ಕ್ಯಾಮರಾ ಮುಂದೆ ರಿಯಲ್ ಆಗಿ ಮೂರ್ತ ವಿಸರ್ಜನೆ ಮಾಡುವುದಕ್ಕೆ ಹೇಳಿದ್ದ ನಿರ್ದೇಶಕ; ಆ ನಟಿ ಒಪ್ಪಿದ್ದೇಕೆ?
ಒಂದು ಕಾಲದಲ್ಲಿ ಚಿತ್ರರಂಗದ ಬಗ್ಗೆ ಮಾತಾಡುವುದಕ್ಕೆ ಹಿಂದೆ ಮುಂದೆ ನೋಡುತ್ತಿದ್ದರು. ನಾಯಕಿಯರು ತಮಗೆ ಚಿತ್ರತಂಡದಿಂದ ಏನೇ ತೊಂದರೆಯಾದರೂ ಸುಮ್ಮನಿದ್ದು ಬಿಡುತ್ತಿದ್ದರು. ಆದರೆ, ಇತ್ತೀಚೆಗೆ ನಾಯಕಿಯರು ಬದಲಾಗಿದ್ದಾರೆ. ಧೈರ್ಯವಾಗಿ ಮುಂದೆ ಬಂದು ತಮಗಾದ ಕೆಟ್ಟ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅದರಲ್ಲೂ ಕಾಸ್ಟಿಂಗ್ ಕೌಚ್ ಅಂತಹ ಕೆಟ್ಟ ಅನುಭವಗಳ ಬಗ್ಗೆ ಓಪನ್ ಆಗಿ ಮಾತಾಡುತ್ತಿದ್ದಾರೆ.
ಮೀಟು ಅಂತಹ ಪ್ರಕರಣದಲ್ಲಿ ಕೆಲವು ನಟಿಯರು ಮುಂದೆ ಬಂದು ತಮಗಾದ ಅನುಭವವನ್ನು ಹಂಚಿಕೊಂಡಿದ್ದರು. ಅದು ದೇಶಾದ್ಯಂತ ದೊಡ್ಡ ಸಂಚಲವನ್ನೇ ಸೃಷ್ಟಿಸಿತ್ತು. ಇಲ್ಲಿಂದ ನಟಿಯರು ಓಪನ್ ಆಗಿ ನಿರ್ಮಾಪಕರು, ನಿರ್ದೇಶಕರು ಸೇರಿದಂತೆ ತಂತ್ರಜ್ಞರಿಂದ ಆದ ಅನುಭವವನ್ನು ಹೊರ ಹಾಕಿದ್ದರು. ಅಷ್ಟೇ ಯಾಕೆ ಇತ್ತೀಚೆಗೆ ಹೇಮಾ ಕಮಿಟಿ ವರದಿ ಮಲಯಾಳಂನಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು.

ಆದರೆ, ಇತ್ತೀಚೆಗೆ ಜಾನಕಿ ಬೋಡಿವಾಲಾ ಎಂಬ ನಟಿ ಕೂಡ ತಮಗಾದ ಅನುಭವವನ್ನು ಹಂಚಿಕೊಂಡಿದ್ದರು. ಬಾಲಿವುಡ್‌ನ ಶೈತಾನ್ ಎಂಬ ಸಿನಿಮಾದ ಚಿತ್ರೀಕರಣ ಮಾಡುವ ವೇಳೆ ನಿರ್ದೇಶಕರು ಹೇಳಿದ ಮಾತೊಂದನ್ನು ಹಂಚಿಕೊಂಡಿದ್ದರು. ಅಜಯ್ ದೇವಗನ್, ಆ ಮಾಧವನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಈ ಸಿನಿಮಾದಲ್ಲಿ ನಿರ್ದೇಶಕರು ರಿಯಲ್ ಆಗಿ ಮೂತ್ರ ವಿಸರ್ಜನೆ ಮಾಡುವಂತೆ ಹೇಳಿದ್ದ ಕ್ಷಣವನ್ನು ನೆನಪಿಸಿಕೊಂಡಿದ್ದರು. ಅಸಲಿಗೆ ಆ ದೃಶ್ಯ ಯಾವುದು? ನಿರ್ದೇಶಕರ ಬಗ್ಗೆ ನಟಿ ಹೇಳಿದ್ದೇನು?
ಸಿನಿಮಾ ಅನ್ನೋದು ಕ್ರಿಯೇಟಿವ್ ಫೀಲ್ಡ್. ಆದರೆ, ಕೆಲವೊಮ್ಮೆ ಕ್ರಿಯೇಟಿವಿ ಅತಿಯಾಗಿ ಬಿಡುತ್ತೆ ಅಂತ ಅನಿಸಿಬಿಡುತ್ತೆ. ಕೆಲವೊಮ್ಮೆ ಸಿನಿಮಾವನ್ನೇ ಫ್ಯಾಷನ್ ಆಗಿ ಇಟ್ಟಕೊಂಡವರು ವಿಚಿತ್ರ ಪ್ರಯತ್ನಕ್ಕೆ ಮುಂದಾಗುತ್ತಾರೆ. 'ಶೈತಾನ್' ಸಿನಿಮಾ ಮಾಡುವಾಗಲೂ ಕೂಡ ನಿರ್ದೇಶಕರು ನಟಿ ಮೂತ್ರ ವಿಸರ್ಜನೆ ಮಾಡುವ ದೃಶ್ಯವನ್ನು ನೈಜವಾಗಿ ಚಿತ್ರೀಕರಿಸುವ ಪ್ರಯತ್ನಕ್ಕೆ ಮುಂದಾಗಿದ್ದರು. ಅದನ್ನು ನಟಿ ಜಾನಕಿ ಬೋಡಿವಾಲಾಗೆ ಹೇಳಿದಾಗ ತನ್ನ ಪ್ರತಿಕ್ರಿಯೆ ಹೇಗಿತ್ತು? ಅನ್ನೋದನ್ನು ಇತ್ತೀಚೆಗೆ ಫಿಲ್ಮ್‌ಫೇರ್‌ಗೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.
