ಬಾಯ್‌ಫ್ರೆಂಡ್‌ ಜೊತೆಗೆ ಮತ್ತೆ ಟೆಂಪಲ್ ರನ್: ತಿರುಪತಿಯಲ್ಲಿ ನಟಿ ಜಾನ್ವಿ ಕಪೂರ್

ನಟಿ ಜಾನ್ವಿ ಕಪೂರ್ ಅವರಿಗೆ ದೇವರ ಮೇಲೆ ಅತಿಯಾದ ಭಕ್ತಿ ಇರುವುದು ಪದೇ ಪದೇ ಬೆಳಕಿಗೆ ಬರುತ್ತಲೇ ಇರುತ್ತದೆ. ತಿಂಗಳಲ್ಲಿ ಒಂದು ಬಾರಿಯಾದರೂ ತಿರುಪತಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಜೊತೆಗೆ ಹಲವು ದೇವಾಲಯಗಳಲ್ಲಿಯೂ ಅವರು ಪೂಜೆ ಮಾಡಿಸುತ್ತಲೇ ಇರುತ್ತಾರೆ. ಈಗ ಅವರ ಜೊತೆಗೆ ಅವರ ಬಾಯ್‌ಫ್ರೆಂಡ್‌ ಎಂದು ಹೇಳಲಾಗುತ್ತಿರುವ ಉದ್ಯಮಿ ಶಿಖರ್ ಪಹಾರಿಯಾ ಕೂಡ ಜೋಡಿಯಾಗುತ್ತಿದ್ದಾರೆ.

ಶುಕ್ರವಾರ (ಜನವರಿ 05)ರ ಬೆಳಗ್ಗೆ ತಿರುಪತಿ ಬಾಲಾಜಿ ದೇವಸ್ಥಾನದಲ್ಲಿ ನಟಿ ಜಾಹ್ನವಿ ಕಪೂರ್ ಕಾಣಿಸಿಕೊಂಡಿದ್ದಾರೆ. ಎಎನ್‌ಐ ಈ ವಿಡಿಯೋ ಹಂಚಿಕೊಂಡಿದ್ದಾರೆ. ಜಾನ್ವಿ ಕಪೂರ್ ಜೊತೆಗೆ ಉದ್ಯಮಿ ಶಿಖರ್ ಪಹಾರಿಯಾ ಮತ್ತು ಟಾಲಿವುಡ್ ನಟಿ ಮಹೇಶ್ವರಿ ಕೂಡ ತಿರುಪತಿ ತಿರುಮಲ ಬಾಲಾಜಿಯ ಆಶೀರ್ವಾದ ಪಡೆದಿದ್ದಾರೆ.

Actress Janhvi Kapoor visits Tirupati Balaji temple with boyfriend Shikhar Pahariya

ತಿರುಪತಿಯಲ್ಲಿ ನಟಿ ಜಾನ್ವಿ ಕಪೂರ್

ಎಎನ್‌ಐ ಹಂಚಿಕೊಂಡಿರುವ ವಿಡಿಯೋದಲ್ಲಿ ಜಾನ್ವಿ ಕಪೂರ್, ಶಿಖರ್ ಪಹಾರಿಯಾ ಮತ್ತು ನಟಿ ಮಹೇಶ್ವರಿ ದೇವಸ್ಥಾನದ ಕಡೆಗೆ ನಡೆದುಕೊಂಡು ಹೋಗುತ್ತಿರುವುದನ್ನು ನೋಡಬಹುದು. ಈ ವೇಳೆ ನಟಿ ಗೋಲ್ಡ್ ಕಲರ್ ಸೀರೆ ಮತ್ತು ದೊಡ್ಡ ಗೋಲ್ಡನ್ ಬಾರ್ಡರ್ ಇರುವ ಸೀರೆ ಧರಿಸಿದ್ದಾರೆ. ಶಿಖರ್ ಪಹಾರಿಯಾ ಬಿಳಿ ಧೋತಿ ಮತ್ತು ಶಲ್ಯಾ ಧರಿಸಿದ್ದಾರೆ.

ದೇವಸ್ಥಾನದ ಭೇಟಿ ಬಳಿಕ ನಟಿ ಜಾನ್ವಿ ಕಪೂರ್ ಕೂಡ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಸೀರೆಯಲ್ಲಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಇದರ ಜೊತೆಗೆ ತಿರುಪತಿಗೆ ಹೋಗಿ ಬಂದ ಖುಷಿಯನ್ನು ಅವರ ಕ್ಯಾಪ್ಷನ್ ಮೂಲಕ ಹೊರಹಾಕಿದ್ದಾರೆ. "ಈಗ 2024 ಪ್ರಾರಂಭವಾದಂತೆ ಭಾಸವಾಗುತ್ತಿದೆ... ಗೋವಿಂದಾ...ಗೋವಿಂದಾ" ಎಂದು ಬರೆದಿದ್ದಾರೆ.

