ಕಡಿಮೆ ಸಮಯದಲ್ಲಿ ಅತಿಹೆಚ್ಚು ಜನಪ್ರಿಯತೆ ಪಡೆದ ಜಾಹ್ನವಿ ಕಪೂರ್ ಆಸ್ತಿ ಮೌಲ್ಯ ಎಷ್ಟು ಗೊತ್ತಾ?

ಬಾಲಿವುಡ್ ನಟಿ ಶ್ರೀದೇವಿ ಮುದ್ದಿನ ಮಗಳಾದ ಜಾಹ್ನವಿ ಕಪೂರ್ 'ದಡಕ್' ಸಿನಿಮಾ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಟನೆ ಜೊತೆಗೆ ಫ್ಯಾಷನ್ ಐಕಾನ್ ಆಗಿ ಗುರುತಿಸಿಕೊಂಡಿರುವ ಜಾಹ್ನವಿ ಕಪೂರ್ ಧರಿಸುವ ಉಡುಪುಗಳ ಅಭಿಮಾನಿಗಳ ಗಮನ ಸೆಳೆಯುತ್ತಾರೆ.

ಟ್ರೆಡಿಷನಲ್ ಉಡುಗೆಗಳಿಂದ ಹಿಡಿದು ಮಾಡ್ರನ್ ಧಿರಿಸುಗಳ ವರೆಗೆ ಜಾಹ್ನವಿ ಕಪೂರ್ ಏನೇ ಧರಿಸಿದರೂ ಸಖತ್ ಬ್ಯೂಟಿಫುಲ್ ಆಗಿ ಕಾಣಿಸುತ್ತಾರೆ. ಫ್ಯಾಷನ್ ವಿಷಯಕ್ಕೆ ಬಂದರೆ ಬಾಲಿವುಡ್ ನಲ್ಲಿ ಜಾಹ್ನವಿ ಕಪೂರ್ ಅವರನ್ನು ಮೀರಿಸುವವರೇ ಇಲ್ಲ. ಅಷ್ಟರಮಟ್ಟಿಗೆ ಫ್ಯಾಷನ್ ಐಕಾನ್ ಆಗಿ ಗುರುತಿಸಿಕೊಂಡಿದ್ದಾರೆ. ನಟನೆ ಹೊರತುಪಡಿಸಿ, ಜಾಹ್ನವಿ ಡ್ರೆಸ್ ಸೆನ್ಸ್, ಫ್ಯಾಷನ್ ಸೆನ್ಸ್ ಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಇನ್​​​ಸ್ಟಾಗ್ರಾಮ್​​​​​​​​ನಲ್ಲಿ ತಮ್ಮ ವಿಭಿನ್ನ ಉಡುಗೆಗಳ ಫೋಟೋಶೂಟ್ ಹಂಚಿಕೊಳ್ಳುವ ಜಾಹ್ನವಿ, 21.2M ಫಾಲೋವರ್ಸ್ ಹೊಂದಿದ್ದಾರೆ. ವರದಿಗಳ ಪ್ರಕಾರ, ಜಾಹ್ನವಿ ಕಪೂರ್ ನಿವ್ವಳ ಆದಾಯ 50 ಕೋಟಿ ರೂಪಾಯಿ. ಸಿನಿಮಾವೊಂದಕ್ಕೆ 5 ಕೋಟಿ ಸಂಭಾವನೆ ಈ ನಟಿ, ಒಂದು ಪ್ರಾಯೋಜಿತ ಪೋಸ್ಟ್ ಗೆ 70 ರಿಂದ 80 ಲಕ್ಷ ಚಾರ್ಜ್ ಮಾಡುತ್ತಾರೆ. ಅತ್ಯಂತ ಕಡಿಮೆ ಸಮಯದಲ್ಲಿ ಹೆಚ್ಚು ಖ್ಯಾತಿ ಗಳಿಸಿರುವ ಜಾಹ್ನವಿ ಕಪೂರ್ ಬಳಿ ಯಾವೆಲ್ಲಾ ದುಬಾರಿ ವಸ್ತುಗಳಿವೆ ಎಂಬ ಮಾಹಿತಿ ಇಲ್ಲಿದೆ.