ಶೈತಾನ್ ಸಿನಿಮಾ ನಿರ್ದೇಶಕ ಕೃಷ್ಣದೇವ್ ಯಾಗ್ನಿಕ್ ಒಮ್ಮೆ ನಟಿ ಜಾನಕಿ ಬೋಡಿವಾಲಾ ಮೂತ್ರ ವಿಸರ್ಜನೆ ಮಾಡುವ ಸನ್ನಿವೇಶವನ್ನು ರಿಯಲ್ ಆಗಿ ಮಾಡುವುದಕ್ಕೆ ಸಾಧ್ಯವೇ ಎಂದು ಹೇಳಿದ್ದರು. ಅದು ಸೂಪರ್ ಹಿಟ್ 'ಶೈತಾನ್' ಸಿನಿಮಾದ ಪ್ರಮುಖ ದೃಶ್ಯವಾಗಿತ್ತು. ನಿರ್ದೇಶಕರು ಹೇಳಿದ ಕೂಡಲೇ ಈ ನಟಿ ಕೂಡ ಖುಷಿಯಿಂದಲೇ ಒಪ್ಪಿಕೊಂಡಿದ್ದರು. ಅದ್ಯಾಕೆ ಅನ್ನೋದನ್ನು ರಿವೀಲ್ ಮಾಡಿದ್ದಾರೆ.
"ನಾನು ಗುಜರಾತಿ ವರ್ಷನ್‌ನಲ್ಲಿ ನಟಿಸಿದ್ದೆ. ಅದೇ ಸೀನ್ ಅನ್ನು ಶೈತಾನ್ ಸಿನಿಮಾದಲ್ಲಿ ಮಾಡಬೇಕಿತ್ತು. ನಾನು ವರ್ಕ್‌ಶಾಪ್ ಮಾಡುವಾಗ ನಿರ್ದೇಶಕ ಈ ದೃಶ್ಯವನ್ನು ರಿಯಲ್ ಆಗಿ ಮಾಡುವುದಕ್ಕೆ ಸಾಧ್ಯವೇ ಎಂದು ಕೇಳಿದ್ದರು. ಅದು ಮೂತ್ರ ವಿಸರ್ಜನೆ ಮಾಡುವ ಸೀನ್. ಅದು ಸಿನಿಮಾದ ಮೇಲೆ ದೊಡ್ಡ ಪರಿಣಾಮ ಬೀರುತ್ತೆ ಎಂದಿದ್ದರು. ನನಗೆ ತುಂಬಾನೇ ಖುಷಿಯಾಗಿತ್ತು. ಒಬ್ಬ ನಟಿಯಾಗಿ ನನಗೆ ಯಾರೂ ಮಾಡದೇ ಇರುವಂತಹ ದೃಶ್ಯದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು." ಎಂದು ಸಂದರ್ಶನದ ವೇಳೆ ಹೇಳಿಕೊಂಡಿದ್ದಾರೆ.
ಈ ಸೀನ್ ಮಾಡುವುದಕ್ಕೆ ಮುಂದೆ ಬಂದಿದ್ದೇನೋ ನಿಜ. ಆದರೆ, ಸೆಟ್‌ನಲ್ಲಿ ದೃಶ್ಯವನ್ನು ಚಿತ್ರೀಕರಿಸುವಾಗ ಬಹಳ ಕಷ್ಟ ಆಗಿತ್ತಂತೆ. ಹಲವು ರಿಟೇಕ್‌ಗಳನ್ನು ತೆಗೆದುಕೊಂಡಿದ್ದರು. ಹೀಗಾಗಿ ದೃಶ್ಯವನ್ನು ಚಿತ್ರೀಕರಿಸುವುದು ಕಷ್ಟಕರವಾಗಿತ್ತು. ರಿಯಲ್ ಸೀನ್‌ನಲ್ಲಿ ನಟಿಸುವುದಕ್ಕೆ ಸಾಧ್ಯವಾಗದೇ ಹೋದರೂ, ಅಂತಹ ದೃಶ್ಯದಲ್ಲಿ ನಟಿಸಿದ್ದು ಖುಷಿಕೊಟ್ಟಿದೆಯಂತೆ. " ನಾವು ಅಂದುಕೊಂಡಿದ್ದು ಸೆಟ್‌ನಲ್ಲಿ ಪ್ರಾಕ್ಟಿಕಲ್ ಆಗಿ ಸಾಧ್ಯವಿಲ್ಲ ಎಂದು ಎನಿಸಿತ್ತು. ಹಾಗಾಗಿ ಬೇರೆ ದಾರಿಯನ್ನು ಹುಡುಕಿಕೊಂಡೆವು. ರಿಯಲ್ ಲೈಫ್‌ನಲ್ಲಿ ಮಾಡುವುದಕ್ಕೆ ಸಾಧ್ಯವಿಲ್ಲದ ದೃಶ್ಯವನ್ನು ನಟಿಸಿದ್ದಕ್ಕೆ ಖುಷಿ ಇತ್ತು. ಆ ಕಾರಣಕ್ಕಾಗಿಯೇ ಸಿನಿಮಾವನ್ನು ಒಪ್ಪಿಕೊಂಡೇ ಎಂದಿದ್ದಾರೆ.


Click it and Unblock the Notifications