ಜಾನ್ವು ಕಪೂರ್ ಮತ್ತು ಶಿಖರ್ ಪಹಾರಿಯಾ

ಜಾನ್ವಿ ಕಪೂರ್ ಅಥವಾ ಶಿಖರ್ ಪಹಾರಿಯಾ ತಮ್ಮ ಸಂಬಂಧವನ್ನು ಇಲ್ಲಿಯವರೆಗೂ ಖಚಿತಪಡಿಸಿಲ್ಲ ಅಥವಾ ಸಂಬಂಧದ ವರದಿಗಳನ್ನು ನಿರಾಕರಿಸಿಲ್ಲ. ಆದರೆ, ಇಬ್ಬರೂ ಹಲವಾರು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಶಿಖರ್ ಪಹಾರಿಯಾ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ. ಜೊತೆಗೆ ವಾಣಿಜ್ಯೋದ್ಯಮಿ, ಪೋಲೋ ಆಟಗಾರರಾಗಿ ಗುರುತಿಸಿಕೊಂಡಿದ್ದಾರೆ.

ಇನ್ನು, ಕಾಫಿ ವಿತ್ ಕರಣ್ ಇತ್ತೀಚಿನ ಸಂಚಿಕೆಯಲ್ಲಿ ಜಾನ್ವಿ ಕಪೂರ್, ಶಿಖರ್ ಪಹಾರಿಯಾ ಬಗ್ಗೆ ಮಾತನಾಡಿದ್ದಾರೆ. "ಅವರು (ಶಿಖರ್ ಪಹಾರಿಯಾ) ನನಗೆ ಮಾತ್ರವಲ್ಲ, ಖುಷಿ ಕಪೂರ್, ತಂದೆ ಮತ್ತು ನಮ್ಮ ಕುಟುಂಬದ ಎಲ್ಲರಿಗೂ ಪರಿಚಯ. ಅವರು ಮೊದಲಿನಿಂದಲೂ ಎಲ್ಲರಿಗೂ ಸ್ನೇಹಿತನಾಗಿ ಇದ್ದಾರೆ. ಅವರು ಯಾವುದನ್ನು ಬಯಸುತ್ತಿದ್ದಾರೆ ಎಂದು ನನಗೆ ಅನ್ನಿಸಿಲ್ಲ. ನಿಸ್ವಾರ್ಥವಾಗಿ, ಗೌರವಯುತವಾಗಿ ನಮ್ಮೊಂದಿಗೆ ಇದ್ದಾರೆ. ಇಂತಹ ವ್ಯಕ್ತಿಯನ್ನು ನಾನು ಎಲ್ಲೂ ನೋಡಿಲ್ಲ" ಎಂದು ಹೇಳಿದ್ದರು.

ಜಾನ್ವಿ ಕಪೂರ್

ಕೆಲಸದ ವಿಷಯದಲ್ಲಿ ನಟಿ ಜಾನ್ವಿ ಕಪೂರ್ , ನಟ ರಾಜ್‌ಕುಮಾರ್ ರಾವ್ ಅವರೊಂದಿಗೆ ಮಿಸ್ಟರ್ ಅಂಡ್ ಮಿಸಸ್ ಮಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಧರ್ಮ ಪ್ರೊಡಕ್ಷನ್ಸ್ ನಿರ್ಮಿಸಿರುವ ಈ ಸಿನಿಮಾ 19 ನೇ ಏಪ್ರಿಲ್ 2024 ರಂದು ಬಿಡುಗಡೆಯಾಗಲಿದೆ. ಮಿಸ್ಟರ್ ಅಂಡ್ ಮಿಸಸ್ ಮಾಹಿ ಒಂದು ಕ್ರೀಡಾ ಸಿನಿಮಾ.

ಈ ಚಿತ್ರವು 'ರೂಹಿ' ಸಿನಿಮಾ ನಂತರ ಜಾನ್ವಿ ಕಪೂರ್ ಮತ್ತು ರಾಜ್‌ಕುಮಾರ್ ರಾವ್ ಅವರ ಎರಡನೇ ಕಾಂಬಿನೇಷನ್‌ನ ಸಿನಿಮಾ. 'ಗುಂಜನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್' ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ ಶರಣ್ ಶರ್ಮಾ 'ಮಿಸ್ಟರ್ ಅಂಡ್ ಮಿಸಸ್ ಮಾಹಿ' ಚಿತ್ರವನ್ನು ನಿರ್ದೇಶಿಸಿದ್ದಾರೆ.

ಇದರ ಜೊತೆಗೆ ನಟಿ ಜಾನ್ವಿ ಕಪೂರ್ ಜ್ಯೂನಿಯರ್ ಎನ್‌ಟಿಆರ್ ಮತ್ತು ಸೈಫ್ ಅಲಿ ಖಾನ್ ಜೊತೆಗೆ 'ದೇವರ' ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ.

More from Filmibeat

English summary
Janhvi Kapoor visits Tirupati Balaji temple with Shikhar Pahariya
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X