actress janhvi kapoors net worth and properties detail

ಬ್ರ್ಯಾಂಡ್ ಅಂಬಾಸಿಡರ್

ಹಲವು ಕಂಪನಿಗಳ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ಜಾಹ್ನವಿ ಕಪೂರ್, ಇದರಿಂದ 2.5 ರಿಂದ 3 ಕೋಟಿ ಸಂಪಾದಿಸುತ್ತಾರೆ. ಒಂದು ಕಂಪನಿಯ ಅಂಬಾಸಿಡರ್ ಆಗಲು 53 ಲಕ್ಷದಿಂದ 1 ಕೋಟಿಯವರೆಗೆ ಚಾರ್ಜ್ ಮಾಡುತ್ತಾರೆ. ಜಾಹ್ನವಿ ನೈಕಾ, ಮಿಂಟ್ ಚಾಕೋನ್ ಮತ್ತು ರಿಲಯನ್ಸ್ ಟ್ರೆಂಡ್ಸ್ ಸೇರಿದಂತೆ ಹಲವು ಜನಪ್ರಿಯ ಕಂಪನಿಗಳ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಇವರು ಬೆನೆಟನ್ ಸುಗಂಧದ್ರವ್ಯ ಕಂಪನಿಯ ಜಾಗತಿಕ ಬ್ರ್ಯಾಂಡ್ ಅಂಬಾಸಿಡರ್ ಕೂಡ ಹೌದು.

ದುಬಾರಿ ಮನೆ ಮತ್ತು ಕಾರು

ಜಾಹ್ನವಿ ಕಪೂರ್ ಕಪೂರ್ ಮುಂಬೈನ ಜುಹುನಲ್ಲಿ 39 ಕೋಟಿ ರೂಪಾಯಿ ಬೆಲೆಬಾಳುವ ದುಬಾರಿ ಅಪಾರ್ಟ್ಮೆಂಟ್ ಖರೀದಿಸಿದ್ದಾರೆ. ಈ ಮನೆ 3,456 ಚದರ ಅಡಿ ಇದೆ. ಇದರ ಜೊತೆಗೆ 67.15 ರೂಪಾಯಿ ಬೆಲೆಬಾಳುವ ಮರ್ಸಿಡಿಸ್ ಗ್ಲೆ, 82.9 ರೂಪಾಯಿ ಬೆಲೆಬಾಳುವ ಬಿಎಂಡಬ್ಲ್ಯೂ X5, 88.28 ರೂಪಾಯಿ ಬೆಲೆಬಾಳುವ ಮರ್ಸಿಡಿಸ್ ಬೆಂಜ್ ಎಸ್ ಕ್ಲಾಸ್ ಮತ್ತು 1.98 ಕೋಟಿ ಬೆಲೆಬಾಳುವ ಮರ್ಸಿಡಿಸ್-ಮೇಬ್ಯಾಕ್ S560 ಕಾರುಗಳನ್ನು ಹೊಂದಿದ್ದಾರೆ.

actress janhvi kapoors net worth and properties detail

ಸೌತ್ ಇಂಡಸ್ಟ್ರಿಗೆ ಜಾಹ್ನವಿ ಎಂಟ್ರಿ

ಜೂನಿಯರ್ ಎನ್ ಟಿ ಆರ್ 30ನೇ ಸಿನಿಮಾಗೆ ಜಾಹ್ನವಿ ಕಪೂರ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಕೊರಟಾಲ ಶಿವ ನಿದೇಶನದ ಈ ಸಿನಿಮಾಗೆ ಶ್ರೀದೇವಿ ಪುತ್ರಿ ಹೀರೋಯಿನ್ ಆಗಿದ್ದಾರೆ. ಈ ಸಿನಿಮಾದ ಫಸ್ಟ್ ಲುಕ್ ಇಂದು ಬಿಡುಗಡೆಯಾಗಿದ್ದು, ಈ ಮೂಲಕ ಜಾಹ್ನವಿ ಸೌತ್ ಸಿನಿಮಾ ಇಂಡಸ್ಟ್ರಿಗೆ ಕಾಲಿಡುತ್ತಿದ್ದಾರೆ.

More from Filmibeat

English summary
actress janhvi kapoor's net worth and properties detail ,Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X