮಾಡುತ್ತಿರುತ್ತಾರೆ. ಇದರಿಂದ ಅವರಿಗಾಗುವ ಮುಜುಗರ ಅಷ್ಟಿಷ್ಟಲ್ಲ. ಇದನ್ನು ಕೆಲವರು ಗಂಭೀರವಾಗಿ ಪರಿಗಣಿಸಿ ಕಾನೂನು ಕ್ರಮಕ್ಕೆ ಮುಂದಾಗುತ್ತಾರೆ. ಮತ್ತೆ ಕೆಲವರು ಇನ್ನು ನಿರ್ಲಕ್ಷ್ಯ ಮಾಡುತ್ತಾರೆ.

ಕೆಲ ಕಿಡಿಗೇಡಿಗಳು ಇನ್ನೂ ಮುಂದೆ ಹೋಗಿ ನಟಿಯರ ಫೋಟೋಗಳನ್ನು ಅಶ್ಲೀಲ ವೆಬ್‌ಸೈಟ್‌ಗಳಲ್ಲಿ ಹಾಕಿ ಜನರು ನಂಬುವಂತೆ ಮಾಡುತ್ತಾರೆ. ಹೀಗೆ ಅನೇಕ ನಟ, ನಟಿಯರು ಹಿಂಸೆಗೆ ಒಳಗಾಗಿದ್ದಾರೆ. ಈ ಬಗ್ಗೆ ಮನಬಿಚ್ಚಿ ಮಾತಾಡಿದ ನಟಿಯರೂ ಇದ್ದಾರೆ. ಈಗ ಬಾಲಿವುಡ್ ನಟಿ ಜಾನ್ವಿ ಕಪೂರ್ ಕೂಡ ತಮಗಾದ ಈ ಕೆಟ್ಟ ಅನುಭವದ ಬಗ್ಗೆ ಹಂಚಿಕೊಂಡಿದ್ದಾರೆ.

actress-janhvi-kapoor

ಶಾಲಾ ಸಮಯದಲ್ಲೇ ನೋವುಂಡಿದ್ದ ನಟಿ ಜಾನ್ವಿ ಕಪೂರ್!

ಬಾಲಿವುಡ್‌ನಲ್ಲಿ ವ್ಯಾಪಕವಾಗಿ ಬೆಳೆದಿರುವ ಪಾಪರಾಜಿ ಸಂಸ್ಕೃತಿಯಲ್ಲಿ ಸ್ಟಾರ್ ಕಿಡ್ ಕಾಣಿಸಿಕೊಂಡ ನಟಿ ಜಾನ್ವಿ ಕಪೂರ್, ನ್ಯೂಸ್‌ಲಾಂಡ್ರಿಗೆ ನೀಡಿದ ಸಂದರ್ಶನದಲ್ಲಿ ಹೇಗೆ ಪಾಪರಾಜಿ ಕ್ಯಾಮೆರಾಗಳು ತನ್ನ ಜೀವನದ ಒಂದು ಭಾಗವಾಗಿದೆ ಎಂಬುದನ್ನು ಉಲ್ಲೇಖಿಸಿದ್ದಾರೆ. ಬಾಲ್ಯದಿಂದಲೂ ತನ್ನ ಒಪ್ಪಿಗೆಯೊಂದಿಗೆ ಅಥವಾ ಒಪ್ಪಿಗೆ ಇಲ್ಲದೆ ಜನರು ತಮ್ಮ ಮತ್ತು ಸಹೋದರಿ ಖುಷಿ ಕಪೂರ್ ಅವರ ಫೋಟೋಗಳನ್ನು ತೆಗೆದುಕೊಂಡಿರುವುದರ ಕುರಿತು ಮಾತನಾಡಿದ್ದಾರೆ.

ತಾನಿನ್ನು ಶಾಲೆಗೆ ಹೋಗುತ್ತಿರುವ ಸಮಯದಲ್ಲಿ ಹೇಗೆ ತನ್ನ ಮಾರ್ಫ್ ಮಾಡಿದ ಫೋಟೋಗಳು ಅಶ್ಲೀಲ ಎಂದು ಗುರುತಿಸಿಕೊಂಡಿದ್ದ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡು ನೋವು ಅನುಭವಿಸಿದ್ದನ್ನು ಹೇಳಿದ್ದಾರೆ. ಈಗ ಇನ್ನೂ AI (ಕೃತಕ ಬುದ್ಧಿಮತ್ತೆ) ಬಂದಿದ್ದು, ನಕಲಿ ಚಿತ್ರಗಳನ್ನು ಹಂಚುವವರು ಹೆಚ್ಚಾಗಿದ್ದಾರೆ. ಜನ ಕೂಡ ಅವುಗಳನ್ನು ನೋಡಿ ನಿಜ ಎಂದೇ ಭಾವಿಸುತ್ತಾರೆ. ಇದೇ ನನಗೆ ಹೆಚ್ಚು ಚಿಂತೆಗೆ ಹಚ್ಚುತ್ತದೆ ಎಂದಿದ್ದಾರೆ.

4 ನೇ ತರಗತಿಯ ವಿದ್ಯಾರ್ಥಿನಿ ಜಾನ್ವಿಯ ನಕಲಿ ಫೋಟೋಗಳು

ತನ್ನ ಎಡಿಟೆಡ್ ಫೋಟೋಗಳು ಕೆಟ್ಟ ವೆಬ್‌ಸೈಟ್‌ಗಳಲ್ಲಿ ಕಾನಿಸಿದಾಗ ತನಗಿನ್ನು ಕೇವಲ 10 ವರ್ಷ ಎಂಬುದನ್ನು ಜಾನ್ವಿ ನೆನಪಿಸಿಕೊಂಡಿದ್ದಾರೆ. 4 ನೇ ತರಗತಿಯ ವಿದ್ಯಾರ್ಥಿಯಾಗಿದ್ದ ಅವರ ಫೋಟೋಗಳು ಹಲವು ಕಡೆ ಓಡಾಡುತ್ತಿದ್ದವು. ಪಾಪರಾಜಿಗಳು ತೆಗೆದ ಚಿತ್ರಗಳು ಯಾವೂ ಮುಖಪುಟದಲ್ಲಿ ಕಾಣಿಸಿಕೊಂಡಿದ್ದವು. ಹೀಗಾಗಿ ಫೋಟೋ ನೋಡಲು ಹೋಗಿದ್ದ ಅವರಿಗೆ ಬಹುತೇಕ ಅಶ್ಲೀಲ ವೆಬ್‌ಸೈಟ್‌ನಲ್ಲಿ ನಕಲಿ ಫೋಟೋ ಕಂಡುಬಂದು ಬೆಚ್ಚಿ ಬಿದ್ದಿದ್ದರು.

ಇದರಿಂದಾಗಿ ಅವರನ್ನು ಶಾಲೆಯಲ್ಲಿ ನೋಡುವ ರೀತಿಯೇ ಬದಲಾಯಿತು ಎಂದಿದ್ದಾರೆ. ಈ ಪಾಪರಾಜಿಗಳ ಫೋಟೋಗಳಿಂದಾಗಿ ಆಕೆ ಜನಪ್ರಿಯವಾಗುವ ಬದಲು ಎಲ್ಲರಿಂದ ಬೇರೆ ಎಂಬಂತೆ ನೋಡಲಾರಂಭಿಸಿದರು. ಶಿಕ್ಷಕರು ನನ್ನನ್ನು ನೋಡುವ ರೀತಿ, ನನ್ನ ಸ್ನೇಹಿತರು ನನ್ನನ್ನು ವಿಭಿನ್ನವಾಗಿ ನೋಡತೋಡಗಿದರು. ಏನಾಗುತ್ತಿದೆ ಎಂದು ನನಗೆ ಅರ್ಥವಾಗಲಿಲ್ಲ ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

actress-janhvi-kapoor

"ಈ ಫೋಟೋಗಳಿಂದ ಹೇಗಾದರೂ ಫೇಮಸ್ ಆಗಿರುವುದರಿಂದ ನಾನು ಕೆಲಸ ಮಾಡಬೇಕಾಗಿಲ್ಲ ಎಂದು ಹಲವರು ಚುಚ್ಚಿ ಮಾತನಾಡಿದರು. ನನಗೆ ಅರ್ಥವಾಗದ ವಿಚಿತ್ರ ಕೊಂಕು ಮಾತು ಕೇಳಿ ಬರುತ್ತಿದ್ದವು. ನಾನು ಯಾವಾಗ ಶಾಲೆ ಬಿಡುತ್ತಿದ್ದೇನೆ, ನಾನು ಏಕೆ ಈ ವೆಬ್‌ಸೈಟ್‌ಗಳಲ್ಲಿ ಕಾಣಿಸಿಕೊಂಡೆ ಎಂಬ ಬಗ್ಗೆ ಪ್ರಶ್ನಿಸಲಾಗುತ್ತಿತ್ತು. ತೀರಾ ಚಿಕ್ಕ ವಯಸ್ಸಿನಲ್ಲಿಯೇ ನನ್ನನ್ನು ಜಡ್ಜ್ ಮಾಡುತ್ತಿದ್ದರು" ಎಂದು ಹೇಳಿದ್ದಾರೆ.

ಜಾನ್ವಿ ಸಿನಿ ಪಯಣ

ನಿರ್ಮಾಪಕ ಬೋನಿ ಕಪೂರ್ ಮತ್ತು ದಿವಂಗತ ನಟಿ ಶ್ರೀದೇವಿ ಅವರ ಪುತ್ರಿ ಜಾನ್ವಿ ಕಪೂರ್, 2016 ರ ಮರಾಠಿ ಚಲನಚಿತ್ರ ಸೈರಾಟ್‌ನ ಹಿಂದಿ ರಿಮೇಕ್ ಧಡಕ್ ಸಿನಿಮಾದಲ್ಲಿ ನಟ ಇಶಾನ್ ಖಟ್ಟರ್ ಜೊತೆಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು, ಈ ಸಿನಿಮಾ 2018 ರಲ್ಲಿ ಬಿಡುಗಡೆಯಾಗಿತ್ತು. 020 ರಲ್ಲಿ, ಜಾನ್ವಿ ನೆಟ್‌ಫ್ಲಿಕ್ಸ್ ಹಾರರ್ ಚಿತ್ರ ಘೋಸ್ಟ್ ಸ್ಟೋರೀಸ್‌ನಲ್ಲಿ ಜೋಯಾ ಅಖ್ತರ್ ಅವರು ನಿರ್ದೇಶಿಸಿದ್ದ ಭಾಗದಲ್ಲಿ ನಟಿಸಿದರು. ನಂತರ ಅವರು ಗುಂಜನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್ ಬಯೋಪಿಕ್‌ನಲ್ಲಿ ಗುಂಜನ್ ಸಕ್ಸೇನಾ ಪಾತ್ರವನ್ನು ಮಾಡಿದ್ದರು. ಇತ್ತೀಚೆಗೆ ಅವರ ಬವಾಲ್ (2023) ಬಿಡುಗಡೆಯಾಗಿದೆ.

More from Filmibeat

English summary
Actor Janhvi Kapoor recalls finding her morphed photos on pornographic pages.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X